18 ವರ್ಷಗಳಲ್ಲಿ 30 ಮನುಷ್ಯರನ್ನು ತಿಂದು ತೇಗಿದ್ದ ರಷ್ಯಾ ದಂಪತಿ!
ಮಾಸ್ಕೋ, ಸೆಪ್ಟೆಂಬರ್ 26: ಕಳೆದ 18 ವರ್ಷಗಳಿಂದ ನರ ಮಾಂಸ ಭಕ್ಷಿಸುತ್ತಿದ್ದ ವಿಕೃತ ದಂಪತಿಯನ್ನು ದಕ್ಷಿಣ ರಷ್ಯಾದ ಕ್ರಾಂಸೋಡಾರ್ ಪ್ರಾಂತ್ಯದ ಮನೆಯೊಂದರಿಂದ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಡಿಮಿಟ್ರಿ ಬಕ್ಷಾವ್ (25) ಹಾಗೂ ಆತನ ಪತ್ನಿ ನಟಾಲಿಯಾ (45) ಎಂದು ಗುರುತಿಸಲಾಗಿದೆ. ಕ್ರಾಂಸೋಡಾರ್ ನಲ್ಲಿಯೇ ಸ್ವಂತ ಮನೆಯನ್ನು ಹೊಂದಿದ್ದ ಈ ದಂಪತಿ, 1999ರಿಂದ ಇಲ್ಲಿಯವರೆಗೆ ಸುಮಾರು 30 ಜನರನ್ನು ಕೊಂದು ತಿಂದಿದ್ದಾರೆಂದು ವಿಚಾರಣೆ ವೇಳೆ, ದಂಪತಿ ಒಪ್ಪಿಕೊಂಡಿದ್ದಾರೆಂದು ಹೇಳಲಾಗಿದೆ.

ಇವರ ಮನೆಯನ್ನು ಜಾಲಾಡಿರುವ ತನಿಖಾಧಿಕಾರಿಗಳಿಗೆ, ಮನೆಯ ತುಂಬಾ ಮನುಷ್ಯರ ಚರ್ಮ, ಮಾಂಸದ ಚೂರುಗಳು, ಅಂಗಾಗಗಳು ಸಿಕ್ಕಿವೆ.
ಹಲವಾರು ಮಾನವರ ಅಂಗಾಂಗಗಳನ್ನು ಈ ದಂಪತಿ ಉಪ್ಪಿನಕಾಯಿ ರೀತಿಯಲ್ಲಿ ಸಂರಕ್ಷಿಸಿ ಇಟ್ಟಿರುವುದು ಪತ್ತೆಯಾಗಿ ಅಧಿಕಾರಿಗಳನ್ನೇ ಬೆಚ್ಚಿ ಬೀಳಿಸಿದೆ.
ಈ ಬಗ್ಗೆ ತನಿಖೆ ಮುಂದುವರಿದಿದ್ದು, ಹತ್ಯೆಗೊಳಗಾಗುತ್ತಿದ್ದವರು ಯಾರು, ಅವರು ಹೇಗೆ ಈ ದಂಪತಿ ಬಲೆಗೆ ಬೀಳುತ್ತಿದ್ದರು, ದಂಪತಿಗಳು ಹೇಗೆ ದುರ್ದೈವಿಗಳನ್ನು ತಮ್ಮ ಮನೆಗೆ ಕರೆತರುತ್ತಿದ್ದರು ಎಂಬಿತ್ಯಾದಿ ಮಾಹಿತಿ ಕಲೆಹಾಕುವುದಾಗಿ ತನಿಖಾಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications