Get Updates
Get notified of breaking news, exclusive insights, and must-see stories!

ಉಕ್ರೇನ್‌ನಲ್ಲಿ ಹರಿದ ನಾಗರಿಕರ ನೆತ್ತರು; 39 ಜನರ ಹತ್ಯೆ ಬಗ್ಗೆ ರಷ್ಯಾ ಹೇಳುವುದೇನು?

ಕೀವ್, ಏಪ್ರಿಲ್ 8: ಉಕ್ರೇನ್ ಸೇನಾ ನೆಲೆಗಳನ್ನಷ್ಟೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುವುದು ಎಂದಿದ್ದ ರಷ್ಯಾ ತನ್ನ ವರಸೆ ಬದಲಿಸಿದೆ. ಅಮಾಯಕ ನಾಗರಿಕರ ಮೇಲಿನ ದಾಳಿಗೆ ಸಾಲು ಸಾಲು ಸಾಕ್ಷ್ಯಗಳು ಸಿಗುತ್ತಿದ್ದು, ಜಾಗತಿಕ ಮಾಧ್ಯಮಗಳಲ್ಲಿ ರಷ್ಯಾ ಕ್ರೌರ್ಯದ ಕುರಿತು ವರದಿಗಳು ಪ್ರಸಾರವಾಗುತ್ತಿವೆ.

ಉಕ್ರೇನ್ ರಾಜಧಾನಿ ಕೀವ್ ನಗರದಿಂದ 30 ಕಿಲೋ ಮೀಟರ್ ದೂರದ ಬುಚಾ ಪ್ರದೇಶದಲ್ಲಿ ರಷ್ಯಾ ದಾಳಿಗೆ 410ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿರುವ ಬಗ್ಗೆ ವರದಿಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಉಕ್ರೇನ್ ರೈಲ್ವೆ ನಿಲ್ದಾಣಕ್ಕೆ ರಷ್ಯಾದ ರಾಕೆಟ್ ಅಪ್ಪಳಿಸಿ 39ಕ್ಕೂ ಹೆಚ್ಚು ಜೀವಗಳನ್ನು ತೆಗೆದಿದೆ ಎಂದು ಹೇಳಲಾಗುತ್ತಿದೆ.

ಪೂರ್ವ ಉಕ್ರೇನ್ ನಗರದ ಕ್ರಾಮಾಟೋರ್ಸ್ಕ್‌ನಲ್ಲಿರುವ ರೈಲು ನಿಲ್ದಾಣಕ್ಕೆ ಎರಡು ರಾಕೆಟ್‌ಗಳು ಅಪ್ಪಳಿಸಿದ್ದು 39ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ 100ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಕುರಿತು ವರದಿಯಾಗಿದೆ. ಆದರೆ ಈ ಎಲ್ಲ ಆರೋಪಗಳನ್ನು ರಷ್ಯಾ ತಿರಸ್ಕರಿಸುತ್ತಿದೆ. ನಾಗರಿಕರ ಮೇಲಿನ ರಷ್ಯಾ ದಾಳಿಯಿಂದ ಉಕ್ರೇನ್ ನರಳಿದರೆ, ಯುರೋಪ್ ರಾಷ್ಟ್ರಗಳು ಕೆರಳಿವೆ. ರಷ್ಯಾದ ವಿರುದ್ಧ ಸಿಡಿದೆದ್ದಿರುವ ಯುರೋಪ್ ರಾಷ್ಟ್ರಗಳು ಮತ್ತು ಅದರ ಸುತ್ತಲಿನ ಬೆಳವಣಿಗೆಗಳು ಹೇಗಿವೆ ಎಂಬುದನ್ನು ಈ ವರದಿಯಲ್ಲಿ ತಿಳಿಯಿರಿ.

Russia Ukraine War : Russia denies Ukraine Train station attack that killed over 39

ಕ್ರಾಮಾಟೋರ್ಸ್ಕ್‌ನ ರೈಲ್ವೆ ನಿಲ್ದಾಣದ ಮೇಲೆ ದಾಳಿ:

ಪೂರ್ವ ಉಕ್ರೇನ್‌ನ ಕ್ರಾಮಾಟೋರ್ಸ್ಕ್‌ನಲ್ಲಿರುವ ರೈಲು ನಿಲ್ದಾಣದ ಮೇಲಿನ ದಾಳಿಯನ್ನು ರಷ್ಯಾದ ರಕ್ಷಣಾ ಸಚಿವಾಲಯವು ನಿರಾಕರಿಸಿದೆ. ರಷ್ಯಾದ ವಿರುದ್ಧ ಕೀವ್‌ನ ಆರೋಪಗಳು ಸಂಪೂರ್ಣ ಸುಳ್ಳು ಎಂದು ಸಚಿವಾಲಯ ತಿಳಿಸಿದೆ.

ರಷ್ಯಾವನ್ನು ದುಷ್ಟ ಎಂದ ಝೆಲೆನ್ಸ್ಕಿ:

ಉಕ್ರೇನ್ ರೈಲ್ವೆ ನಿಲ್ದಾಣದ ಮೇಲೆ ರಷ್ಯಾ ನಡೆಸಿರುವ ದಾಳಿಯನ್ನು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕಠುವಾಗಿ ಟೀಕಿಸಿದ್ದಾರೆ. ರಷ್ಯಾ ಎಂಬುದು ಯಾವುದೇ ಮಿತಿಗಳಿಲ್ಲ ದುಷ್ಟ ರಾಷ್ಟ್ರ ಎಂದು ದೂಷಿಸಿದ್ದಾರೆ.

Russia Ukraine War : Russia denies Ukraine Train station attack that killed over 39

30 ಬಿಲಿಯನ್ ಯುರೋ ರಷ್ಯನ್ ಸ್ವತ್ತು ಫ್ರೀಜ್:

ಯುರೋಪಿಯನ್ ಒಕ್ಕೂಟವು ಸುಮಾರು 30 ಬಿಲಿಯನ್ ಯುರೋಗಳಷ್ಟು ರಷ್ಯನ್, ಬೆಲರೂಸಿಯನ್ ಸ್ವತ್ತುಗಳನ್ನು ಇಲ್ಲಿಯವರೆಗೆ ಫ್ರೀಜ್ ಮಾಡಲಾಗಿದೆ ಎಂದು ಹೇಳಿದೆ.

ರೈಲು ನಿಲ್ದಾಣದ ಮೇಲಿನ ದಾಳಿಗೆ ಸುತ್ತಮುತ್ತಲಿನ ಬೆಳವಣಿಗೆ:

- ಪೂರ್ವ ಉಕ್ರೇನ್ ಕ್ರಾಮಾಟೋರ್ಸ್ಕ್‌ನಲ್ಲಿರುವ ರೈಲು ನಿಲ್ದಾಣದ ಮೇಲಿನ ದಾಳಿಯನ್ನು ಯುರೋಪಿಯನ್ ಒಕ್ಕೂಟವು ಬಲವಾಗಿ ಖಂಡಿಸುತ್ತದೆ ಎಂದು ವಿದೇಶಾಂಗ ನೀತಿ ಮುಖ್ಯಸ್ಥ ಬೊರೆಲ್ ಹೇಳಿದ್ದಾರೆ.

- ಉಕ್ರೇನ್ ಆಕ್ರಮಣದ ಹಿನ್ನೆಲೆ ರಷ್ಯಾದ ವ್ಲಾಡಿಮಿರ್ ಪುಟಿನ್ ಮತ್ತು ಸೆರ್ಗೆಯ್ ಲಾವ್ರೊವ್ ಅವರ ಪುತ್ರಿಯರನ್ನು ಯುಕೆ ನಿರ್ಬಂಧಿಸಿದೆ

- ಜಪಾನ್ ಪ್ರಧಾನಮಂತ್ರಿಯು ರಷ್ಯಾದಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳುವುದೂ ಸೇರಿದಂತೆ ಮತ್ತಷ್ಟು ಹೊಸ ನಿರ್ಬಂಧಗಳನ್ನು ಘೋಷಿಸಿದ್ದಾರೆ

- ಉಕ್ರೇನ್‌ಗೆ ಸೇನೆಯನ್ನು ಕಳುಹಿಸಿದ ನಂತರ ರಷ್ಯಾದ ಸೆಂಟ್ರಲ್ ಬ್ಯಾಂಕ್ ಪ್ರಮುಖ ದರವನ್ನು ಶೇ. 20 ರಿಂದ ಶೇ.17ಕ್ಕೆ ಕಡಿತಗೊಳಿಸಲಾಗಿದೆ

- ಉಕ್ರೇನ್ ಯುದ್ಧದ ಕಾರಣದಿಂದಾಗಿ ಜಾಗತಿಕ ಮಟ್ಟದಲ್ಲಿ ಆಹಾರದ ಬೆಲೆಗಳು 'ಅತ್ಯಧಿಕ ಮಟ್ಟವನ್ನು' ತಲುಪಿವೆ

- ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಒಕ್ಕೂಟದ ರಾಜತಾಂತ್ರಿಕ ಮುಖ್ಯಸ್ಥ ಜೋಸೆಪ್ ಬೊರೆಲ್ ಅವರೊಂದಿಗೆ ಉಕ್ರೇನಿಯನ್ ರಾಜಧಾನಿ ಕೀವ್‌ಗೆ ತೆರಳುತ್ತಿದ್ದಾರೆ ಎಂದು ಶುಕ್ರವಾರ ಘೋಷಿಸಿದರು. "ಕೀವ್‌ಗಾಗಿ ಎದುರು ನೋಡುತ್ತಿದ್ದೇನೆ" ಎಂದು ವಾನ್ ಡೆರ್ ಲೇಯೆನ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಗುರುವಾರವಷ್ಟೇ ವಿಶ್ವಸಂಸ್ಥೆಯಲ್ಲಿ ರಷ್ಯಾಗೆ ಹಿನ್ನಡೆ:

ಉಕ್ರೇನ್ ಮೇಲಿನ ಆಕ್ರಮಣದಿಂದ ಜಾಗತಿಕ ಮಟ್ಟದಲ್ಲಿ ಹಲವು ರಾಷ್ಟ್ರಗಳ ಕೆಂಗಣ್ಣಿಗೆ ಗುರಿ ಆಗಿರುವ ರಷ್ಯಾವನ್ನು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಿಂದ ಗುರುವಾರ ಅಮಾನತುಗೊಳಿಸಲಾಗಿದೆ. ವಿಶ್ವಸಂಸ್ಥೆ 197 ಸದಸ್ಯರಲ್ಲಿ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಅಮಾನತುಗೊಳಿಸುವ ನಿರ್ಣಯದ ಮೇಲೆ ಮತ ಚಲಾಯಿಸಿತು. ಈ ನಿರ್ಣಯದ ಪರವಾಗಿ 93 ಮತಗಳು ಚಲಾವಣೆಯಾದರೆ, ವಿರುದ್ಧವಾಗಿ 24 ಮತಗಳು ಚಲಾವಣೆಯಾದವು. ಇದರ ಹೊರತಾಗಿ ಭಾರತ ಸೇರಿದಂತೆ 58 ರಾಷ್ಟ್ರಗಳು ಗೈರು ಹಾಜರಾಗಿದ್ದವು.

ಸದಸ್ಯತ್ವ ಕಳೆದುಕೊಂಡ 2ನೇ ರಾಷ್ಟ್ರ ರಷ್ಯಾ:

2006 ರಲ್ಲಿ ಸ್ಥಾಪಿಸಲಾದ ಮಾನವ ಹಕ್ಕುಗಳ ಕೌನ್ಸಿಲ್‌ನಲ್ಲಿ ಸದಸ್ಯತ್ವದ ಹಕ್ಕುಗಳನ್ನು ಕಳೆದುಕೊಂಡ ಎರಡನೇ ದೇಶ ರಷ್ಯಾ ಆಗಿದೆ. ಉತ್ತರ ಆಫ್ರಿಕಾದ ದೇಶದಲ್ಲಿ ದಂಗೆಯು ದೀರ್ಘಕಾಲದ ನಾಯಕ ಮೊಮ್ಮರ್ ಗಡಾಫಿ ಅವರನ್ನು ಕೆಳಗಿಳಿಸಿದಾಗ 2011ರಲ್ಲಿ ಲಿಬಿಯಾವನ್ನು ಅಮಾನತುಗೊಳಿಸಲಾಗಿತ್ತು. ಮಾನವ ಹಕ್ಕುಗಳ ಮಂಡಳಿಯು ಜಿನೀವಾದಲ್ಲಿದ್ದು, ಅದರ ಸದಸ್ಯರನ್ನು 193-ರಾಷ್ಟ್ರಗಳ ಸಾಮಾನ್ಯ ಸಭೆಯಿಂದ ಮೂರು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ.

ಮಾನವ ಹಕ್ಕುಗಳ ಮಂಡಳಿಯನ್ನು ಸ್ಥಾಪಿಸಿದ ಮಾರ್ಚ್ 2006ರ ನಿರ್ಣಯವು "ಮಾನವ ಹಕ್ಕುಗಳ ಸಮಗ್ರ ಮತ್ತು ವ್ಯವಸ್ಥಿತ ಉಲ್ಲಂಘನೆಗಳನ್ನು ಮಾಡುವ" ದೇಶದ ಸದಸ್ಯತ್ವ ಹಕ್ಕುಗಳನ್ನು ಸಾಮಾನ್ಯ ಸಭೆಯಲ್ಲಿ ಅಮಾನತುಗೊಳಿಸಬಹುದು ಎಂದು ಹೇಳುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+