ಉಕ್ರೇನ್ ನಾಗರಿಕರ ನೆತ್ತರು ಹರಿಸಿದ ರಷ್ಯಾ ಯೋಧರಿಗೆ ಸಿಕ್ಕಿದ್ದು ಎಂಥಾ ಪಟ್ಟ!?
ಕೀವ್, ಏಪ್ರಿಲ್ 6: ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ 42ನೇ ದಿನಕ್ಕೆ ಕಾಲಿಟ್ಟಿದೆ. ಕೀವ್‌ನ ಬಚಾ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಹತ್ಯಾಕಾಂಡದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಕೀವ್‌ನ ಬಚಾ ಪ್ರದೇಶದಲ್ಲಿ 400ಕ್ಕೂ ಹೆಚ್ಚು ಮೃತದೇಹಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿರುವ ಬಗ್ಗೆ ವರದಿಯಾಗಿದ್ದು, ಈ ಘಟನೆಯಿಂದ ಜಾಗತಿಕ ಮಟ್ಟದಲ್ಲಿ ರಷ್ಯಾದ ಯೋಧರು ಯುದ್ಧಾಪರಾಧಿಗಳಾಗಿ ಕರೆಸಿಕೊಳ್ಳುತ್ತಿದ್ದಾರೆ. ಉಕ್ರೇನ್‌ನಲ್ಲಿನ ಹತ್ಯಾಕಾಂಡದ ಕುರಿತು ಉಲ್ಲೇಖಿಸಿರುವ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾದ ಯೋಧರನ್ನು ಕೊಲೆಗಡುಕರು ಹಾಗೂ ಅತ್ಯಾಚಾರಿಗಳು ಎಂದು ಕಿಡಿ ಕಾರಿದ್ದಾರೆ.
ಉಕ್ರೇನ್ ಯುದ್ಧವು ಜಗತ್ತಿನ ಅತಿದೊಡ್ಡ ಸವಾಲುಗಳಲ್ಲಿ ಒಂದಾಗಿದೆ ಎಂದು ಭದ್ರತಾ ಮಂಡಳಿ ಸಭೆಯಲ್ಲಿ ವಿಶ್ವಸಂಸ್ಥೆಯ ಕಾರ್ಯದರ್ಶಿ ಉಲ್ಲೇಖಿಸಿದ್ದಾರೆ. ಇನ್ನೊಂದು ಮಗ್ಗಲಿನಲ್ಲಿ ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳು ವ್ಲಾಡಿಮಿರ್ ಪುಟಿನ್ ಪುತ್ರಿಯರ ಮೇಲೂ ನಿರ್ಬಂಧ ಮುಂದುವರಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಆರಂಭವಾದ 42ನೇ ದಿನದವರೆಗೂ ನಡೆದಿರುವ ಪ್ರಮುಖ ಬೆಳವಣಿಗೆಳನ್ನು ಮುಂದೆ ಓದಿ.

- ಉಕ್ರೇನ್‌ನನ್ನು 'ಮೂಕ ಗುಲಾಮ'ನಾಗಿ ಮಾಡಿಕೊಳ್ಳಲು ರಷ್ಯಾ ಬಯಸುತ್ತಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದರು. ರಷ್ಯಾ ತೆಗೆದುಕೊಳ್ಳುತ್ತಿರುವ ಕ್ರಮಗಳಿಗೆ ಅದುವೇ ಜವಾಬ್ದಾರಿ ಹೊತ್ತುಕೊಳ್ಳಬೇಕು. ಇದರ ಜೊತೆಗೆ ವಿಶ್ವಸಂಸ್ಥೆಯು ಪರಿಣಾಮಕಾರಿಯಾದ ಸುಧಾರಣೆಗಳನ್ನು ಜಾರಿಗೊಳಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.
- ಬಚಾ ಮತ್ತು ಉಕ್ರೇನ್‌ನ ಇತರ ನಗರಗಳಲ್ಲಿನ ಹಿಂಸಾಚಾರದ ಬಗ್ಗೆ ಉಲ್ಲೇಖಿಸಿದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ರಷ್ಯಾ ಸೇನೆಯಿಂದಲೇ ತಮ್ಮವರಿಗೆ ನ್ಯಾಯ ಕೊಡಿಸುವಂತೆ ಹೇಳಿದರು. ಅದರ ಜೊತೆಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಿಂದ ರಷ್ಯಾವನ್ನು ಹೊರಹಾಕುವ ಅಗತ್ಯವಿದೆ ಎಂದು ಹೇಳಿದರು.

- ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಮೊದಲ ಬಾರಿಗೆ ರಷ್ಯಾದ ವಿರುದ್ಧ ಭಾರತವೂ ಮಾತನಾಡಿದೆ. ಬಚಾದಲ್ಲಿನ ನಾಗರಿಕ ಹತ್ಯೆಗಳ ಇತ್ತೀಚಿನ ವರದಿಗಳು ತುಂಬಾ ಗೊಂದಲದ ಸಂಗತಿಯಾಗಿದೆ. ಹಿಂಸಾಚಾರವನ್ನು ತಕ್ಷಣ ಕೊನೆಗೊಳಿಸಬೇಕು ಮತ್ತು ಹಗೆತನವನ್ನು ಅಂತ್ಯಗೊಳಿಸಬೇಕು ಎಂದು ಭದ್ರತಾ ಮಂಡಳಿಯಲ್ಲಿನ ಭಾರತದ ರಾಯಭಾರಿ ಟಿಎಸ್ ತಿರುಮೂರ್ತಿ ಪುನರುಚ್ಚರಿಸಿದರು.
- "ರಷ್ಯಾದೊಂದಿಗೆ ಯುದ್ಧ ನಡೆಸುವುದರಲ್ಲಿ ಅಮೆರಿಕಾದ ಜನರಿಗೆ ಆಸಕ್ತಿಯಿಲ್ಲ. ಆದಾಗ್ಯೂ, ಉಕ್ರೇನ್‌ಗೆ ನಮ್ಮ ಬೆಂಬಲವನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ. ಈ ಯುದ್ಧದಿಂದ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಅಮೆರಿಕಾ ಕೂಡ ಅದರ ಭಾಗವಾಗಿ ಉಳಿಯುತ್ತದೆ," ಶ್ವೇತ ಭವನದ ಕಾರ್ಯದರ್ಶಿ ಜೆನ್ ಸಾಕಿ ಹೇಳಿದ್ದಾರೆ.
- ರಷ್ಯಾದಲ್ಲಿ ಮುಂದಿನ ಎಲ್ಲಾ ಹೂಡಿಕೆಗಳನ್ನು ನಿರ್ಬಂಧಿಸುವುದಕ್ಕೆ ಸಂಬಂಧಿಸಿದಂತೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಹಾಗೂ ಯುರೋಪಿಯನ್ ರಾಷ್ಟ್ರಗಳು ಸಿದ್ಧತೆ ನಡೆಸುತ್ತಿವೆ ಎಂದು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ. ಇದರ ಮಧ್ಯೆ ಪುಟಿನ್ ಅಧಿಕಾರದಲ್ಲಿ ಇರುವವರೆಗೂ ಬ್ರಿಟನ್ ಹೂಡಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಹೇಳಿದ್ದಾರೆ.

- ಕಳೆದ ಏಪ್ರಿಲ್ 5 ರಂದು, ಮರಿಯುಪೋಲ್‌ನಲ್ಲಿರುವ ಹ್ಯೂಮನ್ ಕಾರಿಡಾರ್‌ನಿಂದ ಸುಮಾರು 3,846 ಜನರನ್ನು ಸ್ಥಳಾಂತರಿಸಲಾಗಿದೆ. ಟರ್ಕಿ ಸಹಾಯದಿಂದ ಮರಿಯುಪೋಲ್ ಅನ್ನು ಸ್ಥಳಾಂತರಿಸಬಹುದು ಎಂದು ಉಪ ಪ್ರಧಾನಿ ಹೇಳಿದ್ದಾರೆ. ರಷ್ಯಾದ ಪಡೆಗಳ ನಿರಂತರ ಗುಂಡಿನ ದಾಳಿಯ ನಡುವೆ ಸುಮಾರು 120,000 ಜನರು ಇನ್ನೂ ಮರಿಯುಪೋಲ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ.
- ರಷ್ಯಾದ 15 ಗುಪ್ತಚರ ಅಧಿಕಾರಿಗಳನ್ನು ಡೆನ್ಮಾರ್ಕ್ ತನ್ನ ದೇಶದಿಂದ ಹೊರಹಾಕಿದೆ. ಈ ಅಧಿಕಾರಿಗಳು ಮುಂದಿನ 14 ದಿನಗಳಲ್ಲಿ ಡೆನ್ಮಾರ್ಕ್ ಅನ್ನು ತೊರೆಯಬೇಕಾಗುತ್ತದೆ. ಈ ಗುಪ್ತಚರ ಅಧಿಕಾರಿಗಳು ತಮ್ಮ ದೇಶದಲ್ಲಿ ಬೇಹುಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಡ್ಯಾನಿಶ್ ವಿದೇಶಾಂಗ ಸಚಿವ ಜೆಪ್ಪೆ ಕೊಫೋಡ್ ಹೇಳಿದ್ದಾರೆ.
- ಸ್ಪೇನ್‌ನ ಭದ್ರತಾ ಹಿತಾಸಕ್ತಿಗಳಿಗೆ ಬೆದರಿಕೆಯೊಡ್ಡುವ ರಾಜತಾಂತ್ರಿಕರ ಪಟ್ಟಿ ಅಂತಿಮಗೊಳಿಸುತ್ತಿರುವುದಾಗಿ ಸ್ಪ್ಯಾನಿಷ್ ವಿದೇಶಾಂಗ ಸಚಿವ ಜೋಸ್ ಮ್ಯಾನುಯೆಲ್ ಅಲ್ಬರೆಸ್ ಘೋಷಿಸಿದ್ದಾರೆ. ಈ ಪಟ್ಟಿಯಲ್ಲಿ ರಷ್ಯಾದ 25 ರಾಜತಾಂತ್ರಿಕರನ್ನು ಸೇರಿಸಲಾಗಿದೆ ಎಂದು ನಂಬಲಾಗಿದೆ.
- ಜರ್ಮನಿಯ ಮಾಜಿ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ 2008 ರಲ್ಲಿ ಉಕ್ರೇನ್ ಅನ್ನು NATOಗೆ ಸೇರದಂತೆ ನಿರ್ಬಂಧಿಸುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆಗ ಉಕ್ರೇನ್ ನ್ಯಾಟೋಗೆ ಸೇರಲು ಅವಕಾಶ ನೀಡದ ನಿರ್ಧಾರವನ್ನು ಟೀಕಿಸಿದ್ದರು.
- ಉಕ್ರೇನ್‌ನಲ್ಲಿ ಇದುವರೆಗೆ 1,417 ನಾಗರಿಕರು ಸಾವನ್ನಪ್ಪಿದ್ದು, 2,038 ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆ ತಿಳಿಸಿದೆ.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್












Click it and Unblock the Notifications