ಟ್ವಿಟ್ಟರ್‌ನಲ್ಲಿಯೇ #RIPTwitter ಟ್ರೆಂಡ್ ಕಾರಣ ಏನು?
ಬೆಂಗಳೂರು,
ಮಾರ್ಚ್ 6: ನಿನ್ನೆಯಿಂದ ಟ್ವಿಟ್ಟರ್‌ನಲ್ಲಿ #RIPTwitter ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗುತ್ತಿದೆ. ಸಾಮಾನ್ಯವಾಗಿ ನೆಟ್ಟಿಗರು ಯಾವುದಾದರೂ ವಿಷಯದ ಬಗ್ಗೆ, ತಮ್ಮ ಬೇಸರವನ್ನು ಈ ರೀತಿಯ ಹ್ಯಾಶ್ ಟ್ಯಾಗ್ ಮೂಲಕ ಹೊರಹಾಕುತ್ತಿದ್ದರು. ಆದರೆ, ಇದೀಗ ಟ್ವಿಟ್ಟರ್ ಮೇಲಿನ ಕೋಪವನ್ನು ಅದರ ಮೂಲಕವೇ ಬಳಕೆದಾರರು ವ್ಯಕ್ತಪಡಿಸುತ್ತಿದ್ದಾರೆ. id="toptextpromo"> id='are-slot-1' class='oiad oi-axt oiadv'>ಟ್ವಿಟ್ಟರ್‌ನಲ್ಲಿ
ಮತ್ತೊಂದು ಫೀಚರ್ ಬರುತ್ತಿದೆ. ಫೇಸ್ ಬುಕ್, ಸ್ನಾಪ್ ಚಾಟ್, ಇನ್ಸ್ಸ್ಟಾಗ್ರಾಮ್ ನಲ್ಲಿ ಇದ್ದ ಹಾಗೆ 'ಸ್ಟೋರಿಸ್' ಫೀಚರ್ ಟ್ವಿಟ್ಟರ್ ನಲ್ಲಿ ಇನ್ನು ಮುಂದೆ ಇರಲಿದೆ. 'ಫೀಟ್ಸ್' ಹೆಸರಿನಲ್ಲಿ ಟ್ವಿಟ್ಟರ್ ನಲ್ಲಿ ಈ ಫೀಚರ್ ಬಳಕೆದಾರರಿಗೆ ಸಿಗುತ್ತಿದೆ. ಸದ್ಯಕ್ಕೆ ಈ ಫೀಚರ್ ಬ್ರಜಿಲ್ ನಲ್ಲಿ ಮಾತ್ರ ಲಭ್ಯವಿದ್ದು, ಟೆಸ್ಟಿಂಗ್ ನಡೆಯುತ್ತಿದೆ. ಆದರೆ, ಟ್ವಿಟ್ಟರ್ ತಂದಿರುವ 'ಫೀಟ್ಸ್' ಫೀಚರ್ ಪ್ರಾರಂಭದಲ್ಲಿಯೇ ಬಳಕೆದಾರ ಬೇಸರಕ್ಕೆ ಕಾರಣವಾಗಿದೆ. id='are-slot-2' class='oiad oi-axt oiadv'>
#RIPTwitter ಟ್ರೆಂಡ್ ಆಗ್ತಿದೆ
ಟ್ವಿಟ್ಟರ್ ನಲ್ಲಿ #RIPTwitter ಹ್ಯಾಶ್ ಟ್ಯಾಗ್ ಟ್ರೆಂಡ್ ಆಗುತ್ತಿದೆ. ಅನೇಕರು ಈ ಹ್ಯಾಶ್ ಟ್ಯಾಗ್ ಮೂಲಕ ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ. ಟ್ವಿಟ್ಟರ್ ತನ್ನ ಹೊಸ ಫೀಚರ್ 'ಫೀಟ್ಸ್' ಬಳಕೆದಾರರಿಗೆ ಖುಷಿ ಆಗುತ್ತದೆ ಎಂದುಕೊಂಡಿತ್ತು. ಆದರೆ, ಈ ಫೀಚರ್ ಸೇರಿಸಿಕೊಳ್ಳುತ್ತಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಪರಿಣಾಮ #RIPTwitter ಟ್ರೆಂಡ್ ಆಗುತ್ತಿದೆ.

ಕಾರಣ ಏನು?
ಹೊಸ ಫೀಚರ್ ಸೇರಿಸಿದಕ್ಕೆ ಬಳಕೆದಾರರು ಏಕೆ ಬೇಸರಗೊಳ್ಳಬೇಕು ಎನ್ನುವ ಪ್ರಶ್ನೆ ಕೆಲವರಿಗೆ ಮೂಡಬಹುದು. ಆದರೆ, ಈ ಫೀಚರ್ ನಿಂದ ಟ್ವಿಟ್ಟರ್ ಬಗ್ಗೆ ಬಳಕೆದಾರರು ಆಕ್ರೋಶಗೊಂಡಿದ್ದಾರೆ. ಟ್ವಿಟ್ಟರ್ ನಲ್ಲಿ 'ಎಡಿಟ್' ಆಯ್ಕೆ ಬೇಕು ಎಂದು ಎಷ್ಟು ಒತ್ತಾಯ ಮಾಡಿದರೂ, ಪರಿಗಣಿಸಿದ ಟ್ವಿಟ್ಟರ್, ಈಗ 'ಫೀಟ್ಸ್' ಫೀಚರ್ ತಂದಿರುವುದು ಅವರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಾಡಕ್ಟ್ ಹೆಡ್ ಹೇಳಿದ್ದೇನು?
ಟ್ವಿಟ್ಟರ್ ಪ್ರಾಡಕ್ಟ್ ಲೀಡ್ ಕಾವ್ಯೊನ್ ಬಾಯ್ಕಪುರ್ ಹೊಸ ಫೀಚರ್ ಬಗ್ಗೆ ಮಾತನಾಡಿದ್ದಾರೆ. ಟ್ವಿಟ್ಟರ್ ನಲ್ಲಿ ಏನೇ ಪೋಸ್ಟ್ ಮಾಡಿದರೂ, ಅದು ಶಾಶ್ವತವಾಗಿ ಇರುತ್ತಿತ್ತು. ಕೆಲವರು ತಮ್ಮ ಕೆಲವು ಪೋಸ್ಟ್ ಗಳು ಹಾಗೆಯೇ ಇರುವುದು ಅಪಾಯ ಎಂದು ಭಾವಿಸುತ್ತಿದ್ದರು. ಹಾಗಾಗಿ 24 ಗಂಟೆ ಮಾತ್ರ ಇರುವಂತಹ ಫೀಚರ್ 'ಫೀಟ್ಸ್' ತಂದಿದ್ದೇವೆ ಎಂದಿದ್ದಾರೆ.

ಕಾಪಿ ಮಾಡಿದ್ದಾರೆ ಎನ್ನುವ ಆರೋಪ
ಟ್ವಿಟ್ಟರ್ ಪ್ರಾಡಕ್ಟ್ ಲೀಡ್ ಏನೇ ಕಾರಣ ಹೇಳಿದರು ಬಳಕೆದಾರರು ಅದನ್ನು ಕೇಳುತ್ತಿಲ್ಲ. ಬಳಕೆದಾರರ ಅಗತ್ಯವನ್ನು ಅರಿಯದೆ, ಹೊಸ ಫೀಚರ್ ಸೇರಿಸಿರುವುದು ತಪ್ಪು ಎಂದಿದ್ದಾರೆ. ಅಲ್ಲದೆ 'ಫೀಟ್ಸ್' ಫೀಚರ್ ಸ್ನಾಪ್ ಶಾಟ್ ನಿಂದ ಕಾಪಿ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಟ್ವಿಟ್ಟರ್ ಬರುಬರುತ್ತಾ ಸ್ವಂತಿಕೆ ಇಲ್ಲದೆ ಬೇರೆ ಸೋಷಿಯಲ್ ಮೀಡಿಯಾ ಫ್ಲಾಟ್ ಫಾಮ್ ರೀತಿಯೇ ಆಗುತ್ತಿದೆ ಎಂದಿದ್ದಾರೆ.












Click it and Unblock the Notifications