ಭಾರತ ಮತ್ತು ಇಸ್ರೇಲ್ ನಡುವೆ ಮಹತ್ವದ ಒಪ್ಪಂದ, ಭರ್ಜರಿ ಲಾಭದ ನಿರೀಕ್ಷೆ | PM Narendra Modi
ಭಾರತ ಮತ್ತು ಇಸ್ರೇಲ್ ನಡುವೆ ಸುಮಾರು ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಸ್ನೇಹ ಇದ್ದು, ಎರಡೂ ದೇಶಗಳು ಒಬ್ಬರಿಗೆ ಮತ್ತೊಬ್ಬರು ಬೆಂಬಲ ನೀಡುತ್ತಾ ಬೆಳೆದು ಬಂದಿವೆ. ಜಾಗತಿಕವಾಗಿ ಈ ಎರಡೂ ದೇಶಗಳ ಸ್ನೇಹ ಕಂಡು ಹಲವರ ಕಣ್ಣು ಕೂಡ ಕೆಂಪಾಗಿದೆ, ಇಷ್ಟೆಲ್ಲದರ ನಡುವೆಯೂ ಅತ್ತ ಇಸ್ರೇಲ್ ಮತ್ತು ಇತ್ತ ಭಾರತ ಈ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸುತ್ತಿವೆ. ಇದೀಗ ಖುದ್ದು ಪ್ರಧಾನಿ ಮೋದಿ ಅವರು ಸುಮಾರು 9 ವರ್ಷಗಳ ನಂತರ ಇಸ್ರೇಲ್ ಭೇಟಿ ಕೈಗೊಂಡಿದ್ದು, ಹಲವು ಪ್ರಮುಖ ಒಪ್ಪಂದಗಳಿಗೆ ಸಹಿ ಬೀಳಲಿದೆ. ಆ ಮೂಲಕ ಭಾರತ ಮತ್ತು ಇಸ್ರೇಲ್ ಎರಡೂ ಕಡೆ ಭರ್ಜರಿ ಲಾಭ ಆಗುವ ನಿರೀಕ್ಷೆ ಮೂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್ ಭೇಟಿ ಜಾಗತಿಕ ಮಟ್ಟದಲ್ಲಿ ದೊಡ್ಡ ಬೆಳವಣಿಗೆ ಆಗಿದೆ. ಅಂದಹಾಗೆ ಭಾರತ ಮತ್ತು ಇಸ್ರೇಲ್ ಎರಡೂ ತಂತ್ರಜ್ಞಾನ ವಿಚಾರದಲ್ಲಿ ಸಾಕಷ್ಟು ಮುಂದುವರಿದ, ಇನ್ನೂ ಹೆಚ್ಚಿನ ಸಂಶೋಧನೆ ನಡೆಸುತ್ತಿರುವ ದೇಶಗಳಾಗಿವೆ. ಈ ಕಾರಣಕ್ಕೆ ವಿಜ್ಞಾನ, ತಂತ್ರಜ್ಞಾನ, ಕೃಷಿ, ರಕ್ಷಣಾ & ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ ಮತ್ತು ಇಸ್ರೇಲ್ ನಡುವಿನ ಸಹಕಾರ ನಿರಂತರವಾಗಿ ವಿಸ್ತರಿಸುತ್ತಾ ಬಂದಿವೆ. ಇದೀಗ ಮತ್ತೆ ಅದನ್ನು ಇನ್ನಷ್ಟು ಗಟ್ಟಿಗೊಳಿಸುವ ಬಗ್ಗೆ ಹಲವು ಚರ್ಚೆ ಹಾಗೂ ಒಪ್ಪಂದಗಳಿಗೆ ಪ್ರಧಾನಿ ಮೋದಿ ಅವರು ಅಂಕಿತ ಹಾಕುವ ನಿರೀಕ್ಷೆ ಇದೆ. ಈಗಾಗಲೇ ದ್ವಿಪಕ್ಷೀಯ ಮಾತುಕತೆ ನಡೆದಿದ್ದು, ಎರಡೂ ದೇಶಗಳು ಪರಸ್ಪರ ಅಭಿವೃದ್ಧಿಗೆ ಸಹಾಯ ಹಸ್ತವನ್ನ ಚಾಚಲಿದ್ದಾರೆ.

ಮಧ್ಯಪ್ರಾಚ್ಯ ಪರಿಸ್ಥಿತಿ ಅತ್ಯಂತ ಸೂಕ್ಷ್ಮ
ಪ್ರಧಾನಿ ಮೋದಿ ಅವರು ಈಗ ಇಸ್ರೇಲ್ ದೇಶಕ್ಕೆ ಭೇಟಿ ನೀಡಿರುವ ಹಿನ್ನೆಲೆ ಮಧ್ಯಪ್ರಾಚ್ಯದಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಒಂದು ಕಡೆ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಸೇನಾ ಕಾರ್ಯಾಚರಣೆ ನಡೆಯುತ್ತಿದ್ದು, ಇನ್ನೊಂದು ಕಡೆ ಲೆಬನಾನ್ ಹಾಗೂ ಸಿರಿಯಾ ವಿಚಾರ ಕೂಡ ಚರ್ಚೆಗೆ ಬರುತ್ತಿದೆ. ಇಷ್ಟೆಲ್ಲದರ ಮಧ್ಯೆ ಇರಾನ್ ವಿರುದ್ಧ ಯಾವುದೇ ಕ್ಷಣದಲ್ಲಿ ಅಮೆರಿಕ ಹಾಗೂ ಇಸ್ರೇಲ್ ಸೇನಾ ಕಾರ್ಯಾಚರಣೆ ನಡೆಸುವ ಸಾಧ್ಯತೆ ದಟ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ದಿಟ್ಟ ನಿಲುವು ತೆಗೆದುಕೊಂಡಿದ್ದು, ಜಗತ್ತಿನ ಎಲ್ಲಾ ದೇಶಗಳ ಜೊತೆಗೂ ಸ್ನೇಹ ಮುಂದುವರಿಸಿದೆ. ಇದರ ಭಾಗವಾಗಿ, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ಗೆ ಭೇಟಿ ನೀಡಿರುವುದು ಗಮನ ಸೆಳೆದಿದೆ.












Click it and Unblock the Notifications