ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಬಳಕೆಗೆ ಸಿದ್ಧವಿದೆ ಎಂದ ರಷ್ಯಾ

|
Google Oneindia Kannada News

ಬ್ಲೂಮ್‌ಬರ್ಗ್, ಜುಲೈ 21: ರಷ್ಯಾದಲ್ಲಿ ಕೊರೊನಾ ಲಸಿಕೆಯನ್ನು ಸಿದ್ಧಪಡಿಸಿದ್ದು ಎರಡನೇ ಹಂತದ ಪ್ರಯೋಗವೂ ಮುಗಿದಿದೆ. ಉಪ ರಕ್ಷಣಾ ಸಚಿವ ರುಸ್ಲಾನ್ ಈ ಕುರಿತು ಮಾಹಿತಿ ನೀಡಿದ್ದು, ಲಸಿಕೆ ಬಳಕೆಗೆ ಸಿದ್ಧವಿದೆ ಎಂದಿದ್ದಾರೆ.

ಸೋಮವಾರ ಎರಡನೇ ಗುಂಪು ಎರಡನೇ ಹಂತದ ಪ್ರಯೋಗವನ್ನು ಮುಗಿಸಿದೆ. ರೋಗಿಗಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಹಾಗೂ ಗುಣಮುಖರಾಗುತ್ತಿದ್ದಾರೆ. ಮೂರನೇ ಹಂತದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಯೋಗಗಳು ನಡೆಯಲಿದೆ ಎಂಬ ಮಾಹಿತಿಯನ್ನೇನು ನೀಡಿಲ್ಲ. ಹಾಗೆಯೇ ಪ್ರಯೋಗ ಯಾವಾಗ ಆರಂಭವಾಗುತ್ತದೆ ಎಂಬ ಕುರಿತ ಮಾಹಿತಿಯನ್ನೂ ಕೂಡ ನೀಡಿಲ್ಲ.

ಭಾರತದಲ್ಲಿ ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಪ್ರಯೋಗ ಯಾವಾಗ?ಭಾರತದಲ್ಲಿ ಆಕ್ಸ್‌ಫರ್ಡ್ ಕೊರೊನಾ ಲಸಿಕೆ ಪ್ರಯೋಗ ಯಾವಾಗ?

ಮಾಸ್ಕೋದ ರಾಜ್ಯ ಸರ್ಕಾರ ನಡೆಸುತ್ತಿರುವ ಗಾಮಾಲೇಯಾ ಇನ್‌ಸ್ಟಿಟ್ಯೂಟ್ ಜೊತೆ ಸೇರಿ ಸೇನೆಯು ಲಸಿಕೆಯನ್ನು ಸಿದ್ಧಪಡಿಸುತ್ತಿದೆ. ರಷ್ಯಾದ ನೇರ ಬಂಡವಾಳ ನಿಧಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

Russia Claims Its Covid 19 vaccine Is Ready For Use

ಮೂರನೇ ಹಂತದ ಪ್ರಯೋಗವು ರಷ್ಯಾ, ಸೌದಿ ಅರೇಬಿಯಾ ಜನರನ್ನು ಒಳಗೊಂಡಿರುತ್ತದೆ. ಲಸಿಕೆ ವಿತರಣೆ ಸೆಪ್ಟೆಂಬರ್‌ನಲ್ಲಿ ಆರಂಭವಾಗಲಿದೆ.ರಷ್ಯಾ 2020ರಲ್ಲಿ 3 ಕೋಟಿ ಕೊರೊನಾ ಲಸಿಕೆ ತಯಾರಿಸಲು ಸಿದ್ಧವಿದೆ. 170 ಮಿಲಿಯನ್ ಲಸಿಕೆಯನ್ನು ವಿದೇಶಕ್ಕೆ ಕಳುಹಿಸುತ್ತಿದೆ.

ಇಡಿ ವಿಶ್ವದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರಿರುವ ಪ್ರದೇಶಗಳಲ್ಲಿ ರಷ್ಯಾ ಕೂಡ ಒಂದಾಗಿದೆ. ಈ ಎರಡೂ ಹಂತಗಳಲ್ಲಿ ಲಸಿಕೆ ಯಾವ ರೀತಿಯ ಪರಿಣಾಮವನ್ನು ಬೀರಿದೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಮೂರನೇ ಹಂತದ ಪರೀಕ್ಷೆಯನ್ನು ಆರಂಭಿಸಲಿದೆ.

English summary
A Covid-19 vaccine developed with the Russian Defense Ministry completed Phase 2 trials, leading First Deputy Defense Minister Ruslan Tsalikov to say the first domestic inoculation is ready for use.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X