• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ತಾನ್‌ಬುಲ್‌ನಲ್ಲಿ ಸ್ಫೋಟ; ಉಗ್ರರ ದಾಳಿ ಶಂಕೆ

|
Google Oneindia Kannada News

ಇಸ್ತಾನ್‌ಬುಲ್, ನ.13: ಇಸ್ತಾನ್‌ಬುಲ್ ಕೇಂದ್ರ ಭಾಗದಲ್ಲಿರುವ ತಕ್ಸಿಮ್ ಜಿಲ್ಲೆಯಲ್ಲಿ ಇಂದು ಭಾರಿ ಸ್ಫೋಟ ಸಂಭವಿಸಿದೆ. ಈ ಸ್ಫೋಟದಲ್ಲಿ ಕನಿಷ್ಠ 6 ಮಂದಿ ಮೃತಪಟ್ಟಿದ್ದರೆ, ಹಲವರಿಗೆ ಗಾಯಗಳಾಗಿವೆ. ಘಟನೆಯ ಹೊಣೆಯನ್ನು ಯಾವ ಉಗ್ರ ಸಂಘಟನೆಗಳು ಇಲ್ಲಿ ತನಕ ಹೊತ್ತುಕೊಂಡಿಲ್ಲ, ಆದರೆ, ಈ ವಿಧ್ವಂಸಕ ಕೃತ್ಯದ ಹಿಂದೆ ಉಗ್ರರ ಕೈವಾಡ ಇರುವ ಬಗ್ಗೆ ಅಧ್ಯಕ್ಷ ಎರ್ಡೋಗಾನ್ ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಫೋಟ ಬಗ್ಗೆ ಭಾರತೀಯ ರಾಯಭಾರ ಕಚೇರಿ ಕಳವಳ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಸಂದೇಶ ತಿಳಿಸಿದೆ.

"ಇಸ್ತಾನ್‌ಬುಲ್‌ನಲ್ಲಿ ಇಂದು ಸಂಭವಿಸಿದ ಸ್ಫೋಟದಲ್ಲಿ ಮೃತರಾದವರ ಬಗ್ಗೆ ಭಾರತವು ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ದುಃಖದಲ್ಲಿರುವವರ ಬಗ್ಗೆ ಸಹಾನುಭೂತಿ ಇದೆ, ಟರ್ಕಿ ಸರ್ಕಾರದ ನಮ್ಮ ಸಹಕಾರ ಸದಾ ಇರಲಿದೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ" ಎಂದು MEA ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.

ಇಸ್ತಾನ್‌ಬುಲ್‌ನ ಮಧ್ಯಭಾಗದಲ್ಲಿರುವ ಪ್ರಮುಖ ಜನನಿಬಿಡ ಪ್ರದೇಶದಲ್ಲಿ ಭಾನುವಾರ ಸ್ಫೋಟವಾಗಿದ್ದು, ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 30 ಜನರು ಗಾಯಗೊಂಡಿದ್ದಾರೆ, ಜನರು ದಿಕ್ಕಾಪಾಲಾಗಿ ಓಡುತ್ತಿದ್ದಾರೆ ಎಂದು ಮೊದಲ ವರದಿಗಳು ಬಂದಿವೆ.

ಘಟನಾ ಸ್ಥಳಕ್ಕೆ ತಕ್ಷಣವೇ ಆಂಬ್ಯುಲೆನ್ಸ್‌ಗಳು ಧಾವಿಸಿದ್ದರಿಂದ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲು ಸಾಧ್ಯವಾಯಿತು. ನಂತರ ಇಸ್ತಿಕ್‌ಲಾಲ್ ಅವೆನ್ಯೂವನ್ನು ಪೊಲೀಸರು ಸಂಪೂರ್ಣ ಬಂದ್ ಮಾಡಿದರು. TRT ಮತ್ತು ಇತರ ಮಾಧ್ಯಮ ತಾಣಗಳ ಪ್ರಕಾರ, ನಗರದ ಬೆಯೊಗ್ಲು ಪ್ರದೇಶ ಪ್ರಮುಖ ಶಾಪಿಂಗ್ ತಾಣವಾಗಿದ್ದು, ಸ್ಥಳೀಯ ಜನರು ಮತ್ತು ಪ್ರವಾಸಿಗರೊಂದಿಗೆ ಕಿಕ್ಕಿರಿದಿರುತ್ತದೆ.

ಇಸ್ತಾಂಬುಲ್ ಗವರ್ನರ್ ಅಲಿ ಯೆರ್ಲಿಕಾಯಾ ನೀಡಿರುವ ಅಧಿಕೃತ ಹೇಳಿಕೆ ಪ್ರಕಾರ,ಇಸ್ತಿಕ್ಲಾಲ್ ಬೀದಿಯಲ್ಲಿ 16:20 ಕ್ಕೆ.(ಸ್ಥಳೀಯ ಕಾಲಮಾನ ಪ್ರಕಾರ) ಮೊದಲಿಗೆ ಭಾರಿ ಸ್ಫೋಟ ಕೇಳಿ ಬಂದಿದೆ. ಬೆಯೊಗ್ಲು ಜಿಲ್ಲೆಯ ತಕ್ಸಿಮ್ ಇಸ್ತಿಕ್ಲಾಲ್ ಬೀದಿಯಲ್ಲಿ ನಡೆದ ಘಟನೆ ತಕ್ಷಣವೇ ಪೊಲೀಸರು, ಆರೋಗ್ಯ ಸಿಬ್ಬಂದಿ, ಅಗ್ನಿಶಾಮಕ ದಳ, ಎಎಫ್ಎಡಿ ತಂಡಗಳು ಸ್ಪಂದಿಸಿವೆ, ಪರಿಸ್ಥಿತಿ ನಿಯಂತ್ರಣದಲ್ಲಿದೆ, ಈ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 6 ಎಂದು ತಿಳಿಸಿದ್ದಾರೆ.

ಘಟನೆ ಬಳಿಕ ಅನೇಕರು ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ, ಫೋಟೋ ಹಂಚಿಕೊಂಡಿದ್ದಾರೆ. ಆದರೆ, ಇಲ್ಲಿ ತನಕ ಘಟನೆಗೆ ಏನು ಕಾರಣ, ಈ ಸ್ಫೋಟದ ಹಿಂದೆ ಯಾವುದಾದರೂ ಉಗ್ರ ಸಂಘಟನೆಯ ಕೈವಾಡ ಇದೆಯೇ? ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ.

2015 ಹಾಗೂ 2017ರಲ್ಲಿ ಇಸ್ಲಾಮಿಕ್ ಸ್ಟೇಟ್ ಗುಂಪು ಹಾಗೂ ಕುರ್ದೀಶ್ ಬಂಡಾಯಕೋರರ ಗುಂಪಿನಿಂದ ಟರ್ಕಿ ಮೇಲೆ ಸತತ ಬಾಂಬ್ ದಾಳಿ ನಡೆದಿತ್ತು. 2022ರ ನ.13ರ ಸ್ಫೋಟ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಅನಾಡೋಲು ವರದಿ ಮಾಡಿದೆ.

English summary
Taksim, a district in the heart of Istanbul, an explosion rocked a popular pedestrian thoroughfare and injured multiple people. President Erdogan condemned Istanbul blast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X