ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ರಾಮಾಯಣ ಯಾತ್ರೆ' ರೈಲಿಗೆ ನೇಪಾಳ ಹಸಿರು ನಿಶಾನೆ

|
Google Oneindia Kannada News

ಕಠ್ಮಂಡು, ಜೂನ್ 9: ಭಗವಂತ ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳ ಪ್ರವಾಸಕ್ಕಾಗಿ ಭಾರತೀಯ ರೈಲ್ವೆ ಆರಂಭಿಸುತ್ತಿರುವ 'ಭಾರತ್ ಗೌರವ್' ರೈಲಿಗೆ ತನ್ನ ದೇಶದಲ್ಲಿ ಸಂಚರಿಸಲು ನೇಪಾಳ ಸರಕಾರ ಹಸಿರು ನಿಶಾನೆ ತೋರಿದೆ.

ಈ ರೈಲು ನೇಪಾಳದ ಅಂತಾರಾಷ್ಟ್ರೀಯ ಗಡಿ ದಾಟುತ್ತಿರುವ ಭಾರತದ ಮೊದಲ ಪ್ರವಾಸಿ ರೈಲಾಗಿದೆ.
ಈ ರೈಲು ನೇಪಾಳದ ಭಗವಾನ್ ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳಾದ ಧನುಶಾ ಪಹಾರ್, ಬಾವನ್ ಬಿಘ ಕ್ಷೇತ್ರ, ಮಾತಾ ಜಾನಕಿ ಜನ್ಮಸ್ಥಳ ಮಂದಿರ ಮತ್ತು ಶ್ರೀ ರಾಮ್ ವಿವಾಹ ಸ್ಥಳಗಳನ್ನು ಒಳಗೊಂಡಿರುತ್ತದೆ.

ಜೂನ್ 21 ರಂದು 'ಶ್ರೀ ರಾಮಾಯಣ ಯಾತ್ರೆ' ರೈಲು ಪ್ರಾರಂಭ ಜೂನ್ 21 ರಂದು 'ಶ್ರೀ ರಾಮಾಯಣ ಯಾತ್ರೆ' ರೈಲು ಪ್ರಾರಂಭ

"ನೇಪಾಳ ಸರಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾರತದಿಂದ ನೇಪಾಳಕ್ಕೆ 2022ರ ಜೂನ್ 23 ರಿಂದ 'ಭಾರತ್ ಗೌರವ್' ಪ್ರವಾಸಿ ರೈಲಿನ ಕಾರ್ಯಾಚರಣೆಗಾಗಿ ನೇಪಾಳ ಸರಕಾರಕ್ಕೆ ಸಂಬಂಧಿಸಿದ ಇಲಾಖೆಗಳಿಂದ ಒಪ್ಪಿಗೆಯನ್ನು ತಿಳಿಸಲು ಹರ್ಷವಾಗುತ್ತದೆ.

 ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸ ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸ

ಈ ರೈಲು ನೇಪಾಳದಲ್ಲಿ ಭಗವಾನ್ ಶ್ರೀರಾಮನ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಯಾತ್ರಾ ಸ್ಥಳಗಳನ್ನು ಒಳಗೊಂಡಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ, ನೇಪಾಳ ಸರಕಾರ, ಕಠ್ಮಂಡುವಿನಲ್ಲಿರುವ ಭಾರತದ ರಾಯಭಾರ ಕಚೇರಿಗಳ ನಡುವೆ ತನ್ನ ಬಾಂಧವ್ಯವನ್ನು ಗಟ್ಟಿಗೊಳಿಸಲು ಈ ಅವಕಾಶವನ್ನು ಬಳಸಿಕೊಳ್ಳುತ್ತದೆ," ಎಂದು ನೇಪಾಳ ಸರಕಾರ ತನ್ನ ಪತ್ರದಲ್ಲಿ ತಿಳಿಸಿದೆ.

ದೆಹಲಿ ರೈಲು ನಿಲ್ದಾಣದಿಂದ ಪ್ರವಾಸ ಆರಂಭ

ದೆಹಲಿ ರೈಲು ನಿಲ್ದಾಣದಿಂದ ಪ್ರವಾಸ ಆರಂಭ

ಶ್ರೀ ರಾಮಾಯಣ ಯಾತ್ರಾ ಅಂಗವಾಗಿ ಭಾರತದ ಮೊದಲ ಭಾರತ್ ಗೌರವ್ ಪ್ರವಾಸಿ ರೈಲು ಜೂನ್ 21 ರಂದು ನವದೆಹಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ಹೊರಡಲಿದೆ. ಯಾತ್ರೆ ವೇಳೆ ರೈಲು ಒಟ್ಟು 8,000 ಕಿ.ಮೀ. ಸಂಚರಿಸಲಿದೆ. ಪ್ರವಾಸವು ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ಒಟ್ಟು ಎಂಟು ರಾಜ್ಯಗಳನ್ನು ಒಳಗೊಂಡಿದೆ. ಜತೆಗೆ 12 ಪ್ರಮುಖ ನಗರಗಳಾದ ಅಯೋಧ್ಯೆ, ಬಕ್ಸರ್, ಜನಕ್‌ಪುರ, ಸೀತಾಮರ್ಹಿ, ಕಾಶಿ, ಪ್ರಯಾಗ, ಚಿತ್ರಕೂಟ, ನಾಸಿಕ್ , ಹಂಪಿ, ರಾಮೇಶ್ವರಂ, ಕಾಂಚೀಪುರಂ ಮತ್ತು ಭದ್ರಾಚಲಂ ಒಳಗೊಂಡಿದೆ.

ಟಿಕೆಟ್ ದರ ಅಂದಾಜು 65,000 ರೂ.

ಟಿಕೆಟ್ ದರ ಅಂದಾಜು 65,000 ರೂ.

ರೈಲು ಒಟ್ಟು 600 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. ಪ್ರವಾಸಕ್ಕೆ ಪ್ರತಿ ವ್ಯಕ್ತಿಗೆ ಅಂದಾಜು 65,000 ರೂ. ವೆಚ್ಚವಾಗಲಿದೆ. ಈಗಾಗಲೇ 450 ಬುಕ್ಕಿಂಗ್‌ ಆಗಿದೆ ಎಂದು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್ ಸಿಟಿಸಿ) ಮೂಲಗಳು ತಿಳಿಸಿವೆ. ಶ್ರೀ ರಾಮನ ಜೀವನಕ್ಕೆ ಸಂಬಂಧಿಸಿದ ಪವಿತ್ರ ಸ್ಥಳಗಳಿಗೆ ಯಾತ್ರಾರ್ಥಿಗಳನ್ನು ಕರೆದೊಯ್ಯಲು ವಿಶೇಷ ಪ್ರವಾಸಿ ರೈಲಿನ ಮೂಲಕ 18 ದಿನಗಳ ' ರಾಮಾಯಣ ಯಾತ್ರೆ' ಯನ್ನು ಐಆರ್ ಸಿಟಿಸಿ ಆಯೋಜಿಸಿದೆ.

ರಾಮನಿಗೆ ಸಂಬಂಧಿಸಿದ ಸ್ಥಳಗಳ ದರ್ಶನ

ರಾಮನಿಗೆ ಸಂಬಂಧಿಸಿದ ಸ್ಥಳಗಳ ದರ್ಶನ

14 ವರ್ಷಗಳ ಕಾಲ ಕಾಡಿನಲ್ಲಿ ವನವಾಸವನ್ನು ಕೈಗೊಂಡಾಗ ಭಗವಾನ್ ಶ್ರೀ ರಾಮ, ಅವರ ಪತ್ನಿ ಸೀತಾ ದೇವಿ ಮತ್ತು ಲಕ್ಷ್ಮಣರು ಕಾಲಿಟ್ಟ ಸ್ಥಳಗಳಿಗೆ ಭೇಟಿ ನೀಡುವ ಭಕ್ತರ ಕನಸುಗಳನ್ನು ಸಾಕಾರಗೊಳಿಸುವ ಗುರಿಯನ್ನು ಈ ಪ್ರವಾಸ ಪ್ಯಾಕೇಜ್ ಹೊಂದಿದೆ. ದೆಹಲಿಯ ಹೊರತಾಗಿ ಅಲಿಗಢ್, ತುಂಡ್ಲಾ, ಕಾನ್ಪುರ್ ಮತ್ತು ಲಕ್ನೋ ರೈಲು ನಿಲ್ದಾಣಗಳು ಬೋರ್ಡಿಂಗ್ ಪಾಯಿಂಟ್‌ಗಳಾಗಿವೆ. ಪ್ರಯಾಣಿಕರು ಯಾವ ನಿಲ್ದಾಣದಿಂದ ಪ್ರಯಾಣಿಸುವರು ಎಂಬುದನ್ನು ಲೆಕ್ಕಿಸದೆ ಟಿಕೆಟ್‌ ದರವು ಏಕರೂಪವಾಗಿರಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದರು.

ರಾಮಾಯಣ ಆಧರಿಸಿ ಒಳಾಂಗಣ ವಿನ್ಯಾಸ

ರಾಮಾಯಣ ಆಧರಿಸಿ ಒಳಾಂಗಣ ವಿನ್ಯಾಸ

ಆಹಾರ, ಹೋಟೆಲ್‌ನಲ್ಲಿ ವಸತಿ ಮತ್ತು ಭೇಟಿ ನೀಡುವ ಸ್ಥಳಗಳಲ್ಲಿ ಮಾರ್ಗದರ್ಶಿ ಸೇವೆಗಳನ್ನು 'ರಾಮಾಯಣ ಯಾತ್ರೆ' ಪ್ರವಾಸದ ಯೋಜನೆಯು ಒಳಗೊಂಡಿರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಭಾರತ್ ಗೌರವ್ ಟೂರಿಸ್ಟ್ ರೈಲಿನ ಒಳಾಂಗಣವು ರಾಮಾಯಣ ಮಹಾಕಾವ್ಯವನ್ನು ಆಧರಿಸಿದೆ. ಐಆರ್‌ಸಿಟಿಸಿ ಪ್ರಯಾಣಿಕರಿಗೆ ಟೆಕೆಟ್ ವೆಚ್ಚವನ್ನು ಇಎಂಐ ಮೂಲಕ ಪಾವತಿಸಲು ಅನುವಾಗುವಂತೆ ಪೇಟಿಎಂ ಮತ್ತು ರೇಸರ್ ಪೇ ಪಾವತಿ ಗೇಟ್‌ವೇಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.

Recommended Video

Ramya Instagram ವಿಚಾರವಾಗಿ ಸ್ಟೇಷನ್ ಮೆಟ್ಟಿಲೇರಿದರು | OneIndia Kannada

English summary
The Nepal government on wednesday gave the green light to Bharat Gaurav train to cover destinations associated With Lord Ram in Nepal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X