1300 ದಿನ ಪೂರೈಸಿದ ರಷ್ಯಾ & ಉಕ್ರೇನ್ ವಾರ್, ಮುಂದೆ ಇದೆ ಮಾರಿಹಬ್ಬ! Ukraine War
ರಷ್ಯಾ ತನ್ನ ಶತ್ರುಗಳನ್ನ ಮಟ್ಟ ಹಾಕಲು ನೇರವಾಗಿ ಯುದ್ಧದ ತಂತ್ರಕ್ಕೆ ಮೊರೆ ಹೋಗಿದ್ದು, ಹೀಗೆ ಉಕ್ರೇನ್ ಸೇರಿ ಹಲವು ದೇಶಗಳ ಜೊತೆಗೆ ನಡೆಯುತ್ತಿರುವ ಭಾರಿ ತಿಕ್ಕಾಟದಿಂದ ರಷ್ಯಾ ಆರ್ಥಿಕವಾಗಿ ನಲುಗಿ ಹೋಗಿದೆ. ಇಷ್ಟಾದರೂ ಉಕ್ರೇನ್ ವಿರುದ್ಧ ನಡೆಸುತ್ತಿರುವ ನೇರ ಯುದ್ಧಕ್ಕೆ ಬ್ರೇಕ್ ಹಾಕಲು ರಷ್ಯಾ ಸಿದ್ಧವಿಲ್ಲ, ಇದರ ಪರಿಣಾಮ ಇಡೀ ಉಕ್ರೇನ್ ಅಲ್ಲಾಡಿ ಹೋಗಿದೆ. ಅಲ್ಲದೆ ಈಗಾಗಲೇ 1300 ದಿನಗಳನ್ನು ಪೂರೈಸಿರುವ ಈ ಯುದ್ಧ ಇನ್ನೇನು ಮತ್ತಷ್ಟು ಕ್ರೂರವಾಗುವ ಅಪಾಯ ಕೂಡ ಇದೀಗ ಆವರಿಸಿದೆ.
ನ್ಯಾಟೋ ಜೊತೆಗೆ ಕೈಜೋಡಿಸಲು ಉಕ್ರೇನ್ ಮುಂದಾಗಿದೆ ಎಂಬ ಸುದ್ದಿ ತಿಳಿದಿದ್ದೇ ತಡ ರಷ್ಯಾ ಭಾರಿ ಘೋರವಾದ ಯುದ್ಧ ಶುರು ಮಾಡಿತ್ತು. ನ್ಯಾಟೋ ಮಿತ್ರರಾಷ್ಟ್ರಗಳು ಉಕ್ರೇನ್ ಪರ 2014ರಿಂದ ಕೂಡ ಬೆಂಬಲ & ಸಹಕಾರ ನೀಡುತ್ತಾ ಬಂದಿವೆ. ಆದರೂ ಈವರೆಗೆ ನ್ಯಾಟೋ ಪಡೆಗಳನ್ನು ಯುದ್ಧ ಭೂಮಿಗೆ ಕಳುಹಿಸುವ ಯಾವುದೇ ಯೋಜನೆ ಮುಂದಿಟ್ಟಿಲ್ಲ. ಆದರೆ ಕೆಲವು ವರ್ಷಗಳ ಹಿಂದೆ ಉಕ್ರೇನ್ ದೇಶವನ್ನ ನ್ಯಾಟೋ ಒಕ್ಕೂಟಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ಸಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಭಾರಿ ದೊಡ್ಡ ಗಲಾಟೆ ಕೂಡ ಆಗಿತ್ತು. ರಷ್ಯಾ ನೇರವಾಗಿ ತನ್ನ ಶತ್ರು ನೆಲದ ಮೇಲೆ ದಾಳಿ ಮಾಡಿತ್ತು, ಹೀಗೆ ಶುರುವಾಗಿದ್ದ ರಷ್ಯಾ & ಉಕ್ರೇನ್ ವಾರ್ ಇದೀಗ 1300 ದಿನಗಳನ್ನು ಪೂರೈಸಿದೆ.

1300 ದಿನಗಳನ್ನು ಪೂರೈಸಿದ ಯುದ್ಧ
ಹೌದು, ನೋಡ ನೋಡುತ್ತಲೇ ರಷ್ಯಾ & ಉಕ್ರೇನ್ ವಾರ್ ಬರೋಬ್ಬರಿ 1300 ದಿನಗಳನ್ನು ಪೂರೈಸಿದೆ. 2022 ಫೆಬ್ರವರಿ 24ಕ್ಕೆ ರಷ್ಯಾ ಸೇನೆ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿತ್ತು. ಎರಡೂ ದೇಶಗಳ ನಡುವೆ ಭೀಕರ ಕದನ ಶುರುವಾಗಿತ್ತು. ರಷ್ಯಾ & ಉಕ್ರೇನ್ ನಡುವೆ ಯುದ್ಧದ ಭೀಕರತೆ ಶುರುವಾದ ನಂತರ ಭೀಕರ ಹಿಂಸಾಚಾರದಲ್ಲಿ ಲಕ್ಷಾಂತರ ಜನ ಜೀವ ಬಿಟ್ಟಿದ್ದಾರೆ ಎಂಬ ಆರೋಪ ಇದೆ. ಹೀಗಿದ್ದರೂ ಯುದ್ಧವನ್ನು ನಿಲ್ಲಿಸಲು ರಷ್ಯಾ ತಯಾರಿಲ್ಲ. ಮತ್ತೊಂದು ಕಡೆ ಪಾಶ್ಚಿಮಾತ್ಯ ದೇಶಗಳ ಜೊತೆಗೆ ನಿಲ್ಲುತ್ತಿರುವ ಇದೇ ಉಕ್ರೇನ್ ಅಧ್ಯಕ್ಷ, ರಷ್ಯಾ ಅಧ್ಯಕ್ಷ ಪುಟಿನ್ ಪಿತ್ತ ಕೆರಳಿಸುವ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಇದೆ.
ಶಾಂತಿ ಮಾತುಕತೆ ಯಾವಾಗ ನಡೆಯುತ್ತೆ?
ಒಟ್ನಲ್ಲಿ ರಷ್ಯಾ & ಉಕ್ರೇನ್ ಯುದ್ಧ ನಿಲ್ಲದ ಹೊರತು ಈ ಜಗತ್ತಿನಲ್ಲಿ ನೆಮ್ಮದಿಯಾಗಿ ಇರಲು ಸಾಧ್ಯ ಇಲ್ಲ ಎಂಬ ಮಾತು ಕೇಳಿಬರುತ್ತಿದೆ. ಈಗಾಗಲೇ ಹಲವು ಬಾರಿ ವಿಶ್ವಸಂಸ್ಥೆ ಆ ಪ್ರಯತ್ನ ಮಾಡಿ ವಿಫಲವಾಗಿದೆ. ಮುಂದಿನ ಪರಿಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದು, ಯುದ್ಧವನ್ನು ಆದಷ್ಟು ಬೇಗ ನಿಲ್ಲಿಸಬೇಕು ಎಂಬ ಒತ್ತಡ ಜೋರಾಗಿದೆ. ಹೀಗಾಗಿ ಇದೆಲ್ಲಾ ಎಲ್ಲಿಗೆ ಬಂದು ನಿಲ್ಲುತ್ತೆ? ಅನ್ನೋ ಚಿಂತೆ ನಡುವೆ ಒಂದು ಕಡೆ ರಷ್ಯಾ ಸೇನೆ ಮಿಸೈಲ್ & ಬಾಂಬ್ ದಾಳಿ ಮೂಲಕ ಉಕ್ರೇನ್‌ಗೆ ಏಟು ಕೊಡುತ್ತಿದೆ. ಹಾಗೇ ಇನ್ನೊಂದು ಕಡೆ ಉಕ್ರೇನ್ ಡ್ರೋನ್ ದಾಳಿಯ ಮೂಲಕ ರಷ್ಯಾ ತೈಲ ಸಂಗ್ರಹ ಘಟಕಗಳ ಮೇಲೆ ದಾಳಿ ಮಾಡ್ತಿದೆ.












Click it and Unblock the Notifications