ನೀರಿನಿಂದ ಜಿಗಿದು ಮೀನುಗಾರನ ಗಂಟಲಿಗೆ ಸಿಲುಕಿಕೊಂಡ ಮೀನು: ಮುಂದೇನಾಯ್ತು?
ಬ್ಯಾಂಕಾಕ್ ಜೂನ್ 03: ಭವಿಷ್ಯ ಏನಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಕೆಲವು ಆಹ್ಲಾದಕರ ಘಟನೆಗಳು ಇದ್ದಕ್ಕಿದ್ದಂತೆ ಸಂಭವಿಸುತ್ತವೆ. ಜೊತೆಗೆ ಕೆಲವು ನೋವಿನ ಸಂಗತಿಗಳು ಸಹ ಇದ್ದಕ್ಕಿದ್ದಂತೆ ಸಂಭವಿಸುತ್ತವೆ. ಅಂತಹ ಅಪರೂಪದ ಘಟನೆ ಥಾಯ್ಲೆಂಡ್‌ನಲ್ಲಿ ನಡೆದಿದ್ದು, ನೀರಿನಿಂದ ಹೊರಬಂದ ಮೀನು ಮೀನುಗಾರನ ಬಾಯಿಗೆ ಹೋಗಿ ಗಂಟಲಿಗೆ ಸಿಲುಕಿಕೊಂಡ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಈಟಿಗಳಿಂದ ಮೀನುಗಳನ್ನು ಹಿಡಿಯುತ್ತಿದ್ದ ಮೀನುಗಾರ ಇದ್ದಕ್ಕಿದ್ದಂತೆ ನಿಶಬ್ದವಾಗಿ ನಿಂತಿದ್ದಾನೆ. ಈ ರೀತಿಯ ಘಟನೆಯನ್ನು ಆತ ಕನಸಿನಲ್ಲೂ ಯೋಚಿಸಿರಲಿಲ್ಲ. ಮೀನುಗಾರ ಮೀನು ಹಿಡಿಯಲು ಈಟಿ ಬಳಿಸಿದಾಗ ಕಣ್ಣುಮಿಟುಕಿಸುವ ಕ್ಷಣದಲ್ಲಿ ಇದ್ದಕ್ಕಿದ್ದಂತೆ ಮೀನೊಂದುನೀರಿನಿಂದ ಹಾರಿದೆ. ಮೀನುಗಾರನ ಬಾಯಿಗೆ ಬಿದ್ದಿದೆ.

ಮೀನು ಹೊರತೆಗೆಯಲು ಪ್ರಯತ್ನ
ಈ ಘಟನೆಯು ಮೇ 22 ರಂದು ಥಾಯ್ಲೆಂಡ್‌ನ ಫಾಥಲುಂಗ್ ಪ್ರಾಂತ್ಯದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ. ವರದಿಯ ಪ್ರಕಾರ, ಮೀನುಗಾರನ ಬಾಯಿಗೆ ಮೀನು ಬಿದ್ದ ನಂತರ ಅದನ್ನು ಹೊರತೆಗೆಯಲು ಪ್ರಯತ್ನಿಸಿದ್ದಾನೆ. ಆದರೆ ಅದು ಅವನ ಗಂಟಲಿಗೆ ಹೋಗಿ ಸಿಲುಕಿಕೊಂಡಿದೆ. ಮೀನುಗಾರನಿಗೆ ಕ್ಷಣದಲ್ಲಿ ಏನಾಯಿತು ಎಂದು ಭಯವಾಗಿದೆ. ನೀರಿನಿಂದ ಮೇಲಕ್ಕೆ ಜಿಗಿದ ಮೀನು ಗಂಟಲಿಗೆ ಸಿಲುಕಿ ಉಸಿರಾಟಕ್ಕೆ ಕಷ್ಟವಾಗಿದೆ. ಮೀನುಗಾರನ ಗಂಟಲಿನೊಳಗೆ ಮೀನು ಗಂಟಲು ಮತ್ತು ಶ್ವಾಸನಾಳದ ನಡುವೆ ಸಿಲುಕಿಕೊಂಡಿದೆ.

ಗಂಟಲಿನಿಂದ ಪರಾರಿಯಾಗಲು ಮೀನು ಯತ್ನ
5 ಇಂಚಿನ ಇಂಟರ್‌ಲೋಪರ್ ಮೀನು ಮೀನುಗಾರನ ಕುತ್ತಿಗೆಗೆ ಸಿಲುಕಿಕೊಂಡಿತ್ತು. ಬಲವಾಗಿ ತನ್ನ ಬಾಲವನ್ನು ಅಲ್ಲಾಡಿಸಲು ಪ್ರಾರಂಭಿಸಿತು. ಮೀನು ಕೂಡ ಮೀನುಗಾರರ ಗಂಟಲಿನಿಂದ ಹೊರಬರಲು ಯತ್ನಿಸಿದೆ. ಜೋರಾಗಿ ಜಿಗಿಯಲು ಪ್ರಯತ್ನಿಸುತ್ತಿದೆ. ಈ ವೇಳೆ ಮೀನುಗಾರನ ಶ್ವಾಸನಾಳಕ್ಕೆ ತಡೆ ಉಂಟಾಗಿ ದೇಹಕ್ಕೆ ಆಮ್ಲಜನಕ ಪೂರೈಕೆ ಸ್ಥಗಿತಗೊಂಡಿದೆ.

ಎಕ್ಸರೆಯಲ್ಲಿ ಅನಾಬಾಸ್ ಮೀನು ಪತ್ತೆ
ಸಹ ಮೀನುಗಾರನ ಅವಸ್ಥೆಯನ್ನು ನೋಡಿದ ಜೊತೆಗಾರರು ಅವನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಅವರ ಸ್ಥಿತಿಯನ್ನು ಕಂಡು ಆಶ್ಚರ್ಯಚಕಿತರಾದರು. ರೋಗಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯ ಅಧಿಕಾರಿ ಸೆರ್ಮಶ್ರೀ ಪಥೊಂಪಣಿಚಾರ್, "ಇದು ಸಂಭವಿಸುವ ಸಾಧ್ಯತೆ ತುಂಬಾ ಕಡಿಮೆ, ನಾನು ಹಿಂದೆಂದೂ ಇಂತಹ ಪ್ರಕರಣವನ್ನು ನೋಡಿಲ್ಲ" ಎಂದಿದ್ದಾರೆ. ಎಕ್ಸರೆ ವರದಿಯಲ್ಲಿ ಮೀನು ಕಾಣಿಸಿಕೊಂಡಿದೆ. ಮೊನಚಾದ ಸಿಹಿನೀರಿನ ಮೀನನ್ನು ಅನಾಬಾಸ್ ಎಂದು ಕರೆಯಲಾಗುತ್ತದೆ. ಅದು ಮೀನುಗಾರನ ಗಂಟಲು ಮತ್ತು ಮೂಗಿನ ಕುಹರದ ನಡುವೆ ಸಿಕ್ಕಿಹಾಕಿಕೊಂಡಿರುವುದು ಕಂಡುಬಂದಿದೆ.

ಕಷ್ಟದಿಂದ ಪ್ರಾಣಾಪಾಯದಿಂದ ಪಾರಾದ ಮೀನುಗಾರ
ಮೀನು ಮೀನುಗಾರನ ಮೂಗಿನಿಂದ ಹೊರಬರಲು ಪ್ರಯತ್ನಿಸಿದೆ. ಇದರಿಂದ ಉಸಿರಾಡಲು ಅಡ್ಡಲಾಗಿ ಸಿಲುಕಿಕೊಂಡಿದೆ. ಡಾ.ಪಥೊಂಪಣಿಚಾರ್ ಅವರು, "ನಮ್ಮ ವೈದ್ಯರು ಸಾಕಷ್ಟು ಶ್ರಮವಹಿಸಿ ಆಪರೇಷನ್ ಮೂಲಕ ರೋಗಿಯನ್ನು ಉಳಿಸಿದ್ದಾರೆ" ಎಂದು ಹೇಳಿದರು. ಅದೇ ಸಮಯದಲ್ಲಿ, ಸಣ್ಣ ಮೀನು ಮನುಷ್ಯನನ್ನು ಕೆಟ್ಟದಾಗಿ ಗಾಯಗೊಳಿಸಿದ್ದು ಇದೇ ಮೊದಲಲ್ಲ. ಕಳೆದ ವರ್ಷದ ಹಿಂದೆ ಥಾಯ್ಲೆಂಡ್‌ನಲ್ಲಿ, ನದಿಯಲ್ಲಿ ಈಜುತ್ತಿದ್ದಾಗ ವ್ಯಕ್ತಿಯ ಕುತ್ತಿಗೆಯಲ್ಲಿ ಸೂಜಿ ಮೀನು ದಾಳಿ ಮಾಡಿತು. ನಂತರ ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತು ಅಲ್ಲಿ ವೈದ್ಯರು ಅವರ ಜೀವವನ್ನು ಉಳಿಸಿದರು.












Click it and Unblock the Notifications