ಭಾರತ-ಪಾಕಿಸ್ತಾನದಿಂದ ಧನಾತ್ಮಕ ಸುದ್ದಿ ಬರಲಿದೆ: ಟ್ರಂಪ್ ಭರವಸೆ
ಹಾನೋಯ್(ವಿಯೆಟ್ನಾಂ), ಫೆಬ್ರವರಿ 28: "ಭಾರತ ಮತ್ತು ಪಾಕಿಸ್ತಾನದ ಕಡೆಯಿಂದ ಧನಾತ್ಮಕ ಸುದ್ದಿ ಬರಲಿದೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭರವಸೆ ವ್ಯಕ್ತಪಡಿಸಿದ್ದಾರೆ.
ಪಾಕ್ ಸೇನೆ ಅಭಿನಂದನ್ ರ ವಶಕ್ಕೆ ಪಡೆಯುವ ಮುನ್ನ ನಡೆದಿದ್ದೇನು?
ವಿಯೆಟ್ನಾಂನಲ್ಲಿ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ಅವರನ್ನು ಭೇಟಿ ಮಾಡಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, "ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಎದ್ದಿರುವ ಪ್ರಕ್ಷುಬ್ಧ ವಾತಾವರಣ ತಿಳಿಯಾಗಬೇಕು. ಎರಡೂ ದೇಶಗಳೂ ಈ ಸಂದಿಗ್ಧಕ್ಕೆ ತಿಲಾಂಜಲಿ ಹಾಡಿ, ದಶಕ-ದಶಕಗಳ ಕಾಲ ಶಾಂತಿ ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು. ಆದ್ದರಿಂದ ಉಭಯ ದೇಶಗಳಿಂದಲೂ ಧನಾತ್ಮಕ ಪ್ರತಿಕ್ರಿಯೆ ಬರಲಿದೆ ಎಂದು ನಿರೀಕ್ಷಿಸಿದ್ದೇನೆ" ಎಂದು ಟ್ರಂಪ್ ಹೇಳಿದರು.
ಪೈಲಟ್ ಅಭಿನಂದನ್ ಬಿಡುಗಡೆಗೆ ಪಾಕ್ ರೆಡಿ, ಆದರೆ....
ಬೆಳಗ್ಗೆಯಷ್ಟೇ, ಭಾರತೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಂದಿಗೆ ಮಾತುಕತೆ ನಡೆಸಿದ್ದ ಅಮೆರಿಕದ ಸ್ಟೇಟ್ ಸೆಕ್ರೆಟರಿ ಮೈಲಲ್ ಪೊಂಪಿಯೋ, 'ಎರಡು ದೇಶಗಳೂ ಶಾಂತಿ ಕಾಯ್ದುಕೊಳ್ಳಬೇಕು. ಆದರೆ ಭಯೋತ್ಪಾದನೆಯ ನಿಗ್ರಹಕ್ಕಾಗಿ ನಾವು ಭಾರತದೊಂದಿಗಿದ್ದೇವೆ' ಎಂದಿದ್ದರು.