Russia & Ukraine War: ಉಕ್ರೇನ್ ಡ್ರೋನ್ ಉಡೀಸ್ ಮಾಡಿದ ರಷ್ಯಾ?

ಮಾಸ್ಕೋ: ರಷ್ಯಾ ತನ್ನ ದಾಳಿ ಭೀಕರಗೊಳಿಸಿದ ನಂತರ ಉಕ್ರೇನ್ ಕೂಡ ಅತ್ಯಾಧುನಿಕ ಅಸ್ತ್ರಗಳ ಬಳಕೆಗೆ ಮುಂದಾಗಿದೆ. ಇದೀಗ ರಷ್ಯಾ ರಾಜಧಾನಿ ಮಾಸ್ಕೊ ಹೊರವಲಯದಲ್ಲಿ ಉಕ್ರೇನ್‌ ಡ್ರೋನ್ ಮೂಲಕ ದಾಳಿ ನಡೆಸಲು ಮುಂದಾಗಿದ್ದು, ಆ ಡ್ರೋನ್‌ನ ಹೊಡೆದು ಉರುಳಿಸಿದ್ದೇವೆ ಎಂದಿದೆ ರಷ್ಯಾ ರಕ್ಷಣಾ ಸಚಿವಾಲಯ.

ಹೌದು ಜುಲೈ ತಿಂಗಳಲ್ಲಿ ಮಾಸ್ಕೋ ಮೇಲೆ ನಡೆದ ಬರೋಬ್ಬರಿ 3ನೇ ಡೋನ್ ದಾಳಿ ಇದಾಗಿದೆ ಎನ್ನಲಾಗಿದೆ. ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಭೀಕರ ಕಾಳಗ ಇಂದಿಗೆ 520ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಸಂದರ್ಭದಲ್ಲಿ ರಷ್ಯಾ ವಿರುದ್ಧ ನಾವು ದೊಡ್ಡ ಗೆಲುವು ಸಾಧಿಸಿದ್ದೇವೆ ಎಂದು ಉಕ್ರೇನ್ ಹೇಳಿಕೊಂಡಿತ್ತು. ಈ ಹೇಳಿಕೆ ಬಳಿಕ ಮಾಸ್ಕೋ ಸುತ್ತಲೂ ಉಕ್ರೇನ್‌ನ ಡ್ರೋನ್ ಹಾರಾಡಿದ ಬಗ್ಗೆ ರಷ್ಯಾ ಆರೋಪ ಮಾಡಿದೆ. ಅಲ್ಲದೆ ಆ ಡ್ರೋನ್‌ನ ಹೊಡೆದು ಉರುಳಿಸಿದ್ದೇವೆ ಎಂದಿದೆ ರಷ್ಯಾ. ಆದರೆ ಉಕ್ರೇನ್ ಡ್ರೋನ್‌ನಿಂದ ಹಾನಿಯಾದ ಬಗ್ಗೆ ರಷ್ಯಾ ಮಾಹಿತಿ ನೀಡಿಲ್ಲ.

ukraine-drone-in-moscow

ಏನಿದು ದಿಢೀರ್ ಡ್ರೋನ್ ಅಟ್ಯಾಕ್?

ಅಷ್ಟಕ್ಕು ಯುದ್ಧ ಶುರುವಾದ ನಂತ್ರ ಉಕ್ರೇನ್ ಸೇನೆ ಸಾಕಷ್ಟು ಪ್ರದೇಶ ಕಳೆದುಕೊಂಡಿದೆ. ಹೀಗೆ ಉಕ್ರೇನ್ ಕೈಬಿಟ್ಟು ಹೋದ ಪ್ರಮುಖ ಪ್ರದೇಶಗಳ ಪೈಕಿ ದಕ್ಷಿಣ ಭಾಗದಲ್ಲಿ ದೊಡ್ಡ ನಷ್ಟ ಎದುರಾಗಿತ್ತು. ಇದೀಗ ಸಾರೋಮೈಯೋಸ್ಕಿ ಭಾಗದಲ್ಲಿ ಹಳ್ಳಿಯೊಂದನ್ನು ರಷ್ಯಾ ಸೇನೆಯ ವಶದಿಂದ ಮರಳಿ ಪಡೆದಿದ್ದೇವೆ ಎಂದಿದೆ ಉಕ್ರೇನ್. ಈ ಬಗ್ಗೆ ಉಕ್ರೇನ್ ಅಧ್ಯಕ್ಷ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ನಮ್ಮ ದಕ್ಷಿಣ! ನಮ್ಮ ಹುಡುಗರು, ಉಕ್ರೇನ್‌ಗೆ ವಿಜಯ ಎಂದು ಬರೆದುಕೊಂಡಿದ್ದರು. ಹೀಗೆ ಉಕ್ರೇನ್ ಅಧ್ಯಕ್ಷರ ಹೇಳಿಕೆ ಬಳಿಕ ಮಾಸ್ಕೋ ಬಳಿ ಡ್ರೋನ್ ಕಂಡುಬಂದ ಆರೋಪ ಕೇಳಿಬಂದಿದೆ.

ಅದೆಲ್ಲಾ ಸುಳ್ಳು ಅಂತಿದೆ ರಷ್ಯಾ!

ಹೌದು, ಆ ಕಡೆ ಉಕ್ರೇನ್ ನಾವು ಗೆಲುವು ಸಾಧಿಸಿದ್ದೇವೆ ಅಂತಿದೆ. ಆದರೆ ಈ ಬಗ್ಗೆ ರಷ್ಯಾ ಮಾತ್ರ ವ್ಯತಿರಿಕ್ತ ಹೇಳಿಕೆ ನೀಡಿದೆ. ಉಕ್ರೇನ್ ನಮ್ಮಿಂದ ಯಾವುದೇ ಪ್ರದೇಶವನ್ನೂ ವಶಕ್ಕೆ ಪಡೆದಿಲ್ಲ. ರಷ್ಯಾ ಸೇನೆಯ ದಾಳಿಯಿಂದ ಉಕ್ರೇನ್ ಜರ್ಜರಿತವಾಗಿದೆ ಎಂದಿದೆ. ಈ ವೇಳೆ ತನ್ನ ದಾಳಿಯನ್ನು ಮತ್ತಷ್ಟು ಭೀಕರಗೊಳಿಸುವ ಮುನ್ಸೂಚನೆ ನೀಡಿದೆ ರಷ್ಯಾ. ಹೀಗಾಗಿ ಉಕ್ರೇನ್ ನಿವಾಸಿಗಳಲ್ಲಿ ನಡುಕ ಶುರುವಾಗಿದ್ದು, ಈ ಇಬ್ಬರ ಕಿತ್ತಾಟದಲ್ಲಿ ಅಮಾಯಕರು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಇದೀಗ ತನ್ನ ದೇಶದ ಗಡಿಯೊಳಗೆ ಬಂದಿದ್ದ ಉಕ್ರೇನ್ ಡ್ರೋನ್ ಉಡೀಸ್ ಮಾಡಿದ್ದೇವೆ ಎಂದು ಮಾಹಿತಿ ನೀಡಿದೆ ರಷ್ಯಾ.

ukraine-drone-in-moscow

520ನೇ ದಿನಕ್ಕೆ ಕಾಲಿಟ್ಟ ಯುದ್ಧ

ಕೆಲವೇ ದಿನದಲ್ಲಿ ಮುಗಿದು ಹೋಗುತ್ತೆ ಎಂದು ಅಂದುಕೊಂಡಿದ್ದ ರಷ್ಯಾ ಮತ್ತು ಉಕ್ರೇನ್ ಯುದ್ಧ ಸುಮಾರು ಒಂದೂವರೆ ವರ್ಷ ಮುಗಿಸಿದೆ. ಇಂದಿಗೆ 520ನೇ ದಿನಕ್ಕೆ ಕಾಲಿಟ್ಟಿರುವ ಈ ರಣಭೀಕರ ಕಾಳಗ ನಿಲ್ಲುವ ಮುನ್ಸೂಚನೆ ಇಲ್ಲ. ರಷ್ಯಾ ಕೂಡ ಯುದ್ಧವನ್ನು ಇನ್ನೂ ಮುಂದಕ್ಕೆ ಕೊಂಡೊಯ್ಯಲು ಸನ್ನದ್ಧವಾಗಿದೆ. ಉಕ್ರೇನ್ ಪರದಾಡುತ್ತಿರುವಾಗ ಪಾಶ್ಚಿಮಾತ್ಯ ರಾಷ್ಟ್ರಗಳು ನೆರವಿಗೆ ನಿಂತಿವೆ. ಇದು ರಷ್ಯಾ ಅಧ್ಯಕ್ಷ ಪುಟಿನ್‌ರನ್ನ ಇನ್ನಷ್ಟು ಕೆರಳಿಸುತ್ತಿದೆ. ಹೀಗಾಗಿ ರಷ್ಯಾ ಹಾಗೂ ಉಕ್ರೇನ್ ಯುದ್ಧ ಕ್ಷಣಕ್ಷಣಕ್ಕೂ ಭೀಕರ ಸ್ವರೂಪ ಪಡೆಯುತ್ತಿದೆ. ನೋಡ ನೋಡುತ್ತಲೇ ಯುದ್ಧ 520 ದಿನ ಪೂರೈಸಿದ್ದು, ಇನ್ನೇನು 2ನೇ ವರ್ಷವನ್ನೂ ಈ ಯುದ್ಧ ಪೂರೈಸುವ ಸಾಧ್ಯತೆ ದಟ್ಟವಾಗಿದೆ.

ಹೀಗೆ ರಷ್ಯಾ ಮತ್ತು ಉಕ್ರೇನ್ ಸೇಡಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ದಾಳಿ ನಡೆಸುತ್ತಿದ್ದಾರೆ. ಆದರೆ ಈ ದಾಳಿ ಅಮಾಯಕರ ಬದುಕನ್ನು ಕತ್ತಲೆಗೆ ತಳ್ಳುತ್ತಿದೆ. ಈಗಾಗಲೇ ಲಕ್ಷಾಂತರ ಜನರು ರಷ್ಯಾ & ಉಕ್ರೇನ್ ಯುದ್ಧದಲ್ಲಿ ಜೀವವನ್ನೇ ಕಳೆದುಕೊಂಡಿದ್ದು, ಲೆಕ್ಕವಿಲ್ಲದಷ್ಟು ಜನರ ಬದುಕು ಬೀದಿಗೆ ಬಿದ್ದಿದೆ. ಆದರೂ ಯುದ್ಧ ನಿಲ್ಲುತ್ತಿಲ್ಲ, ಎರಡೂ ದೇಶಗಳ ನಡುವೆ ರಕ್ತದಾಹ ಕಡಿಮೆ ಆಗುತ್ತಿಲ್ಲ ಎಂಬುದೇ ಬೇಸರದ ಸಂಗತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+