ಇಮ್ರಾನ್ ಖಾನ್ ಮನೆಗೆ ನುಗ್ಗಲು ಸಿಕ್ಕೇಬಿಡ್ತು ಪರ್ಮಿಷನ್!
ಲಾಹೋರ್: ಇಮ್ರಾನ್ ಖಾನ್ ಮನೆಯ ಹೊರಗೆ ಭಯೋತ್ಪಾದಕರಿಗೆ ವ್ಯವಸ್ಥೆ ಕಲ್ಪಿಸಿದ ಆರೋಪದ ನಡುವೆಯೇ ಮನೆಯೊಳಗೂ ಸರ್ಚ್ ಮಾಡಲು ಒಪ್ಪಿಗೆ ಸಿಕ್ಕಿದೆ. ಪಾಕಿಸ್ತಾನ ಮಾಜಿ ಪಿಎಂ ಇಮ್ರಾನ್ ಖಾನ್ ನಿವಾಸದಲ್ಲಿ ಶೋಧ ನಡೆಸಲು ಪಂಜಾಬ್ ಪೊಲೀಸರು ಇಂದು ಕೋರ್ಟ್‌ನಿಂದ ವಾರೆಂಟ್ ಪಡೆದಿದ್ದಾರೆ. ಈ ಮೂಲಕ ಖಾನ್ ರಾಜಕೀಯ ಬದುಕಿಗೆ ಕೊನೆ ಮೊಳೆ ಹೊಡೆದಂತಾಗಿದೆ.
ಪಾಕಿಸ್ತಾನದಲ್ಲಿ ಸೇನೆ ಮಾತ್ರ ಉಗ್ರರಿಗೆ ಅಥವಾ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ ಎಂಬ ಆರೋಪ ಇತ್ತು. ಆದರೆ ಈಗ ನೋಡಿದರೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮನೆಯಲ್ಲೇ ಉಗ್ರರು ಪತ್ತೆಯಾಗಿದ್ದಾರೆ. ಈ ಮೂಲಕ ಇಡೀ ಜಗತ್ತಿಗೆ ಪಾಕಿಸ್ತಾನ ರಾಜಕಾರಣಿಗಳ ಮತ್ತೊಂದು ಮುಖ ಪರಿಚಯವಾಗಿದೆ. ಇಮ್ರಾನ್ ಖಾನ್ (Imran Khan Arrest) ವಿರುದ್ಧ ಭ್ರಷ್ಟಾಚಾರದ ಆರೋಪಗಳ ನಡುವೆ, ಭಯೋತ್ಪಾದಕರಿಗೂ ಬೆಂಬಲ ನೀಡಿದ ಆರೋಪ ಈಗ ಪ್ರೂವ್ ಆಗಿದೆ. ಇಮ್ರಾನ್ ಮನೆಯಲ್ಲಿ 8 ಉಗ್ರರು ಸಿಕ್ಕಿಬಿದ್ದಿದ್ದಾರೆ.

ಪಾಕಿಸ್ತಾನದಲ್ಲಿ ಏನ್ ನಡೀತಾ ಇದೆ?
ಅಂದಹಾಗೆ ನಿನ್ನೆಯಷ್ಟೇ ಇಮ್ರಾನ್ ಮನೆ ಒಳಗೆ 40 ಉಗ್ರರು ಅಡಗಿದ್ದಾರೆ ಎಂಬ ಆರೋಪ ಮಾಡಲಾಗಿತ್ತು. ಈ ಕಾರಣಕ್ಕೆ ಪಾಕ್‌ನ ಪಂಜಾಬ್ ಪ್ರಾಂತ್ಯದ ಸಾವಿರಾರು ಪೊಲೀಸರು ಇಮ್ರಾನ್ ಮನೆ ಮೇಲೆ ದಾಳಿ ಮಾಡಿದ್ದರು. ದಾಳಿಯ ವೇಳೆ 8 ಉಗ್ರರು ಲಾಕ್ ಆಗಿದ್ರು. ಆದರೆ ಜಮಾನ್ ಪಾರ್ಕ್‌ನಲ್ಲಿ ಶೋಧ ನಡೆಸುವ ಮೊದಲು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ನಾಯಕರ ಜೊತೆ ಮಾತುಕತೆಗೆ ತಂಡ ಕಳುಹಿಸಲು ಪಂಜಾಬ್ ಸರ್ಕಾರ ನಿರ್ಧರಿಸಿದ ಕೆಲವೇ ಹೊತ್ತಲ್ಲಿ ಕೋರ್ಟ್‌ನಿಂದ ವಾರೆಂಟ್ ಸಿಕ್ಕಿದೆ.
ಯಾರೆಲ್ಲಾ ಸಿಕ್ಕಿಬಿದ್ದರು ಗೊತ್ತಾ?
ಇನ್ನು ಲಾಹೋರ್‌ನ ಜಮಾನ್ ಪಾರ್ಕ್‌ನಲ್ಲಿರುವ ಇಮ್ರಾನ್ ಮನೆಯೊಳಗೆ ಅಡಗಿ ಕುಳಿತಿರುವ ಭಯೋತ್ಪಾದಕರನ್ನು ಸರ್ಕಾರಕ್ಕೆ ಒಪ್ಪಿಸುವುದಕ್ಕೆ ನಿಗದಿಪಡಿಸಿದ ಗಡುವು ಕೊನೆಗೊಂಡ ಹಿನ್ನೆಲೆ ಪಂಜಾಬ್ ಪೊಲೀಸರು ಮನೆ ಸುತ್ತುವರಿದು ತಮ್ಮ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ ಇದಕ್ಕೆ ಅಡ್ಡಿ ಮಾಡಲು ಇಮ್ರಾನ್ ಖಾನ್ ಪಟ್ಟ ಪ್ರಯತ್ನ ಈಗ ವಿಫಲವಾಗಿದೆ. ಮೇ 9ರಂದು ಇಮ್ರಾನ್ ಅರೆಸ್ಟ್ ಆದ ನಂತರ ಸೇನಾ ನೆಲೆ ಮೇಲಿನ ದಾಳಿಯಲ್ಲಿ ಭಾಗಿಯಾಗಿರುವ 8 ಶಂಕಿತರನ್ನು ಜಮಾನ್ ಪಾರ್ಕ್ ಪ್ರದೇಶದಲ್ಲಿ ಬಂಧಿಸಲಾಗಿದೆ.

ಇಮ್ರಾನ್ ಮನೆಯಲ್ಲಿ ಉಗ್ರರಿಗೆ ರಾಜಾಥಿತ್ಯ!
ಪಂಜಾಬ್ ಪೊಲೀಸರು ಇಮ್ರಾನ್ ಖಾನ್‌ನ ಮನೆ ಒಳಗೆ ನುಗ್ಗಿ ಪರಿಶೀಲನೆ ನಡೆಸಿದಾಗ ಗೊತ್ತಾಗಿದ್ದು ಆಘಾತಕಾರಿ ಸಂಗತಿ. ಅದೇನೆಂದರೆ ಇತ್ತೀಚೆಗೆ ಪಾಕಿಸ್ತಾನದಲ್ಲಿ ಹಿಂಸಾಚಾರ ನಡೆಸಿ, 50 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಮಾಡಿರುವ ಉಗ್ರರ ಪಡೆ ಇಮ್ರಾನ್ ಖಾನ್ ಮನೆಯಲ್ಲೇ ಜಾಗ ಪಡೆದಿತ್ತು. ಹಿಂಸಾಚಾರ ನಡೆಸಿದ್ದವರಿಗೆ ಇಮ್ರಾನ್ ಮನೆಯ ಕಾಂಪೌಂಡ್ ಆವರಣದಲ್ಲಿ ಟೆಂಟ್‌ಗಳನ್ನ ಹಾಕಿ, ರಾಜಾಥಿತ್ಯ ನೀಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅಲರ್ಟ್ ಆದ ಪಂಜಾಬ್ ಪ್ರಾಂತ್ಯದ ಪೊಲೀಸರು, ಎಲ್ಲವನ್ನೂ ವಿಡಿಯೋ ಮಾಡಿದ್ದಾರೆ.
ಗನ್ ಹಿಡಿದು ನುಗ್ಗಿದ ಪೊಲೀಸ್ ಪಡೆ
ಜಮಾನ್ ಪಾರ್ಕ್ ಬಳಿ ಯಾವುದೇ ಸಮಯದಲ್ಲಿ ಹಿಂಸಾಚಾರ ಸ್ಫೋಟವಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಪೊಲೀಸ್ ಪಡೆ ಶಸ್ತ್ರಸಜ್ಜಿತರಾಗಿ ಸಿದ್ಧವಾಗಿದ್ದಾರೆ. ಇಮ್ರಾನ್ ನಿವಾಸಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆ ಬಂದ್ ಮಾಡಲಾಗಿದೆ. ಸ್ಥಳಗಳಲ್ಲಿ ಜಾಮರ್ ಅಳವಡಿಸಲಾಗಿದೆ. ಪೊಲೀಸರು ಕೆಲ ಶಂಕಿತ ಉಗ್ರರನ್ನು ಬಂಧೀಸಿದ್ದು, ಈ ಪೈಕಿ ಹಲವರು ಉಗ್ರರು ಎಂದು ಆರೋಪಿಸಲಾಗಿದೆ. ಆದರೆ ಇಮ್ರಾನ್ ಖಾನ್ ಪಕ್ಷದ ನಾಯಕರು ಈ ಆರೋಪ ಅಲ್ಲಗಳೆದಿದ್ದಾರೆ.
ಈಗಾಗಲೇ ಪಾಕಿಸ್ತಾನ ಸೇನೆ & ಪಾಕಿಸ್ತಾನದ ಕೇಂದ್ರ ಸರ್ಕಾರ ಇಮ್ರಾನ್ ಅರೆಸ್ಟ್ ಮಾಡಲು ಹಲವು ಪಿತೂರಿ ಮಾಡಿದೆ. ಅದರಲ್ಲಿ ಇದೂ ಕೂಡ ಒಂದು ಎಂದು ಆರೋಪಿಸಲಾಗುತ್ತಿದೆ. ಇಮ್ರಾನ್ ಖಾನ್ ವಿರುದ್ಧ ಭಯೋತ್ಪಾದನೆ ಆರೋಪ ಹೊರಿಸಿ ಒಳಗೆ ಹಾಕಿದ್ರೆ ಹತ್ತಾರು ವರ್ಷ ಅಲ್ಲೇ ಲಾಕ್ ಮಾಡಬಹುದು. ಹಾಗೇ ಪಾಕ್ ಸೇನೆ, ISI ಬಗ್ಗೆ ಮಾತನಾಡಿದ ಇಮ್ರಾನ್‌ಗೆ (Pakistan) ಪಾಠ ಕಲಿಸಬಹುದು ಎಂಬ ತಂತ್ರ ಅಡಗಿರಬಹುದು. ಹೀಗೆ ಪಾಕಿಸ್ತಾನ ತಾನು ಎಂತಹ ದೇಶ ಅನ್ನೋದನ್ನ ಮತ್ತೊಮ್ಮೆ ಜಗತ್ತಿಗೇ ತೋರಿಸುತ್ತಿದೆ.












Click it and Unblock the Notifications