ಕೋವಿಡ್ ಪ್ರಸರಣ ತಡೆಗೆ ಚ್ಯೂಯಿಂಗಮ್ ಸಂಶೋಧನೆ

ಕೊರೊನಾ ಸೋಂಕು ಹರಡದಂತೆ ತಡೆಯಲು ಸಂಶೋಧಕರು ಚ್ಯೂಯಿಂಗಮ್ ಅಭಿವೃದ್ಧಿಪಡಿಸಿದ್ದಾರೆ.

ಕೋವಿಡ್-19 ಪ್ರಸರಣ ತಡೆಗೆ ಸಂಶೋಧಕರು ಹೊಸ ಮದ್ದು ಕಂಡುಹಿಡಿದಿದ್ದಾರೆ. ಪೆನ್ಸ್ ಸ್ಕೂಲ್ ಆಫ್ ಡೆಂಟಲ್ ಮೆಡಿಸಿನ್‌ನ ಹೆನ್ರಿ ಡೇನಿಯಲ್ ಹಾಗೂ ಇನ್ನಿತರ ಸಂಸ್ಥೆಗಳು ಜೊತೆಗೂಡಿ ಅಭಿವೃದ್ಧಿಪಡಿಸಲಾಗಿರುವ ಚ್ಯೂಯಿಂಗಮ್ ನಿಂದಾಗಿ ಕೊರೊನಾ ತಡೆಯಬಹುದಾಗಿದೆ.

ಆದರೆ ಈ ಚ್ಯೂಯಿಂಗ್ ಗಮ್ ಜಗಿಯುವುದರಿಂದ ಲಾಲಾರಸದಲ್ಲಿನ ವೈರಾಣುಗಳು ಸಾವನ್ನಪ್ಪುತ್ತವೆ. ಈ ಮೂಲಕ ಸೋಂಕು ಪ್ರಮಾಣವನ್ನು ತಡೆಗಟ್ಟಬಹುದು ಎಂದು ಹೆನ್ರಿ ಡೇನಿಯಲ್ ಹೇಳಿದ್ದಾರೆ.

Researchers Develop Chewing Gum To Reduce SARS-CoV-2 Transmission

ಚ್ಯೂಯಿಂಗ್ ಗಮ್ ಜೊತೆಗೆ ಸಸ್ಯದಿಂದ ಬೆಳೆದ ಪ್ರೋಟೀನ್ ನ್ನು ಸೇರಿಸಲಾಗಿದ್ದು, ಇದು SARS-CoV-2 ವೈರಾಣುವಿಗೆ ಟ್ರ್ಯಾಪ್ ರೀತಿಯಲ್ಲಿ ಕೆಲಸ ಮಾಡುತ್ತದೆಯಷ್ಟೇ ಅಲ್ಲದೇ ಅದರ ಪ್ರಸರಣ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಈ ಸಂಬಂಧ ನಡೆದಿರುವ ಅಧ್ಯಯನ ವರದಿಯನ್ನು ಮಾಲಿಕ್ಯುಲರ್ ಥೆರೆಪಿ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ.

ಲಾಲಾರಸ ಗ್ರಂಥಿಗಳಲ್ಲಿ SARS-CoV-2 ವೈರಾಣು ಪುನರಾವರ್ತನೆಯಾಗುತ್ತದೆ (ದ್ವಿಗುಣಗೊಳ್ಳುತ್ತದೆ) ಮತ್ತು ಈಗಾಗಲೇ ನಮಗೆ ತಿಳಿದಿರುವಂತೆ ಕೋವಿಡ್-19 ಸೋಂಕಿತ ವ್ಯಕ್ತಿ ಕೆಮ್ಮಿದರೆ ಅಥವಾ ಬೇರೊಬ್ಬ ವ್ಯಕ್ತಿಯೊಂದಿಗೆ ಮಾತನಾಡಿದರೆ ಅವರಿಗೂ ಕೋವಿಡ್-19 ಸೋಂಕು ಹರಡುತ್ತದೆ.

ಕೋವಿಡ್-19 ಲಸಿಕೆಗಳಿಂದ ಸಾಂಕ್ರಾಮಿಕದ ಹಾದಿಯನ್ನು ಬದಲಾವಣೆ ಮಾಡುವುದಕ್ಕೆ ಸಾಧ್ಯವಾಗಿದೆ. ಆದರೆ ಪ್ರಸರಣಕ್ಕೆ ಕಡಿವಾಣ ಹಾಕುವುದಕ್ಕೆ ಸಾಧ್ಯವಾಗಿಲ್ಲ.
ಪೂರ್ಣಪ್ರಮಾಣದಲ್ಲಿ ಲಸಿಕೆ ಪಡೆದ ಹೊರತಾಗಿಯೂ ಕಡಿಮೆ ತೀವ್ರತೆಯಲ್ಲಿ ಕೋವಿಡ್-19 ಸೋಂಕು ಬಾಧಿಸಬಹುದಾಗಿದೆ.

ದಕ್ಷಿಣ ಆಫ್ರಿಕಾ ಹಾಗೂ ಇತರ ರಾಷ್ಟ್ರಗಳಲ್ಲಿ ಹರಡುತ್ತಿರುವಂತಹ ಕೊರೊನಾ ವೈರಸ್‌ನ ಅತ್ಯಂತ ಅಪಾಯಕಾರಿ ವಿಧ ಓಮಿಕ್ರಾನ್ ಕುರಿತು ಈಗಾಗಲೇ ಜಗತ್ತಿನಾದ್ಯಂತ ರಾಷ್ಟ್ರಗಳು ಭಾರೀ ಆತಂಕಕ್ಕೆ ಒಳಗಾಗಿವೆ.

ಈ ಕುರಿತು ಸಾಂಕ್ರಾಮಿಕ ರೋಗ ಶಾಸ್ತ್ರಜ್ಞರು ಎಚ್ಚರಿಕೆ ಕೊಟ್ಟ ಮೇಲೆ ಜನರಲ್ಲಿ ಈ ಬಗ್ಗೆ ಇನ್ನಷ್ಟು ಭಯ ಮೂಡಿದೆ. ಈ ಹೊಸ ಕೊರೋನಾ ವಿಧದಿಂದಾಗಿ ಕೊರೊನಾವನ್ನು ತಡೆಯಲೇಬೇಕಾದ ಅನಿವಾರ್ಯತೆ ಮತ್ತಷ್ಟು ಹೆಚ್ಚಾಗಿದೆ. ಅದೇ ರೀತಿ ಕೊರೋನಾವನ್ನು ಆದಷ್ಟು ಬೇಗನೆ ತೊಡೆದುಹಾಕುವ ಅಗತ್ಯ ಎದುರಾಗಿದೆ.

ಕೊರೊನಾ ವಿರುದ್ಧ ತಜ್ಞರು ಬಹಳಷ್ಟು ಪ್ರಯೋಗಗಳನ್ನು ಮಾಡುತ್ತಿದ್ದು ಅಮೆರಿಕದ ಪೆನ್ಸಿಲ್‌ವಾನಿಯಾ ವಿಶ್ವವಿದ್ಯಾಲಯವು ಕೊರೋನಾ ವಿರುದ್ದದ ಪ್ರಯೋಗಗಳಲ್ಲಿ ತೊಡಗಿದ್ದರು. ಇದೀಗ ಪೆನ್ಸಿಲ್‌ವೇನಿಯಾ ವಿಶ್ವವಿದ್ಯಾಲಯವು ಪ್ರಾಯೋಗಿಕ ಚ್ಯೂಯಿಂಗಮ್‌ ಒಂದನ್ನು ಅಭಿವೃದ್ಧಿಪಡಿಸಿದ್ದು ಇದು ಜೊಲ್ಲುರಸದ ಮೂಲಕ ಕೊರೊನಾ ವೈರಸ್ ಹರಡುವುದನ್ನು ಕಡಿಮೆ ಮಾಡಲಿದೆ ಎನ್ನಲಾಗಿದೆ. ಈ ವಿಶೇಷ ಚ್ಯುಯಿಂಗಮ್ ಅಗಿಯುವಾಗ ಬಾಯಲ್ಲಿ ಜೊಲ್ಲುರಸದಲ್ಲಿ ನಿಲ್ಲುವ ಕೊರೊನಾ ವೈರಸ್ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ವೈರಸ್ ಹರಡುವ ವೇಗಕ್ಕೆ ತಡೆ ಒಡ್ಡುತ್ತದೆ ಎನ್ನಲಾಗಿದೆ.

ಹೀಗಾಗಿ ಕೊರೊನಾ ಇರುವ ಜನರು ಮಾತಾಡುವಾಗ, ಕೆಮ್ಮುವಾಗ ಅಥವಾ ಉಸಿರಾಡುವಾಗ ಕೊರೊನಾ ಹರಡುವಿಕೆ ಕಡಿಮೆಯಾಗಿರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಕೊರೊನಾವೈರಸ್ ತಗುಲಿದವರು ಇದ್ದಾಗ ಮುಖ್ಯವಾಗಿ ಒಳಾಂಗಣದಲ್ಲಿ ಕೊರೊನಾವೈರಸ್ ಹನಿಗಳು, ಏರೋಸೊಲ್ಸ್‌ಗಳ ಮೂಲಕ ಹರಡುತ್ತದೆ. ಕೊರೊನಾ ಹರಡುವುದನ್ನು ತಡೆಯಲು ನಿಯಂತ್ರಿಸಲು, ಹೆಚ್ಚಾಗಿ ಭೌತಿಕ ಅಂತರ ಕಾಪಾಡಬೇಕಾಗುತ್ತದೆ. ಈ ಮೂಲಕ ಒಳಾಂಗಣ ಏರೋಸಾಲ್‌ಗಳ ಸಾಂದ್ರತೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ಸೂಚಿಸಲಾಗಿದೆ.

ಚ್ಯೂಯಿಂಗಮ್ ಹೇಗೆ ವೈರಸ್ ಹರಡುವಿಕೆ ಕಡಿಮೆ ಮಾಡುತ್ತದೆ?

ಸಂಶೋಧಕರ ಪ್ರಕಾರ ಅವರು ಅಭಿವೃದ್ಧಿಪಡಿಸಿದ ಚ್ಯೂಯಿಂಗಮ್ ಅಗಿಯುತ್ತಿದ್ದರೆ ಅದು ರಿಲೀಸ್ ಮಾಡುವ ಪ್ರೊಟೀನ್ ಕೊರೊನಾವೈರಸ್‌ನ್ನು ಟ್ರಾಪ್ ಮಾಡುತ್ತದೆ. ಇದು ಕೊರೊನಾವೈರಸ್ ಭರಿತ ಹನಿಗಳ ಮೂಲಕ ಕೊರೋನಾ ಹರಡುವುದನ್ನು ಕಡಿಮೆ ಮಾಡುತ್ತದೆ.
ಹಾಗಾಗಿ ಈ ಚ್ಯೂಯಿಂಗಮ್ ಮುಖ್ಯವಾಗಿ ವ್ಯಾಕ್ಸಿನೇಷನ್‌ ಕಾರ್ಯಕ್ರಮಕ್ಕೆ ನೆರವಾಗುವುದರ ಜೊತೆಗೆ ಲಸಿಕೆಗಳ ಕೊರತೆ ಇರುವ ರಾಷ್ಟ್ರಗಳಲ್ಲಿ ಬಹಳಷ್ಟು ಪ್ರಯೋಜನಕಾರಿಯಾಗಲಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+