Russia & Ukraine: ಉಕ್ರೇನ್ ಅಧ್ಯಕ್ಷನ ಎದೆ ನಡುಗಿಸಿದ ರಷ್ಯಾ, ಗೆದ್ದ ಜಾಗ ಈ ಜನ್ಮದಲ್ಲಿ ವಾಪಸ್ ಬರಲ್ಲ!
ರಷ್ಯಾ ಸೇನೆ ಉಕ್ರೇನ್ ಮೇಲೆ ಸವಾರಿ ಮಾಡುತ್ತಿದ್ದು, ಈಗಾಗಲೇ ಭಾಗಶಃ ಉಕ್ರೇನ್ ಭೂಮಿ ರಷ್ಯಾ ವಶಕ್ಕೆ ಸಿಕ್ಕಾಗಿದೆ. ಉಕ್ರೇನ್ ರಾಜಧಾನಿ ಕೀವ್ ಹೊರತುಪಡಿಸಿ, ಈಗಾಗಲೇ ಭಾಗಶಃ ಪ್ರದೇಶಗಳು ರಷ್ಯಾ ಹಿಡಿತಕ್ಕೆ ಸಿಕ್ಕಿವೆ. ಹೀಗಾಗಿ ರಷ್ಯಾ ಈ ಯುದ್ಧಲ್ಲಿ ಮೇಲುಗೈ ಸಾಧಿಸಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ ಇದೇ ಸಮಯದಲ್ಲಿ ಯುದ್ಧ ನಿಲ್ಲಬೇಕು ಎಂಬ ಒತ್ತಡ ಕೂಡ ಹೆಚ್ಚಾಗುತ್ತಿದೆ.
ರಷ್ಯಾ & ಉಕ್ರೇನ್ ಯುದ್ಧ ನಿಲ್ಲಬೇಕು ಎಂಬುದು ಇಡೀ ಜಗತ್ತಿನ ಕನಸು & ಆಸೆಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಖುದ್ದಾಗಿ ರಷ್ಯಾ ಅಧ್ಯಕ್ಷ ಪುಟಿನ್ ಜೊತೆಗೆ ಮಾತನಾಡಿದ್ದರು. ಅಲ್ಲದೆ ಉಕ್ರೇನ್ ವಿರುದ್ಧ ನಡೆಯುತ್ತಿರುವ ಯುದ್ಧ ನಿಲ್ಲಿಸಲು ಮನವಿ ಮಾಡಿದ್ದರು. ಯುದ್ಧ ನಿಂತ ನಂತರ ಕೈದಿಗಳ ಬಿಡುಗಡೆ ಬಗ್ಗೆ ಕೂಡ ಚಿಂತನೆ ನಡೆಯುತ್ತಿದೆ.

ಹೀಗಿದ್ದಾಗ ಉಕ್ರೇನ್ ಅಧ್ಯಕ್ಷ ಝೆಲೆನ್ಸ್‌ಕಿ ಹೊಸ ಡೀಲ್ ಮುಂದಿಟ್ಟಿದ್ದರು. ಆದರೆ ಉಕ್ರೇನ್ ಅಧ್ಯಕ್ಷನ ಕನಸಿಗೆ ರಷ್ಯಾ ಸೇನೆ ಡ್ರೋನ್ & ಮಿಸೈಲ್ ಮೂಲಕ ಬೆಂಕಿ ಹಚ್ಚಿದೆ. ಉಕ್ರೇನ್ ರಾಜಧಾನಿ ನಡುಗಿ ಹೋಗಿದ್ದು, ಹತ್ತಾರು ಕಟ್ಟಡಗಳು ಹಾಗೂ ಮನುಷ್ಯರಿಗೆ ಹಾನಿಯಾಗಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹಾಗಾದ್ರೆ, ಏನದು ಉಕ್ರೇನ್ ಅಧ್ಯಕ್ಷನ ಹೊಸ ಡೀಲ್?
ಮುಗಿದು ಹೋಯ್ತಾ ಉಕ್ರೇನ್ ಕಥೆ?
ರಷ್ಯಾ & ಉಕ್ರೇನ್ ಜಗಳದಲ್ಲಿ ಮಧ್ಯ ಬಂದ ಅಮೆರಿಕಗೆ ದೊಡ್ಡ ದೊಡ್ಡ ಸಮಸ್ಯೆಯೇ ಕಾಡ್ತಿದೆ. ಒಂದು ಕಡೆ ಆರ್ಥಿಕವಾಗಿ ಅಮೆರಿಕ ನರಳುತ್ತಿರುವ ಸಮಯದಲ್ಲಿ ಉಕ್ರೇನ್‌ನ ನೆರವಿಗೆ ಬರಬೇಕು ಎಂಬ ಅನಿವಾರ್ಯತೆ ಇತ್ತು. ಆದರೆ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧಿಕಾರ ಹಿಡಿದಿದ್ದೇ ತಡ ಯಾವುದೇ ಅನುದಾನ ಕೊಡುವುದಿಲ್ಲ ಎಂದು ಮೊದಲ ಆಘಾತ ನೀಡಿದ್ದರು. ಹೀಗೆ, ಎಲ್ಲಾ ಕೈಮೀರಿ ಹೋಗಿರುವಾಗಲೇ ರಷ್ಯಾ ಸೇನೆ ಉಕ್ರೇನ್‌ಗೆ ಮತ್ತೊಂದು ಆಘಾತ ನೀಡಿದೆ! ಹಾಗಾದರೆ ಏನದು ರಷ್ಯಾ ನೀಡಿರುವ ಆಘಾತ? ಮುಂದೆ ಓದಿ.
ಗೆದ್ದ ಜಾಗ ವಾಪಸ್ ಬರೋದಿಲ್ಲ!
ಹೌದು, ಯುದ್ಧ ನಿಲ್ಲಲಿದೆ ಎಂಬ ನಿರೀಕ್ಷೆ ಮೂಡಿದ್ದೇ ತಡ ಉಕ್ರೇನ್ ಹಲವು ಬೇಡಿಗಳನ್ನು ಮುಂದಿಟ್ಟಿತ್ತು. ಅದರಲ್ಲಿ ಪ್ರಮುಖವಾಗಿ, ರಷ್ಯಾ ಗೆದ್ದಿರುವ ಉಕ್ರೇನ್ ಪ್ರದೇಶಗಳನ್ನು ಮತ್ತೆ ಉಕ್ರೇನ್‌ಗೆ ಮರಳಿಸಬೇಕು ಎಂಬ ಒತ್ತಡ ನಿರ್ಮಾಣ ಆಗಿತ್ತು. ಹೀಗೆ ಉಕ್ರೇನ್ ಅಧ್ಯಕ್ಷನಿಂದ ಬೇಡಿಕೆ ಬಂದ ಕೆಲವೇ ಗಂಟೆಗಳಲ್ಲಿ ರಷ್ಯಾ ನೂರಾರು ಡ್ರೋನ್ & ಕ್ಷಿಪಣಿಗಳ ಮೂಲಕ ದಾಳಿ ಮಾಡಿದೆ. ಈ ಮೂಲಕ ರಷ್ಯಾ ತಾನು ಗೆದ್ದ ಪ್ರದೇಶಗಳನ್ನು ಯಾವುದೇ ಕಾರಣಕ್ಕೂ ಮತ್ತೆ ಉಕ್ರೇನ್‌ಗೆ ವಾಪಸ್ ಕೊಡಲ್ಲ ಎಂಬುದರ ಮುನ್ಸೂಚನೆ ಸಿಕ್ಕಂತಾಗಿದೆ. ಇದು ಉಕ್ರೇನ್‌ಗೂ ಸೇರಿದಂತೆ ರಷ್ಯಾ ವಿರೋಧಿಗಳ ಸಿಟ್ಟು ಮತ್ತಷ್ಟು ಹೆಚ್ಚುವಂತೆ ಮಾಡಿದೆ.












Click it and Unblock the Notifications