ಹಿಲರಿ ಗೆದ್ದರೆ ಪಾಕಿಸ್ತಾನಕ್ಕೆ ಕಾಶ್ಮೀರ ಕೊಡಿಸುತ್ತಾರಂತೆ!

Posted By:
Subscribe to Oneindia Kannada

ವಾಷಿಂಗ್ಟನ್, ನವೆಂಬರ್ 3: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅಧ್ಯಕ್ಷರಾದರೆ ಪಾಕಿಸ್ತಾನಕ್ಕೆ ಕಾಶ್ಮೀರವನ್ನು ಒಪ್ಪಿಸುತ್ತಾರೆ ಎಂದು ರಿಪಬ್ಲಿಕ್ ಹಿಂದೂ ಕೊಲಿಷನ್ ಸಂಘಟನೆ ಆರೋಪಿಸಿದೆ.

ಹಿಲರಿ ಭಾರತಕ್ಕಿಂತ ಹೆಚ್ಚಾಗಿ ಪಾಕಿಸ್ತಾನದ ಮೇಲೆ ಹೆಚ್ಚು ಒಲವು ಇಟ್ಟುಕೊಂಡಿದ್ದಾರೆ. ಎಂದು ಈ ಸಂಸ್ಥೆ ಅಮೆರಿಕದ ಇಂಡಿಯನ್ ಅಮೆರಿಕನ್ ವಾಹಿನಿಗೆ ನೀಡಿದ ಜಾಹೀರಾತಿನಲ್ಲಿ ಈ ರೀತಿಯ ಹೇಳಿಕೆ ನೀಡಿದೆ.

Republican Hindu body attacks Hillary Clinton as 'sympathetic' to Pakistan

ಹಿಲರಿ ಕ್ಲಿಂಟನ್ ಅವರಿಗೆ ಹಲವು ವರ್ಷಗಳಿಂದ ಸಲಹೆಗಾರರಾಗಿರುವ ಪಾಕ್ ಮೂಲದ ಹುಮಾ ಅಬೇದಿನ್ ಮಾತುಗಳನ್ನೇ ಅವರು ಹೆಚ್ಚಾಗಿ ಕೇಳುತ್ತಾರೆ. ಎಂದು ಈ ಸಂಘಟನೆ ಆರೋಪಿಸಿದೆ.

ಹುಮಾ ಅಬೇದಿನ್ ಮಾತುನ್ನು ತಿರಸ್ಕರಿಸಲು ಮನಸ್ಸು ಹಿಲರಿ ಅವರಿಗೆ ಇಲ್ಲ ಈ ಕಾರಣದಿಂದಾಗಿಯೇ ಅವರು ಹಲವು ವರ್ಷಗಳಿಂದ ಪಾಕಿಸ್ತಾನಕ್ಕೆ ಸಹಾಯ ಹಸ್ತ ಚಾಚುತ್ತಲೇ ಬಂದಿದ್ದಾರೆ ಎಂದು ಸಂಘಟನೆ ಆರೋಪಿಸಿದೆ.

Republican Hindu body attacks Hillary Clinton as 'sympathetic' to Pakistan

ಅಷ್ಟೇ ಅಲ್ಲದೇ ಭಾರತದ ವಿರುದ್ಧ ದಾಳಿ ಮಾಡಲು ಪಾಕಿಸ್ತಾನಕ್ಕೆ ಬಿಲಿಯನ್ ಡಾಲರ್ ಗಟ್ಟಲೇ ಹಣ ಪೂರೈಸಿದ್ದು, ಶಸ್ತ್ರಸ್ತ ಖರೀದಿಗೆ ಸಹಕರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಷ್ಟೇ ಅಲ್ಲದೇ ಹಿಲರಿ ಅವರು ಭಾರತಕ್ಕೆ ವ್ಯತಿರೇಕವಾಗಿ ಪಾಕಿಸ್ತಾನಕ್ಕೆ ಮಿಲಟರಿ ಶಸ್ತ್ರಾಸ್ತ್ರಗಳನ್ನು ಸಹ ಪೂರೈಸಿದ್ದಾರೆ ಎಂದು ಈ ಸಂಘಟನೆ ಸುದ್ದಿವಾಹಿನಿಯೊಂದರಲ್ಲಿಜಾಹೀರಾತುಗಳನ್ನೂ ಸಹ ಪ್ರಕಟಿಸಿದೆ.

ಇದಷ್ಟೇ ಅಲ್ಲದೆ ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿಗಾಗಿ ಮನವಿ ಮಾಡಿದ್ದ ವೀಸಾವನ್ನು ಕೂಡ ನೀಡದೆ ಹಿಲರಿ ಕ್ಲಿಂಟನ್ ಅವರು ತಡೆಹಿಡಿದಿದ್ದರು ಎಂದು ಸಂಘಟನೆ ಗಂಭೀರವಾಗಿ ಆರೋಪಿಸಿದೆ.

ಇದಷ್ಟೇ ಅಲ್ಲದೇ ರಾಡಿಕಲ್ ಇಸ್ಲಾಂ ತತ್ವಗಳನ್ನು ಸಮರ್ಥಿಸುವ ದೇಶ, ಮತ್ತು ಸಂಸ್ಥೆಗಳಿಂದ ಹಿಲರಿ ಅವರು ದೇಣಿಗೆ ಪಡೆದಿದ್ದಾರೆ ಎಂದೂ ಕೂಡ ಸಂಘಟನೆ ತಿಳಿಸಿದೆ.

ಈ ಸಂಘಟನೆ ಹಿಂದೆಯೂ ಸಹ ಅಮೆರಿಕ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ ಅವರ ಮೇಲೂ ಆರೋಪ ಮಾಡಿತ್ತು. ಬಿಲ್ ಕ್ಲಿಂಟನ್ ಅವರು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಒಪ್ಪಿಸಲು ಪ್ರಯತ್ನಿಸಿದ್ದರು ಎಂದು ಆರೋಪಿಸಿದೆ.

ಟ್ರಂಪ್ ಅವರ ಸೋಲು ಖಚಿತವಾಗಿರುವ ಹಿನ್ನೆಲೆಯಲ್ಲಿ ಈ ಸಂಘಟನೆ ಈ ರೀತಿ ಆರೋಪ ಮಾಡುತ್ತಿದೆ ಎಂದು ಕ್ಲಿಂಟನ್ ಪ್ರಚಾರಕ್ಕೆ ದೇಣಿಗೆ ಸಂಗ್ರಹಿಸುತ್ತಿರುವ ಅಜಯ್ ಜೈನ್ ಸಂಘಟನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಅವರಿಗಿಂತ ಮುನ್ನಡೆ ಕಾಯ್ದುಕೊಂಡಿದ್ದ ಹಿಲರಿ ಅವರು ಇತ್ತೀಚಿನ ಸಮೀಕ್ಷೆಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಇನ್ನು ರಿಪಬ್ಲಿಕನ್ ಪಕ್ಷ ಮೇಲುಗೈ ಸಾಧಿಸುತ್ತಿದೆ.

ಹಿಂದೂ ಸಂಘಟನೆಯ ಆರೋಪಗಳು ಭಾರತ ಮೂಲದ ಪ್ರಜೆಗಳಲ್ಲಿ ಯಾವ ರೀತಿಯ ಅಭಿಪ್ರಾಯ ಮೂಡಿಸುತ್ತದೆ ಎಂಬುದನ್ನು ನೋಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Republican Hindu organisation is running anti-Hillary Clinton advertisement on Indian-American television channels, attacking the Democratic presidential candidate as "sympathetic towards Pakistan" and her longtime aide for her Pakistani origin.
Please Wait while comments are loading...