Boycott ಕತಾರ್ ಏರ್‌ವೇಸ್ ಎಂದವರಿಗೆ ಸಿಇಒ ತರಾಟೆ!
ಕತಾರ್, ಜೂ. 8: ಪ್ರವಾದಿ ಮೊಹಮ್ಮದ್ ಪೈಗಂಬರ್ ಅವಹೇಳನ ವಿವಾದದಿಂದ ರೊಚ್ಚಿಗೆದ್ದ ಮುಸ್ಲಿಂ ಪ್ರಾಬಲ್ಯ ಹೊಂದಿರುವ ರಾಷ್ಟ್ರಗಳು ಭಾರತೀಯ ವಸ್ತುಗಳ ಬಹಿಷ್ಕಾರಕ್ಕೆ ಕರೆ ನೀಡಿದ ಬೆನ್ನಲ್ಲೇ ಈಗ ಕೆಲವರು ಕತಾರ್ ವಿಮಾನ ಬಹಿಷ್ಕಾರಕ್ಕೆ ಕರೆ ನೀಡಿದ್ದು, ಇದರ ವಿರುದ್ಧ ಕತಾರ್ ಏರ್‌ಲೈನ್ ಸಿಇಒ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಸ್ಲಿಂ ರಾಷ್ಟ್ರಗಳೊಂದಿಗೆ ರಾಜತಾಂತ್ರಿಕ ಬಿಕ್ಕಟ್ಟನ್ನುಶಮನಗೊಳಿಸಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲೇ ಕೆಲವರು ಕತಾರ್ ವಿಮಾನ ಬಹಿಷ್ಕಾರಕ್ಕೆ ಕರೆ ನೀಡಿದ್ದು, ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ.
#BycottqatarAirways ಎಂದು ಹ್ಯಾಷ್‌ಟ್ಯಾಗ್ ಮಾಡಿದ ಟ್ವಿಟ್‌ಗಳು ಸಾಕಷ್ಟು ವೈರಲ್ ಆಗಿವೆ. ನಾವು ಕತಾರ್ ವಿಮಾನವನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಹೇಳಿರುವ ಟ್ವಿಟ್‌ಗಳು ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿವೆ.

ಕತಾರ್ ಏರ್‌ವೇಸ್‌ನ ಸಿಇಒ ಕಿಡಿ
ಕತಾರ್‌ನಲ್ಲಿ ಭಾರತೀಯ ವಸ್ತುಗಳ ಬಹಿಷ್ಕಾರಕ್ಕೆ ಕರೆ ನೀಡಿದಾಗ ಇಲ್ಲಿ ಕತಾರ್‌ನ ವಿಮಾನ ಬಳಸುವುದನ್ನುನಾವು ನಿಷೇಧಿಸುತ್ತೇವೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಕತಾರ್ ಏರ್‌ವೇಸ್‌ನ ಸಿಇಒ ಕಿಡಿಕಾರಿದ್ದು, ಅಲ್‌ಜಜೀರಾ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿ ಜಿವನದಲ್ಲಿ ಒಂದು ಬಾರಿಯೂ ವಿಮಾನ ಟಿಕೆಟ್ ಅನ್ನೇ ಖರೀಸದ ಜನರು ಕತಾರ್ ವಿಮಾನ ಪ್ರಯಾಣ ಬಹಿಷ್ಕಾರದ ಬಗ್ಗೆ ಮಾತನಾಡುತ್ತಾರೆ ಎಂದು ಹೇಳಿರುವ ವೀಡಿಯೋ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದೆ.
ಐ ಆಮ್ ಅಗೆನೆಸ್ಟ್ ಕತಾರ್ ಏರ್‌ವೇಸ್ ಹಾಗೂ ಬಾಯ್ಕಾಟ್ ಕತಾರ್ ಏರ್‌ವೇಸ್ ಎಂದು ಹಲವರು ಸಾಮಾಜಿಕ ಜಾಲತಾಣ ಟ್ವಿಟ್ವರ್‌ನಲ್ಲಿ ಆಕ್ರೋಶ ವ್ತಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕತಾರ್ ಏರ್‌ವೇಸ್‌ನ ಸಿಇಒ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನ
ಇತ್ತೀಚೆಗೆ ಖಾಸಗಿ ಸುದ್ದಿ ಸಂಸ್ಥೆ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ಬಿಜೆಪಿಯ ರಾಷ್ಟ್ರೀಯ ವಕ್ತಾರೆ ನುಪೂರ್ ಶರ್ಮಾ ಜ್ಞಾನವಾಪಿ ಶಿವಲಿಂಗದ ವಿಚಾರ ಚರ್ಚೆ ಮಾಡುವಾಗ ಇಸ್ಲಾಂ ಧರ್ಮದ ಸ್ಥಾಪಕ ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದು ಭಾರತ ಮಾತ್ರವಲ್ಲದೆ ಸುಮಾರು 15 ಮುಸ್ಲಿಂ ಬಾಹುಳ್ಳ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದಾದ ಬಳಿಕ ದೆಹಲಿಯ ಬಿಜೆಪಿ ವಕ್ತಾರ ನವೀನ್ ಕುಮಾರ್ ಜಿಂದಾಲ್ ಅವರು ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳಕಾರಿಯಾಗಿ ಟ್ವೀಟ್ ಮಾಡಿದ್ದರು. ಇವೆರಡನ್ನು ಆಲ್ಟ್ ನ್ಯೂಸ್‌ನ ಪ್ರತಿನಿಧಿಯೊಬ್ಬರು ಟ್ವಿಟ್ ಮಾಡಿ ಇದು ಬಾರಿ ವೈರಲ್ ಆಗಿತ್ತು.

ನಮಗೆ ಎಲ್ಲ ಧರ್ಮವೂ ಒಂದೇ
ಬಳಿಕ ಬಿಜೆಪಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ನಮಗೆ ಯಾರ ಧರ್ಮದ ಬಗ್ಗೆಯೂ ಅವಹೇಳನ ಮಾಡುವ ಉದ್ದೇಶವಿಲ್ಲ. ಭಾರತ ಸಂವಿಧಾನದ ಅಡಿಯಲ್ಲಿ ನಮಗೆ ಎಲ್ಲ ಧರ್ಮವೂ ಒಂದೇ. ಯಾರ ಧರ್ಮವನ್ನು ಹೀಗಳೆಯಬೇಕಾಗಿಲ್ಲ ಎಂದು ಪಕ್ಷದ ಮುಖಂಡ ಅರುಣ್ ಸಿಂಗ್ ಮಾತನಾಡಿದ್ದರು. ನಂತರ ನುಪೂರ್ ಶರ್ಮಾ ಹಾಗೂ ನವೀನ್ ಕುಮಾರ್ ಜಿಂದಾಲ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಬಳಿಕ ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತ ಅವಹೇಳನಕಾರಿ ವೀಡಿಯೋ ವೈರಲ್ ಆಗುತ್ತಿದಂತೆ ಕತಾರ್, ಕುವೈತ್, ಅರಬ್ ರಾಷ್ಟ್ರಗಳು, ಗಲ್ಫ್ ರಾಷ್ಟ್ರಗಳು ಸೇರಿದಂತೆ ಇನ್ನಿತರ 15 ರಾಷ್ಟ್ರಗಳು ಆಕ್ರೋಶ ವ್ಯಕ್ತಪಡಿಸಿದ್ದವು.
|
ಭಾರತೀಯ ವಸ್ತುಗಳ ನಿಷೇಧ
ಕತಾರ್ ಸೇರಿದಂತೆ ವಿವಿಧೆಡೆ ಪ್ರತಿಭಟನೆಯ ಭಾಗವಾಗಿ ತನ್ನ ದೇಶದಲ್ಲಿರುವ ಭಾರತೀಯ ರಾಯಭಾರಿಗಳನ್ನು ಕರೆಸಿಕೊಂಡಿದ್ದ ಹಲವು ರಾಷ್ಟ್ರಗಳು ಅವರಿಗೆ ಪ್ರತಿಭಟನೆಯ ಪತ್ರವನ್ನು ನೀಡಿ ಆಕ್ರೋಶ ವ್ಯಕ್ತಪಡಿಸಿದ್ದವು. ಅಲ್ಲದೆ ತಮ್ಮ ದೇಶಗಳಲ್ಲಿ ಭಾರತೀಯ ವಸ್ತುಗಳ ನಿಷೇಧಕ್ಕೆ ಕರೆ ನೀಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿತ್ತು. ಇದರಿಂದ ಎಚ್ಚೆತ್ತುಕೊಂಡಿದ್ದ ಭಾರತ ಸರ್ಕಾರ ಇದು ಪಕ್ಷದ ವ್ಯಕ್ತಿಯೊಬ್ಬರು ನೀಡಿದ ಹೇಳಿಕೆ ಮಾತ್ರವೇ ಆಗಿದೆ. ಇದು ನಮ್ಮ ಸರ್ಕಾರದ ಹೇಳಿಕೆ ಅಲ್ಲ ಎಂದು ತೇಪೆ ಹಾಕಿತ್ತು. ಅಂತಾರಾಷ್ಟ್ರೀಯವಾಗಿ ಭಾರತೀಯ ವಸ್ತುಗಳಿಗೆ ನಿಷೇಧ ಭಾರೀ ಸುದ್ದಿ ಮಾಡಿತ್ತು.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications