Breaking: ಉಕ್ರೇನ್ ಮೇಲೆ ಯುದ್ಧ ಘೋಷಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ಉಕ್ರೇನ್‌ನಲ್ಲಿ ಯುದ್ಧಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕರೆ ನೀಡಿದ್ದಾರೆ. ನಿರೀಕ್ಷೆಯಂತೆಯೇ ಎರಡೂ ದೇಶಗಳ ಮಧ್ಯೆ ಯುದ್ಧ ನಡೆಯಲಿದೆ.
ಉಕ್ರೇನ್ ಸೇನೆಗೆ ಶರಣಾಗುವಂತೆ ಅವರು ಆಗ್ರಹಿಸಿದ್ದಾರೆ. ಇದರಿಂದ ಜಾಗತಿಕ ಮಟ್ಟದಲ್ಲಿ ಭಾರಿ ತಲ್ಲಣ ಉಂಟಾಗಿದೆ. ಈ ಯುದ್ಧವು ಜಗತ್ತಿನಾದ್ಯಂತ ದೇಶಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.

ರಷ್ಯಾದೊಂದಿಗಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಉಕ್ರೇನ್ ಸರ್ಕಾರವು ಮಧ್ಯ ರಾತ್ರಿಯಿಂದ ಬೆಳಗ್ಗೆ 7 ಗಂಟೆವರೆಗೆ ಪೂರ್ವ ಉಕ್ರೇನ್‌ನ ವಿಮಾನ ನಿಲ್ದಾಣಗಳನ್ನು ಮುಚ್ಚಲು ಆದೇಶಿಸಿದೆ.
ವಾಯುಪ್ರದೇಶ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ರಷ್ಯಾದ ವಾಯುಯಾನ ಅಧಿಕಾರಿಗಳು ಮಾಡಿದ ಪ್ರಯತ್ನಗಳಿಂದಾಗಿ ಪೂರ್ವ ಉಕ್ರೇನ್‌ನ ಕೆಲವು ವಾಯುಪ್ರದೇಶಗಳನ್ನು ಅಪಾಯಕಾರಿ ಪ್ರದೇಶಗಳು ಎಂದು ಘೋಷಿಸಲಾಗಿವೆ.
ಉಕ್ರೇನ್ ಸೇನೆಯು ತನ್ನ ಶಸ್ತಾಸ್ತ್ರಗಳನ್ನು ಕೆಳಕ್ಕಿಳಿಸಬೇಕು ಎಂದು ವ್ಲಾಡಿಮಿರ್ ಪುಟಿನ್ ಸಂದೇಶ ನೀಡಿದ್ದಾರೆ. ಪೂರ್ವ ಉಕ್ರೇನ್‌ನಲ್ಲಿನ ಬಂಡುಕೋರ ನಾಯಕರು ಉಕ್ರೇನ್ ವಿರುದ್ಧ ಸೇನಾ ನೆರವು ನೀಡುವಂತೆ ಮಾಸ್ಕೋಗೆ ಮನವಿ ಮಾಡಿದ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.
ತಮ್ಮ ಉದ್ದೇಶಗಳನ್ನು ಘೋಷಿಸಲು ಪುಟಿನ್ ಅವರು ಟಿವಿಯಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. "ನಾನು ಸೇನಾ ಕಾರ್ಯಾಚರಣೆ ನಡೆಸಲು ನಿರ್ಧಾರ ತೆಗೆದುಕೊಂಡಿದ್ದೇನೆ" ಎಂದು ಅವರು ಮಾಸ್ಕೋದಲ್ಲಿ ಬೆಳಿಗ್ಗೆ 6 ಗಂಟೆ ಸುಮಾರಿಗೆ ಪ್ರಕಟಣೆ ಹೊರಡಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಯಾರಾದರೂ ಮಧ್ಯಪ್ರವೇಶ ಮಾಡಿದರೆ, ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದು ಅಮೆರಿಕ ನೇತೃತ್ವದ ನ್ಯಾಟೋ ಮಿತ್ರಕೂಟದ ದೇಶಗಳಿಗೆ ಅವರು ರವಾನಿಸುವ ಎಚ್ಚರಿಕೆಯ ಸಂದೇಶವಾಗಿದೆ.
ಜತೆಗೆ ರಷ್ಯಾದಲ್ಲಿರುವ ತನ್ನ ನಾಗರಿಕರು ತಕ್ಷಣ ಪಲಾಯನ ಮಾಡುವಂತೆ ಸಲಹೆ ನೀಡಿದೆ. ಏತನ್ಮಧ್ಯೆ ರಷ್ಯಾ ತನ್ನ ಕೀವ್ ರಾಯಭಾರಕಚೇರಿಯನ್ನು ತೆರವುಗೊಳಿಸುವ ಪ್ರಕ್ರಿಯೆ ಆರಂಭಿಸಿದೆ. ಉಕ್ರೇನ್ ಮೇಲೆ ದಾಳಿ ನಡೆಸುವ ಸ್ಪಷ್ಟ ಸೂಚನೆ ಇದಾಗಿದೆ.
ಪ್ರತ್ಯೇಕವಾದಿ ಉಗ್ರರ ಹಿಡಿತದಲ್ಲಿರುವ ಡೊನೆಸ್ಕ್‌ನಲ್ಲಿ ಕನಿಷ್ಠ ಐದು ಸ್ಫೋಟಗಳ ಸದ್ದು ಕೇಳಿ ಬಂದಿದೆ. ಪೂರ್ವ ಉಕ್ರೇನ್‌ನಲ್ಲಿರುವ ಬಂಡುಕೋರ ಮುಖಂಡರು ಉಕ್ರೇನ್ ದಾಳಿಯ ವಿರುದ್ಧ ಮಿಲಿಟರಿ ನೆರವು ಕೋರಿದ್ದಾರೆ ಎಂದು ಕ್ರೆಮ್ಲಿನ್ ಪ್ರಕಟಿಸಿದೆ. ಪಾಶ್ಚಿಮಾತ್ಯ ದೇಶಗಳು ಈಗಾಗಲೇ ಎಚ್ಚರಿಕೆ ನೀಡಿದಂತೆ ರಷ್ಯಾ ಮಿಲಿಟರಿ ಬಲಪ್ರಯೋಗಕ್ಕೆ ಮುಂದಾಗುವ ಸ್ಪಷ್ಟ ಸೂಚನೆ ಇದು ಎನ್ನಲಾಗಿದೆ.
ಪ್ರತ್ಯೇಕವಾದಿ ಉಗ್ರರ ಹಿಡಿತದಲ್ಲಿರುವ ಡೊನೆಸ್ಕ್ ಪಟ್ಟಣದಲ್ಲಿ ಗುರುವಾರ ನಸುಕಿನಲ್ಲಿ ಐದು ಸ್ಫೋಟದ ಸದ್ದು ಕೇಳಿಬಂದಿದೆ, ನಾಲ್ಕು ಮಿಲಿಟರಿ ಟ್ರಕ್‌ಗಳು ಸ್ಥಳಕ್ಕೆ ಧಾವಿಸುತ್ತಿರುವ ದೃಶ್ಯ ಕಂಡುಬಂದಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ.
Recommended Video
ಏತನ್ಮಧ್ಯೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಉಕ್ರೇನ್ ಸಂಘರ್ಷದ ಹಿನ್ನೆಲೆಯಲ್ಲಿ ಮೂರು ದಿನಗಳಲ್ಲಿ ಎರಡನೇ ಬಾರಿಗೆ ತುರ್ತು ಅಧಿವೇಶನ ನಡೆಸಲು ಮುಂದಾಗಿದೆ. ಗಡಿಯಲ್ಲಿ ರಷ್ಯಾ ಪಡೆ ನಿಯೋಜನೆ ಹಿನ್ನೆಲೆಯಲ್ಲಿ ಈ ಸಭೆ ಉಕ್ರೇನ್ ಮನವಿ ಹಿನ್ನೆಲೆಯಲ್ಲಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications