ರೊಹಿಂಗ್ಯಾ ಮುಸ್ಲಿಮರಿಂದ ಆಗಸ್ಟ್‌ನಲ್ಲಿ 99 ಹಿಂದೂಗಳ ಹತ್ಯೆ
ಕಳೆದ ವರ್ಷದ ಆಗಸ್ಟ್‌ನಲ್ಲಿ ರೊಹಿಂಗ್ಯಾ ಮುಸ್ಲಿಂ ಗುಂಪು ಹಿಂದೂಗಳ ಸಾಮೂಹಿಕ ಹತ್ಯಾಕಾಂಡ ನಡೆಸಿರುವುದಕ್ಕೆ ಪುರಾವೆಗಳನ್ನು ಕಲೆಹಾಕಿರುವುದಾಗಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಹೇಳಿದೆ.
ಖಾ ಮೌಂಗ್ ಸೀಕ್ ಎಂಬ ಗ್ರಾಮದ ಸಮೀಪ ರೊಹಿಂಗ್ಯಾ ಮುಸ್ಲಿಮರು ಸುಮಾರು 99 ಹಿಂದೂಗಳನ್ನು ಕೊಂದುಹಾಕಿದ್ದಾರೆ ಎಂದು ವರದಿ ತಿಳಿಸಿದೆ.
ಗ್ರಾಮ ಹಾಗೂ ಬಾಂಗ್ಲಾದೇಶದ ಗಡಿ ಭಾಗದಲ್ಲಿ ನಡೆಸಿದ ಹತ್ತಾರು ಸಂದರ್ಶನಗಳನ್ನು, ವಿಧಿವಿಜ್ಞಾನ ತಜ್ಞರು ವಿಶ್ಲೇಷಿಸಿದ ಛಾಯಾಚಿತ್ರಗಳ ಪುರಾವೆಗಳ ಆಧಾರದಲ್ಲಿ ಅರಕನ್ ರೊಹಿಂಗ್ಯಾ ಸಾಲ್ವೇಷನ್ ಆರ್ಮಿ (ಎಆರ್ಎಸ್‌ಎ) ಬಂಡುಕೋರರು ಹಿಂದೂಗಳು ಮತ್ತು ಇತರೆ ಸಮುದಾಯಗಳ ಮೇಲೆ ಅಮಾನುಷ ದಾಳಿಯಿಂದ ಹೇಗೆ ಭೀತಿ ಹುಟ್ಟಿಸಿದ್ದರು ಎಂಬುದನ್ನು ಬಹಿರಂಗಪಡಿಸಲಾಗಿದೆ.

ಎಆರ್‌ಎಸ್‌ಎ ಉತ್ತರ ರಖಿನೆ ಪ್ರದೇಶದಲ್ಲಿ ನಡೆಸಿದ ಮಾನವ ಹಕ್ಕುಗಳ ಉಲ್ಲಂಘನೆಗಳು ಕರಾಳ ಇತಿಹಾಸವಾಗಿದ್ದು, ಅವು ಹೆಚ್ಚು ವರದಿಯಾಗಿರಲಿಲ್ಲ. ನಮ್ಮ ಇತ್ತೀಚಿನ ತನಿಖೆಗಳು ಅವುಗಳ ಮೇಲೆ ಬೆಳಕು ಚೆಲ್ಲಿವೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಬಿಕ್ಕಟ್ಟು ಸ್ಪಂದನಾ ನಿರ್ದೇಶಕಿ ತಿರಾನಾ ಹಸನ್ ತಿಳಿಸಿದ್ದಾರೆ.
2017ರ ಆಗಸ್ಟ್ 25ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಎಆರ್‌ಎಸ್ಎ ಉತ್ತರ ಮೌಂಗ್‌ಡಾ ಪಟ್ಟಣದ ಖಾ ಮೌಂಗ್ ಸೀಕ್ ಗ್ರಾಮಗಳ ಸಮೂಹದಲ್ಲಿರುವ ಅಹ್ ನೌಕ್ ಖಾ ಮೌಂಗ್ ಸೀಕ್ ಎಂಬ ಹಳ್ಳಿಯಲ್ಲಿರುವ ಹಿಂದೂ ಸಮುದಾಯದ ಮೇಲೆ ದಾಳಿ ನಡೆಸಿತ್ತು.
ಮುಸ್ಲಿಮರು ಹೆಚ್ಚಿರುವ ರೊಹಿಂಗ್ಯಾ ಗ್ರಾಮ ಮತ್ತು ಬೌದ್ಧರು ಹೆಚ್ಚಿರುವ ರಖಿನೆ ಗ್ರಾಮಗಳ ಸಮೀಪದಲ್ಲೇ ಹಿಂದೂಗಳು ವಾಸಿಸುತ್ತಿದ್ದರು.
ಕಪ್ಪು ಬಟ್ಟೆ ಧರಿಸಿದ ಸಶಸ್ತ್ರಧಾರಿಗಳು ಮತ್ತು ಸ್ಥಳೀಯ ರೊಹಿಂಗ್ಯಾ ಗ್ರಾಮಸ್ಥರು ಅಲ್ಲಿದ್ದ ಹಿಂದೂ ಮಹಿಳೆಯರು, ಪುರುಷರು ಮತ್ತು ಮಕ್ಕಳನ್ನು ಸುತ್ತವರೆದಿದ್ದರು. ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿ, ದೋಚಿದ್ದರು. ಬಳಿಕ ಅವರ ಕಣ್ಣಿಗೆ ಬಟ್ಟೆ ಕಟ್ಟಿ ಗ್ರಾಮದ ಹೊರವಲಯಕ್ಕೆ ಮೆರವಣಿಗೆ ಮಾಡಿಸಿದ್ದರು.
ಅಲ್ಲಿ, ಪುರುಷರನ್ನು ಮಹಿಳೆಯರು ಮತ್ತು ಮಕ್ಕಳಿಂದ ಪ್ರತ್ಯೇಕಗೊಳಿಸಿದ್ದರು. ಕೆಲವೇ ಗಂಟೆಗಳಲ್ಲಿ 53 ಹಿಂದೂ ಪುರುಷರನ್ನು ಹತ್ಯೆ ಮಾಡಿದ್ದರು.
ಎಂಟು ಹಿಂದೂ ಮಹಿಳೆಯರು ಮತ್ತು ಎಂಟು ಮಕ್ಕಳನ್ನು ಅಪಹರಿಸಲಾಗಿತ್ತು. ಅವರು ಮುಸ್ಲಿಂ ಧರ್ಮಕ್ಕೆ ಮತಾಂತರ ಹೊಂದಲು ಒಪ್ಪಿದ್ದರಿಂದ ಬಿಟ್ಟುಬಿಡಲಾಯಿತು. ಕೆಲವು ದಿನಗಳ ಬಳಿಕ ಉಳಿದವರನ್ನು ಬಲವಂತವಾಗಿ ಬಂಡುಕೋರರು ತಮ್ಮೊಂದಿಗೆ ಬಾಂಗ್ಲಾದೇಶಕ್ಕೆ ಕರೆದೊಯ್ದಿದ್ದರು.
2017ರ ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ದೇಶಗಳ ಸಹಮತದೊಂದಿಗೆ ಅವರನ್ನು ಮ್ಯಾನ್ಮಾರ್‌ಗೆ ಗಡಿಪಾರು ಮಾಡಲಾಗಿತ್ತು.
ಈ ಹತ್ಯಾಕಾಂಡದಿಂದ ತಪ್ಪಿಸಿಕೊಂಡಿದ್ದ 22 ವರ್ಷದ ಮಹಿಳೆ ಬಿನ್ ಬಾಲಾ, 'ಬಂಡುಕೋರರು ಚಾಕು ಮತ್ತು ಉದ್ದನೆಯ ಕಬ್ಬಣದ ರಾಡುಗಳನ್ನು ಹಿಡಿದುಕೊಂಡಿದ್ದರು. ನಮ್ಮ ಕೈಗಳನ್ನು ಹಿಂದಕ್ಕೆ ಕಟ್ಟಿಹಾಕಿದ್ದರು ಮತ್ತು ಕಣ್ಣಿಗೆ ಬಟ್ಟೆ ಕಟ್ಟಿದ್ದರು. ನೀವೇನು ಮಾಡುತ್ತಿದ್ದೀರಿ ಎಂದು ಅವರನ್ನು ಕೇಳಿದೆ. ಅದಕ್ಕೆ ನೀವು ಮತ್ತು ರಖಿನೆಗಳು ಒಂದೇ. ನೀವು ಬೇರೆ ಧರ್ಮಕ್ಕೆ ಸೇರಿದವರು. ಇಲ್ಲಿ ವಾಸಿಸುವಂತಿಲ್ಲ ಎಂದರು.
ಅವರು ರೊಹಿಂಗ್ಯಾ ಭಾಷೆ ಮಾತನಾಡುತ್ತಿದ್ದರು. ನಮ್ಮ ಬಳಿ ಯಾವ ಯಾವ ವಸ್ತುಗಳಿವೆ ಕೇಳಿದರು. ಬಳಿಕ ಹೊಡೆದರು. ಹೀಗಾಗಿ ನಾನು ನನ್ನ ಚಿನ್ನಾಭರಣ ಮತ್ತು ಹಣವನ್ನೆಲ್ಲಾ ಕೊಟ್ಟುಬಿಟ್ಟೆ' ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ಗೆ ತಿಳಿಸಿದರು.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications