ರಷ್ಯಾ ರಾಜಧಾನಿ ಮೇಲೆ ಹಾರಾಡಿದ ಉಕ್ರೇನ್ ಸೇನೆಯ ಡ್ರೋನ್‌ಗಳು

ರಷ್ಯಾ & ಉಕ್ರೇನ್ ಯುದ್ಧ ಈ ಜಗತ್ತಿಗೆ ಒಂದು ಗತಿ ಕಾಣಿಸಲು ಸಜ್ಜಾದಂತೆ ಕಾಣುತ್ತಿದೆ. ಇದೇ ಮಾತಿಗೆ ಪುಷ್ಟಿ ನೀಡುವ ಘಟನೆಗಳು ಅಲ್ಲಿ ಪ್ರತಿದಿನ ನಡೆಯುತ್ತಿವೆ. ಅದರಲ್ಲೂ ಇಬ್ಬರ ಮಧ್ಯೆ ಘನಘೋರ ಅಸ್ತ್ರಗಳ ಬಳಕೆ ಕೂಡ ಆಗುತ್ತಿರುವುದು ಈ ಭಯ ಹೆಚ್ಚಾಗಿಸುತ್ತಿದೆ. ರಷ್ಯಾ ಹಾಗೂ ಉಕ್ರೇನ್ ಪರಸ್ಪರ ಡ್ರೋನ್‌ಗಳ ಮೂಲಕ ಬಡಿದಾಡುತ್ತಿದ್ದು, ಇದೀಗ ರಷ್ಯಾ ರಾಜಧಾನಿ ಮೇಲೆ ಉಕ್ರೇನ್ ಹಾರಿಸಿದ ಹತ್ತಾರು ಡ್ರೋನ್‌ಗಳು ಅಬ್ಬರಿಸಿವೆ ಎನ್ನಲಾಗಿದೆ.

ಹೌದು, ರಷ್ಯಾ ರಾಜಧಾನಿ ಮಾಸ್ಕೋ ಮೇಲೆ ಉಕ್ರೇನ್ ಕಳೆದ 1 ವರ್ಷಗಳಿಂದ ನಿರಂತರವಾಗಿ ದಾಳಿ ನಡೆಯಲು ಯತ್ನಿಸುತ್ತಿದೆ ಎಂಬ ಆರೋಪ ಇದೆ. ಈ ಆರೋಪಗಳಿಗೆ ಬಲ ನೀಡುವಂತೆ ಇದೀಗ ಮತ್ತೊಂದು ಘಟನೆ ವರದಿಯಾಗಿದೆ.

Russia Alleged That They Have Been Destroyed Ukrainian Drones On Moscow

ರಷ್ಯಾ ರಾಜಧಾನಿ ಹಾಗೂ ಜಗತ್ತಿನ ಅತಿ ದುಬಾರಿ ನಗರಗಳ ಪೈಕಿ ಒಂದು ಎನ್ನಲಾಗಿರುವ ಮಾಸ್ಕೋ ಮೇಲೆ, ಉಕ್ರೇನ್ ಹಾರಿಸಿದ್ದ ಡ್ರೋನ್‌ಗಳನ್ನ ಪುಡಿ ಪುಡಿ ಮಾಡಿರುವುದಾಗಿ ರಷ್ಯಾ ಹೇಳಿದೆ. ಈ ಬಗ್ಗೆ ರಷ್ಯಾದ ರಕ್ಷಣಾ ಇಲಾಖೆ ಮಾಹಿತಿಯ ನೀಡಿದೆ. ಈ ಮೂಲಕ ಇಬ್ಬರ ನಡುವೆ ತಿಕ್ಕಾಟ ಮತ್ತಷ್ಟು ಹೆಚ್ಚಾಗಿದೆ.

ಪುಟಿನ್ ಮನೆಯ ಮೇಲೂ ಬಾಂಬ್!

ಕೆಲ ತಿಂಗಳ ಹಿಂದಷ್ಟೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಮನೆಯ ಮೇಲೂ ಉಕ್ರೇನ್ ಸೇನೆ ಡ್ರೋನ್ ದಾಳಿ ನಡೆಸಿರುವ ಆರೋಪ ಕೇಳಿಬಂದಿತ್ತು. ಅದ್ರಲ್ಲೂ ಪುಟಿನ್ ಅವರ ಅಧಿಕೃತ ಸರ್ಕಾರಿ ನಿವಾಸ ಕ್ರೆಮ್ಲಿನ್ ಮೇಲೆ ಭೀಕರವಾಗಿ ದಾಳಿ ನಡೆದಿತ್ತು.

ಈ ದಾಳಿಯಲ್ಲಿ, ಕೂದಲೆಳೆ ಅಂತರದಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಬಚಾವ್ ಆಗಿದ್ರು. ಈ ಘಟನೆ ನಡೆದ ಬಳಿಕ ರಷ್ಯಾದ ರಕ್ಷಣಾ ಇಲಾಖೆ & ರಷ್ಯಾ ಸೇನೆ ಪುಟಿನ್ ಅವರ ಸರ್ಕಾರಿ ನಿವಾಸಕ್ಕೆ ಭಾರಿ ಭದ್ರತೆ ಒದಗಿಸಿದೆ. ಹೀಗಿದ್ದಾಗಲೇ ಮತ್ತೊಮ್ಮೆ ರಷ್ಯಾ ರಾಜಧಾನಿ ಮೇಲೆ ಸದ್ದು ಮಾಡಿವೆ ಉಕ್ರೇನ್ ಡ್ರೋನ್‌ಗಳು.

Russia Alleged That They Have Been Destroyed Ukrainian Drones On Moscow

ಉಕ್ರೇನ್ ಮೇಲೆ ರಷ್ಯಾದಿಂದಲೂ ಅಟ್ಯಾಕ್

ಒಂದು ಕಡೆ ಉಕ್ರೇನ್ ಹೀಗೆ ರಷ್ಯಾ ಮೇಲೆ ದಾಳಿ ಮಾಡೋಕೆ ಯತ್ನ ಮಾಡುತ್ತಿದ್ದರೆ, ರಷ್ಯಾದ ಸೇನೆ ಕೂಡ ಉಕ್ರೇನ್ ವಿರುದ್ಧ ಘೋರವಾಗಿ ದಾಳಿ ನಡೆಸುತ್ತಿದೆ. ಇದರ ಪರಿಣಾಮ ಇಬ್ಬರ ಈ ಜಗಳ ಲಕ್ಷಾಂತರ ಅಮಾಯಕರ ಜೀವ ತೆಗೆದಿದೆ.

ಹಾಗೇ ಲೆಕ್ಕವಿಲ್ಲದಷ್ಟು ಜನರು ಬೀದಿಗೆ ಬಿದ್ದು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 2022ರ ಫೆಬ್ರವರಿಯಲ್ಲಿ ಆರಂಭವಾಗಿರುವ ಯುದ್ಧ, ಇನ್ನೇನು ಕೆಲವೇ ದಿನದಲ್ಲಿ 2 ವರ್ಷ ಪೂರೈಸಲಿದೆ. ಹೀಗಿದ್ದಾಗ ಇಬ್ಬರ ಮಧ್ಯೆ ಸಂಧಾನವನ್ನು ನಡೆಸುವ ಪ್ರಯತ್ನ ಕೂಡ ಆಗುತ್ತಿಲ್ಲ.

ಒಂದು ಯುದ್ಧ ಹೇಗೆಲ್ಲಾ ಮನುಷ್ಯನ ಭವಿಷ್ಯ ಹಾಳು ಮಾಡಬಹುದು ಅನ್ನೋದಕ್ಕೆ ಆಧುನಿಕ ಜಗತ್ತು ಮತ್ತೆ ಮತ್ತೆ ಸಾಕ್ಷಿಯಾಗುತ್ತಿದೆ. ಅದರಲ್ಲೂ ಎರಡು ಮಹಾಯುದ್ಧ ಕಂಡರೂ ಮನುಷ್ಯ ಶಾಂತಿಯಿಂದ ಬದುಕದೆ ಹೀಗೆ ಮತ್ತೆ ಮತ್ತೆ ಯುದ್ಧಗಳನ್ನು ಮಾಡುತ್ತಿರುವುದು, ಇಡೀ ಭೂಮಿ ಭವಿಷ್ಯದ ಮೇಲೆ ಪ್ರಭಾವ ಬೀರುತ್ತಿರುವುದು ಸುಳ್ಳಲ್ಲ. ವಿಶ್ವಸಂಸ್ಥೆ ಕೂಡ ಉಕ್ರೇನ್ VS ರಷ್ಯಾ ಯುದ್ಧವನ್ನ ನಿಲ್ಲಿಸುವಲ್ಲಿ ಪದೇ ಪದೆ ವಿಫಲವಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+