ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ಡೀಲ್: ಫ್ರಾನ್ಸ್ ಭೇಟಿಯ ಸ್ಪಷ್ಟನೆ ನೀಡಿದ ನಿರ್ಮಲಾ ಸೀತಾರಾಮನ್

|
Google Oneindia Kannada News

ಪ್ಯಾರಿಸ್, ಅಕ್ಟೋಬರ್ 12: 'ರಫೇಲ್ ಡೀಲ್ ಎರಡು ಸರ್ಕಾರಗಳ ನಡುವಿನ ವಿಚಾರ. ಭಾರತ ಮತ್ತು ಫ್ರಾನ್ಸ್ ಸರ್ಕಾರಗಳ ನಡುವೆ ನಡೆದ ಒಪ್ಪಂದ ಇದು. ಇದರಲ್ಲಿ ಯಾರದೇ ವೈಯಕ್ತಿಕ ಹಿತಾಸಕ್ತಿ ಇಲ್ಲ' ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಮೂರು ದಿನಗಳ ಫ್ರಾನ್ಸ್ ಭೇಟಿಯ ಬಗ್ಗೆ ಪ್ರತಿಪಕ್ಷಗಳು ಮಾಡಿದ್ದ ಆರೋಪಗಳನ್ನು ಅಲ್ಲಗಳೆದ ಅವರು, 'ಡಸಾಲ್ಟ್ ನಿಂದ ನನಗೆ ಆಮಂತ್ರಣವಿತ್ತು. ನಾನು ಅವರ ಗ್ರಾಹಕಿ. ಆದ್ದರಿಂದ ನಾನು ಅಲ್ಲಿಗೆ ತೆರಳಲೇಬೇಕಿತ್ತು' ಎಂದರು.

ರಾಹುಲ್ ಗಾಂಧಿ ದಲ್ಲಾಳಿಗಳ ಕುಟುಂಬದಿಂದ ಬಂದವರು: ಪಾತ್ರಾ ರಾಹುಲ್ ಗಾಂಧಿ ದಲ್ಲಾಳಿಗಳ ಕುಟುಂಬದಿಂದ ಬಂದವರು: ಪಾತ್ರಾ

'ರಫೇಲ್ ಡೀಲ್ ನಲ್ಲಿ ನಡೆದ ಅವ್ಯವಹಾರಗಳಿಗೆ ತೇಪೆ ಹಚ್ಚಲು ಮತ್ತು ಈ ಹಗರಣವನ್ನು ಮಯಚ್ಚಿಹಾಕಲು ನಿರ್ಮಲಾ ಸೀತಾರಾಮನ್ ಅವರು ಫ್ರಾನ್ಸಿಗೆ ತೆರಳಿದ್ದಾರೆ' ಎಂಬ ಪ್ರತಿಪಕ್ಷಗಳ ಟೀಕೆಯನ್ನು ಅವರು ಕಟುವಾಗಿ ವಿರೋಧಿಸಿದರು.

ಇದು ಎರಡು ಸರ್ಕಾರಗಳ ನಡುವಿನ ಒಪ್ಪಂದ

ಇದು ಎರಡು ಸರ್ಕಾರಗಳ ನಡುವಿನ ಒಪ್ಪಂದ

"ಇದು ಭಾರತ ಮತ್ತು ಫ್ರಾನ್ಸ್ ಸರ್ಕಾರಕ್ಕೆ ಸಂಬಂಧಿಸಿದ ವಿಚಾರವಷ್ಟೆ. ಇದರಲ್ಲಿ ಯಾವುದೇ ಕಂಪನಿಯ ಹೆಸರುಗಳನ್ನುಕಡ್ಡಾಯವಾಗಿ ಹೇಳಲೇಬೇಕಾದ ಅಗತ್ಯವಿಲ್ಲ" ಎಂದು ಸೀತಾರಾಮನ್ ಸ್ಪಷ್ಟನೆ ನೀಡಿದರು.ರಕ್ಷಣಾ ಸಚಿವರ ಫ್ರಾನ್ಸ್ ಭೇಟಿಯ ಕಾರ್ಯಕ್ರಮ ಕಳೆದ ಮಾರ್ಚ್ ನಲ್ಲೇ ನಿರ್ಧಾರವಾಗಿತ್ತು.

ರಫೇಲ್ ಡೀಲ್: ವರಸೆ ಬದಲಾಯಿಸಿ, ಭಾರತದ ಬೆಂಬಲಕ್ಕೆ ನಿಂತ ಡಸಾಲ್ಟ್!ರಫೇಲ್ ಡೀಲ್: ವರಸೆ ಬದಲಾಯಿಸಿ, ಭಾರತದ ಬೆಂಬಲಕ್ಕೆ ನಿಂತ ಡಸಾಲ್ಟ್!

ತೇಪೆ ಹಚ್ಚುವುದಕ್ಕೆ ತೆರಳಿದರೇ ನಿರ್ಮಲಾ ಸೀತಾರಾಮನ್

ತೇಪೆ ಹಚ್ಚುವುದಕ್ಕೆ ತೆರಳಿದರೇ ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್ ಅವರು ಏಕಾಏಕಿ ಫ್ರಾನ್ಸ್ ಗೆ ತೆರಳಿದ್ದೇಕೆ? ರಫೇಲ್ ಡೀಲ್ ಹಗರಣವನ್ನು ಮುಚ್ಚಿಹಾಕುವುದಕ್ಕೇ? ತಕ್ಷಣ ಅಲ್ಲಿಗೆ ತೆರಳುವ ತುರ್ತು ಏನಿತ್ತು? ಎಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಪ್ರಶ್ನಿಸಿದ್ದವು. ಆದರೆ ಇದಕ್ಕೆ ಪ್ರತಿಕ್ರಿಯೆ ಎಂಬಂತೆ ರಕ್ಷಣಾ ಸಚಿವಾಲಯ ಒಂದು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, 'ರಕ್ಷಣಾ ಸಚಿವರ ಫ್ರಾನ್ಸ್ ಭೇಟಿಯ ಕಾರ್ಯಕ್ರಮ ಕಳೆದ ಮಾರ್ಚ್ ನಲ್ಲೇ ನಿಗದಿಯಾಗಿತ್ತು. ಭಾರತ ಮತ್ತು ಫ್ರಾನ್ಸ್ ನಡುವಿನ ವಾರ್ಷಿಕ ಸಚಿವರ ಸಭೆಯ ಪ್ರಯಕ್ತ ಈ ಭೇಟಿಯಷ್ಟೇ' ಎಂದು ಸ್ಪಷ್ಟನೆ ನೀಡಿದೆ.

ಡಸಾಲ್ಟ್ ನಿಂದ ಆಮಂತ್ರಣ?

ಡಸಾಲ್ಟ್ ನಿಂದ ಆಮಂತ್ರಣ?

ರಫೇಲ್ ಯುದ್ಧ ವಿಮಾನ ತಯಾರಿಸುತ್ತಿರುವ ಫ್ರಾನ್ಸ್ ನ ಮುಂಚೂಣಿ ಏವಿಯೇಶನ್ ಕಂಪನಿ ಡಸಾಲ್ಟ್ ನಿರ್ಮಲಾ ಸೀತಾರಾಮನ್ ಅವರಿಗೆ ಆಮಂತ್ರಣ ನೀಡಿತ್ತು. ತನ್ನಿಮಿತ್ತ ರಫೇಲ್ ಯುದ್ಧ ವಿಮಾನ ತಯಾರಾಗುತ್ತಿರುವ ಕಾರ್ಖಾನೆಗೂ ಅವರು ಭೇಟಿ ನೀಡಿದ್ದರು. ಯುದ್ಧ ವಿಮಾನ ತಯಾರಿಕೆ ಯಾವ ಹಂತದಲ್ಲಿದೆ ಎಮಬುದನ್ನು ವಿಚಾರಿಸಲು ತಾವಲ್ಲಿಗೆ ತೆರಳಿದ್ದಾಗಿಯೂ, ಡಸಾಲ್ಟ್ ತನ್ನನ್ನು ಆಮಂತ್ರಿಸಿದ್ದಾಗಿಯೂ ಸೀತಾರಾಮನ್ ತಿಳಿಸಿದ್ದಾರೆ.

ಭಾರತದ ಬೆಂಬಲಕ್ಕೆ ನಿಂತ ಡಸಾಲ್ಟ್

ಭಾರತದ ಬೆಂಬಲಕ್ಕೆ ನಿಂತ ಡಸಾಲ್ಟ್

ರಫೇಲ್ ಯುದ್ಧ ವಿಮಾನಗಳ ಬಿಡಿಭಾಗಗಳ ತಯಾರಿಕೆಗೆ ರಿಲಯನ್ಸ್ ಡಿಫೆನ್ಸ್ ಇಂಡಸ್ಟ್ರೀಸ್ ಅನ್ನು ಆಯ್ಕೆ ಮಾಡಿಕೊಳ್ಳುವಂತೆ ಭಾರತವೇ ಡಸಾಲ್ಟ್ ಗೆ ಸಲಹೆ ನೀಡಿತ್ತು ಎಂಬ ಫ್ರಾನ್ಸ್ ಮಾಧ್ಯಮವೊಂದರ ವರದಿಯನ್ನು ಸ್ವತಃ ಡಸಾಲ್ಟ್ ಕಂಪನಿಯೇ ತಳ್ಳಿಹಾಕಿದೆ. ರಿಲಯನ್ಸ್ ಅನ್ನು ತನ್ನ ಪಾಲುದಾರ ಸಂಸ್ಥೆಯನ್ನಾಗಿ ಆರಿಸಿಕೊಳ್ಳುವುದು ನನ್ನದೇ ನಿರ್ಧಾರ. ಇದರಲ್ಲಿ ಭಾರತ ಸರ್ಕಾರ ಯಾವುದೇ ರೀತಿಯ ಒತ್ತಡ ಹೇರಿಲ್ಲ ಎಂದು ಡಸಾಲ್ಟ್ ಸ್ಪಷ್ಟಪಡಿಸುವ ಮೂಲಕ ಸರ್ಕಾರದ ಬೆಂಬಲಕ್ಕೆ ನಿಂತಿದೆ.

English summary
Defence Minister Nirmala Sitharaman, who is on her 3 days visit to France clarifies, Rafale deal is a government to government deal, No company's names are mentioned. She responded for allegations against her visit to France.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X