3ನೇ ಮಹಾಯುದ್ಧ: ಕಳೆದುಕೊಂಡ ಜಾಗ ವಾಪಸ್ ಪಡೆದ ರಷ್ಯಾ!

ಉಕ್ರೇನ್: ರಷ್ಯಾ ಸೇನೆ ಮತ್ತೆ ಸನ್ನದ್ಧವಾಗಿ ಉಕ್ರೇನ್ ಅಖಾಡದಲ್ಲಿ ಅಬ್ಬರ ಮುಂದುವರಿಸಿದೆ. ಅದ್ರಲ್ಲೂ ಈ ಅಮೆರಿಕ ನಾಯಕರು ಉಕ್ರೇನ್‌ಗೆ ಸಹಾಯ ಮಾಡುವ ನೆಪದಲ್ಲಿ ರಷ್ಯಾ ವಿರುದ್ಧ ಕುತಂತ್ರ ನಡೆಸಿದ್ದಾರೆ ಎಂಬ ಆರೋಪದ ನಂತರ ರಷ್ಯಾ ಸೇನೆ ಇನ್ನಷ್ಟು ಉಗ್ರವಾಗಿದೆ. ಹೀಗಾಗಿ ಮತ್ತೆ ತಾನು ಕಳೆದುಕೊಂಡಿದ್ದ ಜಾಗವನ್ನ ಉಕ್ರೇನ್ ಪಡೆಗಳಿಂದ ವಶಕ್ಕೆ ಪಡೆದು, 3ನೇ ಮಹಾಯುದ್ಧಕ್ಕೆ ರಣಕಹಳೆ ಮೊಳಗಿಸಿದೆ.

ಅಮೆರಿಕ & ನ್ಯಾಟೋ ಪಡೆಗಳ ಬೆಂಬಲದಿಂದಾಗಿ ರಷ್ಯಾ ವಿರುದ್ಧ ಉಕ್ರೇನ್ ವಿನಾಶಕಾರಿ ರೀತಿಯಲ್ಲಿ ವರ್ತನೆ ತೋರುತ್ತಿರುವ ಆರೋಪ ಇದೆ. ಈ ಕಾರಣಕ್ಕೆ ರಷ್ಯಾ ವಶದಲ್ಲಿದ್ದ ಬಖ್‌ಮತ್ ನಗರದ ಮೇಲೆ ಉಕ್ರೇನ್ ರಂಜಕ ಬಾಂಬ್ ಎಸೆದಿದೆ ಎಂಬ ಆರೋಪ ಕೇಳಿಬಂದಿತ್ತು. ಇದು ರಷ್ಯಾ ಅಧ್ಯಕ್ಷ ಪುಟಿನ್ ಪಿತ್ತ ನೆತ್ತಿಗೇರಿಸಿತ್ತು, ನಂತರ ಬಖ್‌ಮತ್ ನಗರವನ್ನ ವಶಕ್ಕೆ ಪಡೆದಿತ್ತು ಉಕ್ರೇನ್. ಆದರೆ ರಷ್ಯಾ ಸೇನೆ ಈಗ ಕಂಬ್ಯಾಕ್ ಮಾಡಿ, ಬಖ್‌ಮತ್ ನಗರವನ್ನ ಮರಳಿ ತನ್ನ ತೆಕ್ಕೆಗೆ ಪಡೆದು ಸಂಭ್ರಮಿಸಿದೆ.

Russian military announced that they regained Bakhmut city from Ukraine troops

ಮನಸ್ಸಿಗೆ ಬಂದಂತೆ ಉಕ್ರೇನ್ ದಾಳಿ?

ಉಕ್ರೇನ್ ರಂಜಕದ ಬಾಂಬ್ ಎಸೆದಿರುವುದು ಮಾತ್ರವಲ್ಲ, ಮನಸ್ಸಿಗೆ ತೋಚಿದ್ದನ್ನ ಮಾಡುತ್ತಿದೆ ಎಂಬ ಆರೋಪ ರಷ್ಯಾ ಸೇನೆಯದ್ದು. ಈ ನಡುವೆ ರಷ್ಯಾ ಅಧ್ಯಕ್ಷ ಪುಟಿನ್‌ ಸರ್ಕಾರಿ ನಿವಾಸದ ಮೇಲೆ ನೇರವಾಗಿ ಬಾಂಬ್ ಹಾಕಿದ ಆರೋಪ ಉಕ್ರೇನ್ ವಿರುದ್ಧ ಕೇಳಿಬಂದಿತ್ತು. ಮಾನವ ರಹಿತ ಡ್ರೋನ್‌ಗಳ ಸಹಾಯದಿಂದ ದಾಳಿ ನಡೆದ ನಂತರ ಇಡೀ ಜಗತ್ತು ಚಿಂತೆ ಪಡುವಂತಾಗಿತ್ತು. ಇಷ್ಟೆಲ್ಲದರ ನಡುವೆ ಗುಟ್ಟಾಗಿ ರಣತಂತ್ರ ರೂಪಿಸಿದ್ದ ರಷ್ಯಾ ಸೇನೆ, ಇದೀಗ ಮತ್ತೆ ತಾನು ಕಳೆದುಕೊಂಡಿದ್ದ ಜಾಗವನ್ನ ವಶಕ್ಕೆ ಪಡೆದಿದೆ.

ಅಮೆರಿಕದ ಸಹಾಯ, ಉಕ್ರೇನ್‌ಗೆ ಹುಮ್ಮಸ್ಸು!

ರಷ್ಯಾ ವಿರುದ್ಧ ಹೋರಾಡಲು ಅಮೆರಿಕ ಸೇರಿದಂತೆ ನ್ಯಾಟೋ ಪಡೆಗಳು ನೀಡುತ್ತಿರುವ ಸಹಾಯವೇ ಉಕ್ರೇನ್ ಸೇನೆ ಕೃತ್ಯಗಳಿಗೆ ಕಾರಣ ಎಂಬ ಆರೋಪವೂ ಕೇಳಿಬಂದಿದೆ. ಜೊತೆಗೆ ರಷ್ಯಾದ ಗಡಿಯಲ್ಲಿ ಉಕ್ರೇನ್ ಸೇನೆ ಭೀಕರ ದಾಳಿ ನಡೆಸುತ್ತಿದ್ದು, ದಿನದಿಂದ ದಿನಕ್ಕೆ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಷ್ಯಾ ಸೇನೆ ಪಣತೊಟ್ಟಿದೆ. ಹೀಗೆ ಇಬ್ಬರ ಜಗಳದಲ್ಲಿ ಅಮಾಯಕರ ನೆಮ್ಮದಿ ಹಾಳಾಗಿ ಹೋಗುತ್ತಿದೆ. ಉಕ್ರೇನ್ & ರಷ್ಯಾ ಗಡಿಯಲ್ಲಿ ವಾಸ ಮಾಡುವ ಜನರ ಜೀವಕ್ಕೆ ಗ್ಯಾರಂಟಿಯೇ ಇಲ್ಲದಂತಾಗಿದೆ.

Russian military announced that they regained Bakhmut city from Ukraine troops

ಉಕ್ರೇನ್‌ಗೆ ವಿನಾಶಕಾರಿ ವೆಪನ್ಸ್ ದಾನ?

ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್‌ಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದೆ ಅಮೆರಿಕ. ದಾನ ಕೊಡುತ್ತಿರುವ ಶಸ್ತ್ರಾಸ್ತ್ರಗಳಲ್ಲಿ, ಆಕಾಶದಿಂದಲೇ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಹೈಡ್ರಾ-70 ರಾಕೆಟ್‌ ಕೂಡ ಸೇರಿವೆ. ಜೊತೆಗೆ ಮಿಸೈಲ್, ಬಾಂಬ್, ಮದ್ದುಗುಂಡು ಹೀಗೆ ಲೆಕ್ಕವಿಲ್ಲದಷ್ಟು ಶಸ್ತ್ರಾಸ್ತ್ರ ಅಮೆರಿಕದಿಂದ ಉಕ್ರೇನ್ ಉಗ್ರಾಣ ಸೇರುತ್ತಿದೆ. ಜೊತೆಗೆ ಮಿಸೈಲ್ ಡಿಫೆನ್ಸ್ ಸಿಸ್ಟಮ್ ಕೂಡ ಬಿಟ್ಟಿಯಾಗಿ ಉಕ್ರೇನ್ ಪಾಲಾಗಿದೆ.

ಭೀಕರ ಸ್ವರೂಪದ ಯುದ್ಧ ನಿಂತಿಲ್ಲ

ರಷ್ಯಾ & ಉಕ್ರೇನ್ ವಾರ್ ಶುರುವಾಗಿ 453 ದಿನಗಳೇ ಉರುಳಿದೆ, ಆದ್ರೂ ಯುದ್ಧ ನಿಲ್ಲುತ್ತಿಲ್ಲ. ಬದಲಾಗಿ ಎರಡೂ ದೇಶಗಳ ನಡುವೆ ದ್ವೇಷ ಹೆಚ್ಚಾಗುತ್ತಲೇ ಬಂದಿದೆ. ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧ (Russia Ukraine War) ಮತ್ತಷ್ಟು ವಿನಾಶಕಾರಿ ಆಗುತ್ತಿದೆ. ಇಷ್ಟುದಿನ ಉಕ್ರೇನ್ ಮೇಲೆ ಬಹುತೇಕ ಹಿಡಿತ ಸಾಧಿಸಿತ್ತು ರಷ್ಯಾ ಸೇನೆ, ಆದರೆ ಅಮೆರಿಕ ತನ್ನ ಬಳಿ ಇರುವ ಅತ್ಯಂತ ವಿನಾಶಕಾರಿ ಅಸ್ತ್ರ ಉಕ್ರೇನ್‌ಗೆ ಉಡುಗೊರೆ ರೂಪದಲ್ಲಿ ಕೊಟ್ಟಿತ್ತು. ನಂತರ ರಷ್ಯಾಗೆ ಭಾರಿ ತೊಂದರೆ ಆಗುತ್ತಿದೆ.

Russian military announced that they regained Bakhmut city from Ukraine troops

ಒಟ್ನಲ್ಲಿ ರಷ್ಯಾ ಮತ್ತು ಉಕ್ರೇನ್ ವಾರ್ ಇನ್ನೊಂದು ತಿರುವು ಪಡೆಯುತ್ತಿದೆ. ರಷ್ಯಾ ತಾನು ಉಕ್ರೇನ್ ನೆಲದ ಮೇಲೆ ಸಾಧಿಸಿರುವ ಪ್ರಭುತ್ವ ಬಿಟ್ಟುಕೊಡಲು ಸಿದ್ಧವಾಗಿಲ್ಲ. ಇದೇ ಕಾರಣಕ್ಕೆ ಎರಡೂ ರಾಷ್ಟ್ರಗಳ ನಡುವಿನ ಈ ಯುದ್ಧ ಉಗ್ರ ಸ್ವರೂಪ ಪಡೆಯುತ್ತಿದೆ. ಮುಂದಿನ ದಿನಗಳಲ್ಲಿ ಹಿಂಸಾಚಾರ ನಿಲ್ಲುತ್ತಾ? ಇಲ್ಲ ಇದೇ ರೀತಿ ಎರಡೂ ರಾಷ್ಟ್ರಗಳು ಕಚ್ಚಾಡಿಕೊಂಡು ನಾಶವಾಗುತ್ತವಾ? ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+