ಪ್ರಧಾನಿ ಮೋದಿಯನ್ನು ಸ್ವಾಗತಿಸಲಿರುವ ಬ್ರೂನಿ ಸುಲ್ತಾನ: 7000 ಕಾರುಗಳು, ಚಿನ್ನದ ಅರಮನೆ ಒಡೆಯನ ಆಸ್ತಿ ಎಷ್ಟು?
ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಕೈಗೊಂಡಿದ್ದು, ಇಂದು ಬ್ರೂನಿಗೆ ತೆರಳಲಿದ್ದಾರೆ. ಆಗ್ನೇಯ ಏಷ್ಯಾದ ದೇಶವೊಂದಕ್ಕೆ ಭೇಟಿ ನೀಡುತ್ತಿರುವ ಭಾರತದ ಮೊಲದ ಪ್ರಧಾನ ಮಂತ್ರಿ ಎನ್ನುವ ಹೆಗ್ಗಳಿಕೆ ನರೇಂದ್ರ ಮೋದಿಯವರದ್ದಾಗಿದೆ. ಇದು ಎರಡು ದಿನಗಳ ಭೇಟಿಯಾಗಿದ್ದು, ಭಾರತ- ಬ್ರೂನಿ ನಡುವೆ ಬಾಂಧವ್ಯ ಬಲಪಡಿಸುವ ಗುರಿಯನ್ನು ಹೊಂದಲಾಗಿದೆ. ಪ್ರಧಾನಿ ಮೋದಿಯನ್ನು ಬ್ರೂನಿಯ ಸುಲ್ತಾನ ಸ್ವಾಗತಿಸಲು ಸಜ್ಜಾಗಿದ್ದಾರೆ.
ಬ್ರಿಟನ್ ರಾಣಿ ಎಲಿಜಬೆತ್ II ಬಳಿಕ ವಿಶ್ವದ ಎರಡನೇ ಅತಿ ಧೀರ್ಘಾವಧಿಯವರೆಗೆ ಬ್ರೂನಿ ದೇಶದ ದೊರೆಯಾಗಿರುವ ಸುಲ್ತಾನ್ ಹಸನಲ್ ಬೊಲ್ಕಿಯಾ, ಪ್ರಧಾನಿ ಮೋದಿಗೆ ಆಹ್ವಾನ ನೀಡಿದ ಹಿನಲ್ಲೆಯಲ್ಲಿ ಮೋದಿ ಪ್ರವಾಸ ಕೈಗೊಂಡಿದ್ದಾರೆ.

ಬ್ರೂನಿ ದೊರೆಯ ಐಷಾರಾಮಿ ಜೀವನ
ಬ್ರೂನಿ ದೊರೆ ಹಸನಲ್ ಬೊಲ್ಕಿಯಾ ತಮ್ಮ ಐಷಾರಾಮಿ ಜೀವನದ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ತಮ್ಮ ಶ್ರೀಮಂತಿಕೆ ಅತಿರಂಜಿತ ಜೀವನ ಶೈಲಿಗೆ ಹೆಸರಾಗಿದ್ದಾರೆ. ಹಸನಲ್ ಬಳಿ ಇರುವ ಕಾರುಗಳ ಒಟ್ಟಾರೆ ಮೌಲವ್ಯವೇ $5 ಬಿಲಿಯನ್ ಎಂದು ಅಂದಾಜಿಸಲಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಖಾಸಗಿ ಕಾರುಗಳನ್ನು ಹೊಂದಿರುವ ವ್ಯಕ್ತಿ ಹಸನಲ್ ಬೊಲ್ಕಿಯಾ.
ಹಸನಲ್ ಬೊಲ್ಕಿಯಾ ನಿವ್ವಳ ಮೌಲ್ಯ $30 ಬಿಲಿಯನ್ ಎಂದು ಅಂದಾಜಿಸಲಾಗಿದೆ. ತೈಲ ಮತ್ತು ಅನಿಲ ನಿಕ್ಷೇಪಗಳು ಅವರ ಪ್ರಮುಖ ಆದಾಯದ ಮೂಲಗಳಾಗಿವೆ. ಬ್ರೂನಿ ದೊರೆ ಬಳಿ 7000 ಐಷಾರಾಮಿ ಕಾರುಗಳಿವೆ, ಇದರಲ್ಲಿ 600 ರೋಲ್ಸ್ ರಾಯ್ಸ್ ಕಾರುಗಳಿದ್ದು, ಅತಿ ಹೆಚ್ಚು ರೋಲ್ಸ್ ರಾಯ್ಸ್ ಕಾರು ಹೊಂದಿರುವ ಗಿನ್ನೆಸ್ ದಾಖಲೆ ಕೂಡ ಅವರ ಹೆಸರಿನಲ್ಲಿದೆ.
ವರದಿಗಳ ಪ್ರಕಾರ, ಅವರ ಬಳಿ ಸುಮಾರು 450 ಫೆರಾರಿ ಕಾರುಗಳಲ್ಲಿ 380 ಬೆಂಟ್ಲೆ ಕಾರುಗಳಿವೆ. ಕಾರ್ಬಜ್ ಮತ್ತು ದಿ ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಸೇರಿದಂತೆ ಆಟೋಮೋಟಿವ್ ಮೂಲಗಳ ಪ್ರಕಾರ ಅವರು ಪೋರ್ಷೆ, ಲಂಬೋರ್ಘಿನಿಸ್, ಮೇಬ್ಯಾಕ್ಸ್, ಜಾಗ್ವಾರ್, ಬಿಎಂಡಬ್ಲ್ಯುಗಳು ಮತ್ತು ಮೆಕ್ಲಾರೆನ್ ನಂತಹ ಐಷಾರಾಮಿ ಕಾರುಗಳನ್ನು ಕೂಡ ಹೊಂದಿದ್ದಾರೆ.












Click it and Unblock the Notifications