ಇಸ್ರೇಲ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಪಾಕಿಸ್ತಾನಕ್ಕೆ ಶುರುವಾಯ್ತು ಭಯ | PM Narendra Modi
ಕಳ್ಳನ ಮನಸ್ಸು ಹುಳ್ಳಗೆ ಅನ್ನೋ ಗಾದೆ ಮಾತಿನಂತೆ, ಉಗ್ರರ ಪೋಷಕ ದೇಶವಾಗಿರುವ ಪಾಕಿಸ್ತಾನ ಈ ಜನ್ಮದಲ್ಲಿ ಬುದ್ಧಿ ಕಲಿಯುವುದಿಲ್ಲ ಅಂತಾ ಕಾಣುತ್ತದೆ. ಏಕೆಂದರೆ ಭಾರತ ಮತ್ತು ಇಸ್ರೇಲ್ ನಡುವೆ ಈಗ ಮಹತ್ವದ ಮಾತುಕತೆ ಆರಂಭ ಆಗಿದ್ದು, ಎರಡೂ ದೇಶಗಳು ದೊಡ್ಡ ಮಟ್ಟದಲ್ಲಿ ಒಪ್ಪಂದಕ್ಕೆ ಸಜ್ಜಾಗಿವೆ. ಇದೇ ಸಮಯದಲ್ಲಿ ಇಸ್ರೇಲ್ ಸರ್ಕಾರ ಕೂಡ ಪ್ರಧಾನಿ ಮೋದಿ ಅವರನ್ನು ಭರ್ಜರಿಯಾಗಿ ವೆಲ್‌ಕಂ ಮಾಡಿಕೊಂಡಿದೆ. ಮತ್ತೊಂದು ಕಡೆ, ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಇದೇ ಇಸ್ರೇಲ್ ದೇಶದ ಪರವಾಗಿ ಭಾರತ ನಿಂತಿದೆ. ಇಷ್ಟೆಲ್ಲದರ ನಡುವೆ ಇಸ್ರೇಲ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಪಾಕಿಸ್ತಾನಕ್ಕೆ ಶುರುವಾಗಿದೆ ಭಯ.
ಪ್ರಧಾನಿ ಮೋದಿ ಅವರು & ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಡುವೆ ಅತ್ಯುತ್ತಮ ಸ್ನೇಹ ಇದೆ. ಹಲವು ಬಾರಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೇ ಇದನ್ನು ಪ್ರಸ್ತಾಪ ಕೂಡ ಮಾಡಿದ್ದಾರೆ. 2017 ಸಮಯದಲ್ಲಿ ಮೊದಲ ಬಾರಿಗೆ ಇಸ್ರೇಲ್ ದೇಶಕ್ಕೆ ಪ್ರಧಾನಿ ಮೋದಿ ಅವರು ಭೇಟಿ ನೀಡಿದ್ದರು. ಆ ನಂತರ ಮತ್ತೆ ಸುಮಾರು 9 ವರ್ಷಗಳ ಬಳಿಕ ಪ್ರಧಾನಿ ಮೋದಿ ಅವರು ಇಸ್ರೇಲ್ ಭೇಟಿ ಕೈಗೊಂಡಿದ್ದಾರೆ.

ಪಾಕಿಸ್ತಾನ ಸರ್ಕಾರಕ್ಕೆ ನಿದ್ದೆ ಇಲ್ಲ!
ಆದರೆ ಇದೇ ಸಮಯದಲ್ಲಿ ಪಾಕಿಸ್ತಾನಕ್ಕೆ ದೊಡ್ಡ ಮಟ್ಟದಲ್ಲಿ ಭಯ ಶುರುವಾಗಿದೆ. ಭಾರತ ಮತ್ತು ಇಸ್ರೇಲ್ ಈಗ ಒಗ್ಗಟ್ಟಿನಿಂದ ಉಗ್ರರ ವಿರುದ್ಧ ಹೋರಾಡಲು ಮುಂದಾಗಿರುವುದು ಪಾಕಿಸ್ತಾನ ಸೇನೆ & ಪಾಕ್ ಸರ್ಕಾರದ ನಿದ್ದೆ ಹಾರಿ ಹೋಗುವಂತೆ ಮಾಡಿದೆ. ಭಾರತ ಮತ್ತು ಇಸ್ರೇಲ್ ನಡುವೆ ಇರುವ ಈ ಗಟ್ಟಿಯಾದ ಸ್ನೇಹ ನೋಡಿ ಪಾಕಿಸ್ತಾನ ಹೊಸ ಕುತಂತ್ರ ಮಾಡುತ್ತಿದ್ದು, ಇದೀಗ ಪಾಕಿಸ್ತಾನ ಸರ್ಕಾರ ಬೆಚ್ಚಿಬಿದ್ದಿದೆ.












Click it and Unblock the Notifications