ನೇಪಾಳದ ಪ್ರಧಾನಿಯಾದ ಮಾವೋವಾದಿ ಮುಖಂಡ ಪುಷ್ಪ ಕಮಲ್

Posted By:
Subscribe to Oneindia Kannada

ಕಠ್ಮಂಡು, ಆಗಸ್ಟ್ 03: ಮಾವೋವಾದಿ ಬಂಡುಕೋರ ಮುಖ್ಯಸ್ಥ ಪುಷ್ಪ ಕಮಲ್ ದಹಲ್ (61) ಅವರು ನೇಪಾಳದ ನೂತನ ಪ್ರಧಾನ ಮಂತ್ರಿಯಾಗಿ ಬುಧವಾರ ಆಯ್ಕೆಯಾಗಿದ್ದಾರೆ ಎಂದು ಸ್ಪೀಕರ್ ಒನ್ಸಾರಿ ಘರ್ತಿ ಮಗರ್ ಘೋಷಿಸಿದರು.

ನೇಪಾಳಿ ಸಂಸತ್ತಿನಲ್ಲಿ ನೂತನ ಪ್ರಧಾನಮಂತ್ರಿ ಆಯ್ಕೆಗಾಗಿ ನಡೆದ ಮತದಾನದಲ್ಲಿ ಶೇ 50ಕ್ಕಿಂತ ಅಧಿಕ ಮತವನ್ನು ಪುಷ್ಪ ಕಮಲ್ ಪಡೆದುಕೊಂಡ್ದರು. 573 ಜನಪ್ರತಿನಿಧಿಗಳ ಪೈಕಿ 363 ಮಂದಿ ದಹಲ್ ಪರ ಮತ ಹಾಕಿದರು. ಪ್ರಧಾನಿ ಪಟ್ಟಕ್ಕೇರಲು ದಹಲ್ ಅವರಿಎಗ್ ಒಟ್ಟಾರೆ 595 ಸಂಸತ್ ಸದಸ್ಯರ ಪೈಕಿ 298 ಮತಗಳು ಅಗತ್ಯವಿತ್ತು.

Pushpa Kamal Dahal elected Nepal Prime Minister

ಅವಿಶ್ವಾಸದ ಗೊತ್ತುವಳಿಯಲ್ಲಿ ಪರಾಭವಗೊಳ್ಳುವ ಸಾಧ್ಯತೆಯಿಂದ ಪಾರಾಗಲು ಕೆ.ಪಿ. ಒಲಿ ಅವರು ಇತ್ತೀಚೆಗೆ ಪ್ರಧಾನಿ ಪಟ್ಟಕ್ಕೆ ರಾಜೀನಾಮೆ ನೀಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
CPN Maoist Chairman Pushpa Kamal Dahal has been elected the new Prime Minister of Nepal.
Please Wait while comments are loading...