ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರುಕ್ಸನಾ ಲಷ್ಕರ್ ಕಮಾಂಡರ್ ಕೊಂದಿದ್ದು ಹೇಗೆ ಗೊತ್ತಾ?

By ವಿಕಾಸ್ ನಂಜಪ್ಪ
|
Google Oneindia Kannada News

ಶ್ರೀನಗರ, ಆ.೧ : ಕಾಶ್ಮೀರದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ಎಂಬ ಸುದ್ದಿಯನ್ನು ಪ್ರತಿದಿನ ಕೇಳುತ್ತೇವೆ. ಉಗ್ರರಿಗೆ ಸ್ಥಳೀಯರು ಸಹಕಾರ ನೀಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತವೆ. ಆದರೆ, ರುಕ್ಸನಾ ಕೌಸರ್ ಬಗ್ಗೆ ತಿಳಿದರೆ ನಮ್ಮ ನಿಲುವು ಬದಲಾಗುತ್ತದೆ.

ಹೆಂಡತಿ ನೋಡಲು ಬಂದು ಬಲಿಯಾದ ಉಗ್ರ ಅಬು ದುಜಾನ!ಹೆಂಡತಿ ನೋಡಲು ಬಂದು ಬಲಿಯಾದ ಉಗ್ರ ಅಬು ದುಜಾನ!

ರುಕ್ಸನಾ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯವರು. ದೇಶದ ಗಡಿ ನಿಯಂತ್ರಣ ರೇಖೆಯಿಂದ ಸುಮಾರು 30 ಕಿ.ಮೀ ದೂರದಲ್ಲಿ ರುಕ್ಸನಾ ಮನೆಯಿದೆ. ತಂದೆ ನೂರ್ ಹುಸೈನ್, ತಾಯಿ ರಶೀದಾ ಬೇಗಂ ಮತ್ತು ಸಹೋದರರ ಜೊತೆ ರುಕ್ಸನಾ ವಾಸವಾಗಿದ್ದಾರೆ.

Rukhsana Kausar the braveheart who axed the terrorists

2009ರ ಸೆಪ್ಟೆಂಬರ್ 27ರಂದು ರುಕ್ಸನಾ ಮನೆಗೆ ಉಗ್ರರು ನುಗ್ಗಿದ್ದರು. ಮನೆಗೆ ನುಗ್ಗಿದ ಉಗ್ರರು ಊಟ ಮತ್ತು ಅಡಗಿಕೊಳ್ಳಲು ಜಾಗ ಕೇಳಿದ್ದರು. ರುಕ್ಸನಾ ತಂದೆ ನೂರ್ ಹುಸೈನ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆಗ ಅವರ ಮೇಲೆ ಉಗ್ರರು ಹಲ್ಲೆ ನಡೆಸಲು ಆರಂಭಿಸಿದರು.

ಸೇನೆ ಮತ್ತು ಉಗ್ರರ ನಡುವೆ ಕಾಶ್ಮೀರದಲ್ಲಿ ಗುಂಡಿನ ಚಕಮಕಿಸೇನೆ ಮತ್ತು ಉಗ್ರರ ನಡುವೆ ಕಾಶ್ಮೀರದಲ್ಲಿ ಗುಂಡಿನ ಚಕಮಕಿ

ಉಗ್ರರು ಮನೆಗೆ ನುಗ್ಗಿದಾಗ ಮಂಚದ ಕೆಳಗೆ ಅವಿತಿದ್ದ ರುಕ್ಸಾನಾ, ತಂದೆಗೆ ಹೊಡೆಯಲು ಆರಂಭಿಸಿದ ಮೇಲೆ ಕೈಯಲ್ಲಿ ಕೊಡಲಿ ಹಿಡಿಯ ತಂದೆಗೆ ಹೊಡೆಯುತ್ತಿದ್ದ ಉಗ್ರನ ಮೇಲೆ ದಾಳಿ ಮಾಡಿದಳು. ಆತನ ಬಳಿ ಇದ್ದ ಎಕೆ 47 ಗನ್ ಕಸಿದುಕೊಂಡು ಉಗ್ರನಿಗೆ ಗುಂಡು ಹಾರಿಸಿ ಕೊಂದಳು. ಉಳಿದ ಇಬ್ಬರು ಉಗ್ರರತ್ತವೂ ಗುಂಡು ಹಾರಿಸಿದಳು.

ನಂತರ ಸಹೋದರರ ಜೊತೆ ಪೊಲೀಸ್ ಠಾಣೆಗೆ ಹೋದ ರುಕ್ಸನಾ ಶಸ್ತ್ರಸ್ತ್ರಾಗಳನ್ನು ಅವರಿಗೆ ಒಪ್ಪಿಸಿದಳು. ರುಕ್ಸನಾ ಹತ್ಯೆ ಮಾಡಿದ ಉಗ್ರ ಸಾಮಾನ್ಯದವನಾಗಿರಲಿಲ್ಲ. ಲಷ್ಕರ್-ಏ-ತೋಬ್ಪಾದ ಕಮಾಂಡರ್ ಅಬು ಓಸಮಾ ಆಗಿದ್ದ.

ರುಕ್ಸನಾ ಶೌರ್ಯಕ್ಕೆ ಮೆಚ್ಚಿ ಅವರಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ನೀಡಲಾಯಿತು. ಸರ್ವೋತ್ತಮ ಜೀವನ್ ರಕ್ಷಾ ಪದಕ, ಸರ್ದಾರ್ ಪಟೇಲ್ ಪ್ರಶಸ್ತಿ, ಝಾನ್ಸಿ ರಾಣಿ ಶೌರ್ಯ ಪ್ರಶಸ್ತಿ ನೀಡಲಾಯಿತು.

ರುಕ್ಸನಾಗೆ ಸಿಕ್ಕ ಪ್ರಶಸ್ತಿಗಳು
* ಜಮ್ಮು ಮತ್ತು ಕಾಶ್ಮೀರ ಸರ್ಕಾರದಿಂದ 5000 ರೂ. ನಗದು ಬಹುಮಾನ
* 2009ರ ಅಕ್ಟೋಬರ್ ನಲ್ಲಿ ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಶೌರ್ಯ ಪ್ರಶಸ್ತಿ
* ಸರ್ದಾರ್ ಪಟೇಲ್ ಪ್ರಶಸ್ತಿ ಮತ್ತು ಒಂದು ಲಕ್ಷ ರೂ. ನಗದು ಬಹುಮಾನ ಗುಜರಾತ್ ಎಐಎಟಿಎಫ್ ನಿಂದ

English summary
Read about Rukhsana Kausar, who killed Abu Osama, a commander of Lashkar-e-Taiba. Abu Osama and three more terrorists attacked the house of Rukhsana Kausar at Upper Kalsi in Jammu and Kashmir's Rajouri district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X