Nepal Protest: ಪ್ರಧಾನಿ ಎಸ್ಕೇಪ್, ರಾಷ್ಟ್ರಪತಿ ಕೂಡ ರಾಜೀನಾಮೆ... ಭಾರತದ ನೆರೆ ದೇಶಕ್ಕೆ ಕಂಟಕ?
ಸೀತಾಮಾತೆಯ ತವರು ಅಂತಾ ಕರೆಯಲಾಗುವ ನೇಪಾಳ ನೆಲದಲ್ಲಿ ಅಲ್ಲೋಲ ಕಲ್ಲೋಲವೇ ಇದೀಗ ಸೃಷ್ಟಿಯಾಗಿದೆ. ನೇಪಾಳದಲ್ಲಿ ಬೃಹತ್ ಪ್ರತಿಭಟನೆ ಶುರುವಾದ ಹಿನ್ನೆಲೆ ಎಲ್ಲೆಲ್ಲೂ ಬೆಂಕಿ ಹೊತ್ತಿದ್ದು, ಸಾಕಷ್ಟು ಸಾವು & ನೋವು ಕೂಡ ವರದಿಯಾಗಿದೆ. ಸೋಷಿಯಲ್ ಮೀಡಿಯಾ ಕಾರಣಕ್ಕೆ ಅಂತಾನೇ ಶುರುವಾಗಿದ್ದ ಈ ಜಗಳ ಇದೀಗ ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದು, ಯುವ ಜನಾಂಗ ಬೀದಿಗಿಳಿದು ಕಂಡ ಕಂಡ ಜಾಗದಲ್ಲಿ ಬೆಂಕಿ ಹಚ್ಚುತ್ತಿದ್ದಾರೆ. ಇಂತಹ ಸಮಯದಲ್ಲೇ ಪ್ರಧಾನಿ ಎಸ್ಕೇಪ್, ರಾಷ್ಟ್ರಪತಿ ಕೂಡ ರಾಜೀನಾಮೆ...
ನೇಪಾಳ ನೆಮ್ಮದಿಯಾಗಿ ಇದ್ದ ದೇಶ, ಆದ್ರೆ ಅಲ್ಲಿನ ಸರ್ಕಾರವೇ ಮಾಡಿಕೊಂಡ ಒಂದು ಸಣ್ಣ ಎಡವಟ್ಟು ಇದೀಗ ದೊಡ್ಡ ವಿಪತ್ತು ಸೃಷ್ಟಿ ಮಾಡುತ್ತಿದೆ. ಅಂದಹಾಗೆ ನೇಪಾಳ ಸರ್ಕಾರ ಸುಮ್ಮನೇ ಇರದೆ ತನ್ನ ಬುಡಕ್ಕೆ ತಾನೇ ಬೆಂಕಿ ಹಚ್ಚಿಕೊಳ್ಳುವ ಕೆಲಸ ಮಾಡಿದೆ. ನೇಪಾಳದಲ್ಲಿ ಅಧಿಕಾರದಲ್ಲಿದ್ದ ಕೆಪಿ ಶರ್ಮಾ ಓಲಿ ನೇತೃತ್ವದ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಆರೋಪದ ಬೆನ್ನಲ್ಲೇ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿ ದಿಢೀರ್ ಸೋಷಿಯಲ್ ಮೀಡಿಯಾ ಮೇಲೆ ನಿಷೇಧ ಹೇರಲಾಗಿತ್ತು...

ಸೋಷಿಯಲ್ ಮೀಡಿಯಾ ಕಾರಣಕ್ಕೆ ರಣರಂಗ!
ಹೌದು, ನೇಪಾಳದಲ್ಲಿ ಶುರುವಾಗಿರುವ ಹೋರಾಟದ ಬೆಂಕಿ ಇದೀಗ ಇಡೀ ದೇಶವನ್ನೇ ಸುಟ್ಟುಹಾಕಿದೆ. ದಿಢೀರ್ ಅಂತಾ ನೇಪಾಳ ಸರ್ಕಾರ ಯುಟ್ಯೂಬ್, ಎಕ್ಸ್, ಇನ್ಸ್‌ಟಾಗ್ರಾಮ್ & ಫೇಸ್‌ಬುಕ್ ಸೇರಿದಂತೆ ಒಟ್ಟು 26 ದೊಡ್ಡ ದೊಡ್ಡ ಸೋಷಿಯಲ್ ಮೀಡಿಯಾ ಆಪ್‌ಗಳನ್ನ ಬ್ಯಾನ್ ಮಾಡಿತ್ತು. ಈ ಸುದ್ದಿಯನ್ನ ತಿಳಿದ ಲಕ್ಷಾಂತರ ನೇಪಾಳ ಯುವತಿಯರು & ಯುವಕರು ಬೀದಿ ಬೀದಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಈ ರೀತಿ ಶುರುವಾಗಿದ್ದ ನೇಪಾಳ ಸೋಷಿಯಲ್ ಮೀಡಿಯಾ ಗಲಾಟೆಯಲ್ಲಿ 19 ಜನರ ಜೀವ ಹೋಗಿದ್ದರೆ, 400 ಜನರಿಗೆ ಗಂಭೀರವಾಗಿ ಗಾಯಗಳಾಗಿದೆ. ಇಂತಹ ಪರಿಸ್ಥಿತಿಯಲ್ಲೇ ಮತ್ತೊಂದು ಸುದ್ದಿ ಇದೀಗ ನೇಪಾಳ ನೆಲದಲ್ಲಿ ಸಂಚಲನ ಸೃಷ್ಟಿ ಮಾಡಿದೆ.
ರಾಷ್ಟ್ರಪತಿ ಕೂಡ ದೇಶಬಿಟ್ಟು ಎಸ್ಕೇಪ್?
ಕೆಪಿ ಶರ್ಮಾ ಓಲಿ ತನ್ನದೇ ದೇಶದ ಯುವಕರು ಹೋರಾಟ ಮಾಡುತ್ತಿರುವ ರೀತಿ ಕಂಡು ಬೆಚ್ಚಿಬಿದ್ದು ಪ್ರಧಾನಿ ಪಟ್ಟಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಮತ್ತೊಂದು ಕಡೆ ಕೆಪಿ ಶರ್ಮಾ ಓಲಿ ನೇಪಾಳ ಬಿಟ್ಟು ಓಡಿ ಹೋಗಿದ್ದಾರೆ ಅನ್ನೋ ಆರೋಪ ಕೂಡ ಮಾಡಲಾಗುತ್ತಿದೆ. ಇಷ್ಟೆಲ್ಲದರ ನಡುವೆ ಮತ್ತೊಂದು ಕಡೆ ನೇಪಾಳದ ರಾಷ್ಟ್ರಪತಿ ರಾಮ ಚಂದ್ರ ಪೌಡೆಲ್ ಕೂಡ ರಾಜೀನಾಮೆ ನೀಡಿದ್ದು, ದೇಶದಿಂದ ಪಲಾಯನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಈ ಬಗ್ಗೆ ಅಧಿಕೃತ ಮಾಹಿತಿಗಾಗಿ ಕಾಯಲಾಗ್ತಿದೆ.












Click it and Unblock the Notifications