ರಷ್ಯಾ ಕೊತ.. ಕೊತ.. ಉಕ್ರೇನ್ ಬುಡಕ್ಕೆ ಬಿಸಿ ನೀರು ಕಾಯಿಸಲು ಸೌಂಡೇ ಇಲ್ಲದೆ ಸಿದ್ಧತೆ?
ಉಕ್ರೇನ್ ಮಾಡಬಾರದ ತಪ್ಪು ಮಾಡಿದೆ ಅಂತಾ ಅನಿಸುತ್ತಿದೆ. ಯಾಕಂದ್ರೆ ರಷ್ಯಾ ಮೇಲೆ ಪದೇ ಪದೇ ಡ್ರೋನ್ ದಾಳಿ ನಡೆಸುತ್ತಿರುವ ಉಕ್ರೇನ್ ಸೇನೆಗೆ ಒಮ್ಮೆ ಸರಿಯಾಗಿ ಬುದ್ಧಿ ಕಲಿಸಬೇಕು ಅಂತಾ ಇದೀಗ ರಷ್ಯಾ ಮೈ ಕೊಡವಿ ನಿಂತಿದೆ. ಇದೇ ಕಾರಣಕ್ಕೆ ಇದೀಗ ರಷ್ಯಾ ಅಧ್ಯಕ್ಷರಾದ ವ್ಲಾದಿಮಿರ್ ಪುಟಿನ್ ಕೊತ ಕೊತ ಕುದಿಯುತ್ತಿದ್ದು, ಉಕ್ರೇನ್ ಸರ್ವನಾಶಕ್ಕೆ ಹೊಸ ಪ್ಲಾನ್ ಮಾಡಿದ್ದಾರೆ ಎಂಬ ಸ್ಫೋಟಕ ಆರೋಪ ಈಗ ಓಡಾಡುತ್ತಿದೆ. ಹಾಗಾದರೆ ರಷ್ಯಾ ಮಿಲಿಟರಿ, ಉಕ್ರೇನ್ ವಿರುದ್ಧ ಇದೀಗ ಪರಮಾಣು ಅಸ್ತ್ರಗಳನ್ನು ಬಳಸಿ ದಾಳಿ ಮಾಡುತ್ತಾ?
ಉಕ್ರೇನ್ ಪರಿಸ್ಥಿತಿ ಗಂಭೀರವಾಗಿದೆ, ಯಾಕಂದ್ರೆ ಅಲ್ಲಿ ವಾಸ ಮಾಡುತ್ತಿರುವ ಜನರ ಜೀವಕ್ಕೆ ಗ್ಯಾರಂಟಿ ಇಲ್ಲವಾಗಿದೆ. ಯಾವ ಕ್ಷಣದಲ್ಲಿ ಎಲ್ಲಿಂದ ಬಾಂಬ್ ಅಥವಾ ಮಿಸೈಲ್ ಅಂದರೆ, ಕ್ಷಿಪಣಿ ಬಂದು ಬಡಿದು ಜೀವ ಹೋಗುತ್ತೋ ಗೊತ್ತಿಲ್ಲ. ಹೀಗಿದ್ದಾಗ ಉಕ್ರೇನ್ ಅಧ್ಯಕ್ಷ ಕೂಡ ಈ ವಿಚಾರದಲ್ಲಿ ರಷ್ಯಾ ಜೊತೆಗೆ ಶಾಂತಿ ಒಪ್ಪಂದ ಮಾಡಿಕೊಂಡು ಯುದ್ಧ ನಿಲ್ಲಿಸಲು ಈಗ ಸಿದ್ಧವಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇಂತಹ ಸಮಯದಲ್ಲೇ ರಷ್ಯಾ ಅಧ್ಯಕ್ಷರಾದ ವ್ಲಾದಿಮಿರ್ ಪುಟಿನ್ ಮಾತ್ರ ಮತ್ತಷ್ಟು ರೊಚ್ಚಿಗೆದ್ದು, ಉಕ್ರೇನ್ ವಿರುದ್ಧ ಇನ್ನಷ್ಟು ಉಗ್ರ & ತೀಕ್ಷ್ಣ ಕಾರ್ಯಾಚರಣೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಹರಿದಾಡ್ತಿದ್ದು, ಭಯ ಹೆಚ್ಚಾಗಿದೆ.

35 ಕ್ಷಿಪಣಿ, 26 ಡ್ರೋನ್ ದಾಳಿ!
ಅಂದಹಾಗೆ ಇದೀಗ ಉಕ್ರೇನ್ ದೇಶದಲ್ಲಿ ಬೇಸಿಗೆ ರಜೆ ಮುಗಿದಿದೆ. ಹೀಗಾಗಿ ಬೇಸಿಗೆ ರಜೆ ಮುಗಿದ ಕಾರಣಕ್ಕೆ, ಉಕ್ರೇನ್ ದೇಶದಲ್ಲಿ ಮಕ್ಕಳು ದೇಶಾದ್ಯಂತ ಶಾಲೆಗೆ ವಾಪಸ್ ಹೋಗಲು ತಯಾರಿಯ ನಡೆಸುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ ರಷ್ಯಾ ಸೇನೆ ಮಾತ್ರ ಉಕ್ರೇನ್ ರಾಜಧಾನಿ ಕೀವ್‌ನ ಮೇಲೆ ಭಾರಿ ಗಂಭೀರ ದಾಳಿ ನಡೆಸಿದೆ ಎಂಬ ಆರೋಪ ಕೇಳಿ ಬಂದಿದೆ. ದಿಢೀರ್ ರಷ್ಯಾದ ಸೇನೆ ನಡೆಸಿದ ದಾಳಿಗೆ ಉಕ್ರೇನ್ ಸೈನಿಕರು ದಿಕ್ಕಾಪಾಲಾಗಿ ಓಡಿ ಹೋಗುವ ಪರಿಸ್ಥಿತಿ ಇದೀಗ ಎದುರಾಗಿದೆ. ಅದರಲ್ಲೂ ರಷ್ಯಾ ಸೇನಾ ಪಡೆಗಳು 35 ಕ್ಷಿಪಣಿ & 26 ಡ್ರೋನ್‌ಗಳನ್ನ ಹಾರಿಸಿ ಈ ದಾಳಿ ನಡೆಸಿವೆ ಎಂದು ಆರೋಪ ಮಾಡಲಾಗಿದೆ.
ಮತ್ತೊಂದು ಮಹಾಯುದ್ಧ ಫಿಕ್ಸ್?
ರಷ್ಯಾ & ಉಕ್ರೇನ್ ಇಬ್ಬರೂ ಜಿದ್ದಿಗೆ ಬಿದ್ದು ಒಬ್ಬರ ಮೇಲೆ ಮತ್ತೊಬ್ಬರು ದಾಳಿ ಮಾಡುತ್ತಾ ಬಂದಿದ್ದಾರೆ. ಆದರೆ ಇವರಿಬ್ಬರ ಜಗಳದ ಪರಿಣಾಮ ಈಗ ಯುರೋಪ್ ದೇಶಗಳು ನಲುಗಿ, ಆತಂಕದಲ್ಲಿ ಜೀವನ ದೂಡುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಹಿಂದೆ ಮಹಾಯುದ್ಧ ನಡೆದ ಸಮಯದಲ್ಲಿ ಯುರೋಪ್ ಸ್ಥಿತಿ ಹೀಗೆ ಇತ್ತು. ಮೊದಲಿಗೆ ಕೋಳಿ ಜಗಳದಂತೆ ಶುರುವಾಗಿದ್ದ ಯುದ್ಧಗಳು, ನಂತರ ಭೀಕರ ಕದನಕ್ಕೆ ದಾರಿ ಮಾಡಿಕೊಟ್ಟಿದ್ದವು. ಹಾಗೇ ಒಟ್ಟಾರೆ ಎರಡು ಮಹಾಯುದ್ಧಗಳು ಇದೇ ಯುರೋಪ್ ಖಂಡದಿಂದ ಆರಂಭ ಆಗಿ ಮುಗಿದು ಹೋದವು.
ಈಗಲೂ ಅಷ್ಟೇ ಅದೇ ರೀತಿ ರಷ್ಯಾ & ಉಕ್ರೇನ್ ನಡುವೆ ವಾರ್ ಆರಂಭವಾಗಿದೆ. ಹೀಗಿದ್ದಾಗ ಉಕ್ರೇನ್ ಸೇನೆ ರಷ್ಯಾ ವಿರುದ್ಧ ರಿವೇಂಜ್‌ಗೆ ಮುಂದಾಗಿದ್ದು, ಪ್ರತಿ ಹಂತದಲ್ಲೂ ಸೋಲನ್ನು ಅನುಭವಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ದೊಡ್ಡ ಮಟ್ಟದಲ್ಲಿ ರಿವೇಂಜ್‌ಗೆ ಪುಟಿನ್ ಇದೀಗ ಸಿದ್ಧತೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮತ್ತೊಂದು ಕಡೆ ಉಕ್ರೇನ್ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ, ರಷ್ಯಾದ ವಿರುದ್ಧ ಉಕ್ರೇನ್ ಆಗಾಗ ದೊಡ್ಡ ಮಟ್ಟದಲ್ಲಿಯೇ ಕೌಂಟರ್ ಅಟ್ಯಾಕ್ ಮಾಡುತ್ತಿದೆ. ಆದರೆ ಅದರಲ್ಲಿ ಯಶಸ್ಸು ಕಾಣುತ್ತಿಲ್ಲ ಉಕ್ರೇನ್ ಸೇನೆ.












Click it and Unblock the Notifications