• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದುಬೈನಲ್ಲಿ ವಿಶ್ವದ ಪ್ರಪ್ರಥಮ ಜಾಗತಿಕ 'ಕ್ಷಾತ್ರ ಸಂಗಮ - 2019'

|

ಮುಂಬಯಿ, ಡಿಸೆಂಬರ್ 04 : ಜಗತ್ತಿನ ಎಲ್ಲೆಡೆ ಪಸರಿಕೊಂಡು ಸೇವಾ ನಿರತ ರಾಮಕ್ಷತ್ರಿಯ ಸಮಾಜ ಬಾಂಧವರ ವಿಶ್ವ ಸಮ್ಮೇಳನ 'ಕ್ಷಾತ್ರ ಸಂಗಮ-2019' ಜಾಗತಿಕ ಸಮಾವೇಶವನ್ನು 2019ರ ಏಪ್ರಿಲ್ ಕೊನೆಯ ವಾರದಲ್ಲಿ ದುಬೈನಲ್ಲಿ ಆಯೋಜಿಸಲಾಗುತ್ತಿದೆ.

ಈ ಸಂಗತಿಯನ್ನು ವಿಶ್ವ ಕ್ಷಾತ್ರ ಸಂಗಮ - 2019 ದುಬೈ ಇದರ ಮುಖ್ಯ ಸಂಘಟಕ, ಹೆಸರಾಂತ ಸಾಮಾಜಿಕ ಕಾರ್ಯಕರ್ತ ಹಾಗೂ ಕರ್ನಾಟಕ ಎನ್‌ಆರ್‌ಐ ಫೋರಂ ಇದರ ಪ್ರಧಾನ ಕಾರ್ಯದರ್ಶಿ ಪ್ರಬಾಕರ್ ಅಂಬಲತರೆ ಮಂಗಳವಾರ ತಿಳಿಸಿದರು.

ಅನಿವಾಸಿ ಭಾರತೀಯರೆಲ್ಲರೂ ಶ್ರೀಮಂತರಲ್ಲ: ಪ್ರವೀಣ್ ಶೆಟ್ಟಿ ವಕ್ವಾಡಿ

ರಾಮಕ್ಷತ್ರಿಯರ ಈ ಮಹಾಸಮ್ಮೇಳನಕ್ಕೆ ಭಾರತ ಸೇರಿದಂತೆ ಗಲ್ಫ್ ರಾಷ್ಟ್ರಗಳು, ವಿದೇಶಗಳಲ್ಲಿ ನೆಲೆಸಿ ವಿವಿಧ ಕ್ಷೇತ್ರಗಳಲ್ಲಿ ಮಿಂಚುತ್ತಿರುವ ಪ್ರತಿಭಾನ್ವಿತರು, ಸಾಧಕರು, ಗಣ್ಯರನೇಕರು ಪಾಲ್ಗೊಳ್ಳಲಿದ್ದಾರೆ.

ಸಮ್ಮೇಳನದಲ್ಲಿ ರಾಮಕ್ಷತ್ರಿಯರ ಪರಂಪರೆ, ಸಂಪ್ರದಾಯ, ಸಂಸ್ಕೃತಿ-ಸಂಸ್ಕಾರ, ಕಲೆಗಳ ಅನಾವರಣಗೊಳಿಸಲಾಗುತ್ತಿದೆ. ವಿವಿಧ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಪ್ರತಿಭಾನ್ವೇಷಣೆಗೆ ಸೂಕ್ತ ವೇದಿಕೆ ಒದಗಿಸಲಾಗುತ್ತಿದೆ. ಸಮಾಜದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುತ್ತಿದೆ.

ಬಹ್ರೇನ್‌ನಲ್ಲಿ ಕನ್ನಡ ಭವನಕ್ಕೆ ದೇವೇಗೌಡರಿಂದ ಶಂಕುಸ್ಥಾಪನೆ

ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತ ರಾಮಕ್ಷತ್ರಿಯ ಪ್ರತಿನಿಧಿಗಳಿಗೆ ವೀಸಾ, ಉಳಕೊಳ್ಳುವ ವ್ಯವಸ್ಥೆ ಜೊತೆಗೆ ಪ್ರವಾಸೋದ್ಯಮ ಪಯಣವಾಗಿಸಿ ದುಬೈ ಪ್ರವಾಸಕ್ಕೂ ಅವಕಾಶವಿದೆ. ಆಸಕ್ತ ರಾಮಕ್ಷತ್ರಿಯ ಬಂಧುಗಳು ತಮ್ಮ ಹೆಸರುಗಳನ್ನು ತತ್‌ಕ್ಷಣವೇ ನೋಂದಣಿಸಲು ಕೋರಲಾಗಿದೆ.

ದುಬೈಯಲ್ಲಿ ಅದ್ದೂರಿಯಾಗಿ ನಡೆದ ಯುಎಇ ದಸರಾ ಕ್ರೀಡಾಕೂಟ

ವಿದೇಶದಲ್ಲಿ ಆಯೋಜಿಸುವ ಪ್ರಪ್ರಥಮ ವಿಶ್ವ ಕ್ಷಾತ್ರ ಸಂಗಮ ಇದಾಗಲಿದ್ದು, ಸಮ್ಮೇಳನದ ದಿನಾಂಕ ಹಾಗೂ ಹೆಚ್ಚಿನ ಮಾಹಿತಿಗಳ ವಿವರಗಳನ್ನು ಶೀಘ್ರವೇ ತಿಳಿಸಲಾಗುವುದು.

ದೇಶವಿದೇಶಗಳಲ್ಲಿ ವಿಶೇಷವಾಗಿ ಕರ್ನಾಟಕದಾದ್ಯಂತ ನೆಲೆಯೂರಿರುವ ರಾಮಕ್ಷತ್ರಿಯ ಬಾಂಧವರು, ರಾಮಕ್ಷತ್ರಿಯ ಸಮಾಜದ ಎಲ್ಲಾ ಸಂಘ ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು, ಸದಸ್ಯರು ಸಕ್ರೀಯರಾಗಿ ಪಾಲ್ಗೊಳ್ಳುವಂತೆ ಹಾಗೂ ಸ್ವಜಾತಿ ಬಾಂಧವರು ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶಕ್ಕೆ ಸಂಪೂರ್ಣ ಬೆಂಬಲ ನೀಡಿ ಯಶಸ್ಸಿಗೆ ಸಹಕರಿಸುವಂತೆ ಸಂಘಟನಾ ಸಮಿತಿ ಮುಖ್ಯಸ್ಥರು ವಿನಂತಿಸಿದ್ದಾರೆ.

English summary
Rama Kshatriya World Conference to be held in Dubai in April 2019. The date and venue will be intimated later.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X