India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ, ಜಿನ್‌ಪಿಂಗ್‌ ಜವಾಬ್ದಾರಿಯುತ ನಾಯಕರು ಚೀನಾ-ಭಾರತ ಸಮಸ್ಯೆ ಪರಿಹರಿಸಬಹುದು: ರಷ್ಯಾ ಅಧ್ಯಕ್ಷ

|
Google Oneindia Kannada News

ಮಾಸ್ಕೋ, ಜೂ. 05: ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇಬ್ಬರೂ "ಜವಾಬ್ದಾರಿಯುತ" ನಾಯಕರು ಎಂದು ಪ್ರತಿಪಾದಿಸಿರುವ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಉಭಯ ದೇಶಗಳ ನಡುವಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಈ ಇಬ್ಬರು ನಾಯಕರು ಸಮರ್ಥರಾಗಿದ್ದಾರೆ ಎಂದು ಹೇಳಿದ್ದಾರೆ.

ಭಾರತ, ಯುಎಸ್, ಜಪಾನ್ ಮತ್ತು ಆಸ್ಟ್ರೇಲಿಯಾ ನಾಲ್ಕು ರಾಷ್ಟ್ರಗಳ ಕ್ವಾಡ್ ಅನ್ನು ರಷ್ಯಾ ಸಾರ್ವಜನಿಕವಾಗಿ ಟೀಕಿಸುವುದರ ಬಗ್ಗೆ ಪಿಟಿಐಗೆ ಪ್ರತಿಕ್ರಿಯಿಸಿದ ರಷ್ಯಾ ಅಧ್ಯಕ್ಷ ಪುಟಿನ್‌, ಯಾವುದೇ ರಾಷ್ಟ್ರವು ಹೇಗೆ ಭಾಗವಹಿಸಬೇಕು ಹಾಗೂ ಎಷ್ಟರ ಮಟ್ಟಿಗೆ ಭಾಗವಹಿಸಬೇಕು ಎಂಬುದನ್ನು ನಿರ್ಣಯಿಸುವುದು ಮಾಸ್ಕೋಗೆ ಬಿಟ್ಟ ವಿಚಾರವಲ್ಲ. ಎಲ್ಲಾ ದೇಶಗಳು ಇತರ ದೇಶಗಳೊಂದಿಗೆ ತಮ್ಮ ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಆದರೆ ಯಾವುದೇ ಸಹಭಾಗಿತ್ವವು ಬೇರೆ ಯಾರ ವಿರುದ್ದವೂ ಗುರಿಯಾಗಿಸಿಕೊಂಡು ಮಾಡಿರಬಾರದು ಎಂದು ಹೇಳಿದ್ದಾರೆ.

ವೈರಿಗಳ ಸಮ್ಮಿಲನಕ್ಕೆ ಮುಹೂರ್ತ ಫಿಕ್ಸ್, ಅಮೆರಿಕ-ರಷ್ಯಾ ಮಾತುಕತೆಗೆ ಸಿದ್ಧತೆ! ವೈರಿಗಳ ಸಮ್ಮಿಲನಕ್ಕೆ ಮುಹೂರ್ತ ಫಿಕ್ಸ್, ಅಮೆರಿಕ-ರಷ್ಯಾ ಮಾತುಕತೆಗೆ ಸಿದ್ಧತೆ!

ಭಾರತದೊಂದಿಗೆ ರಷ್ಯಾದ ಪಾಲುದಾರಿಕೆ ಮತ್ತು ಮಾಸ್ಕೋ ಮತ್ತು ಬೀಜಿಂಗ್ ನಡುವಿನ ಸಂಬಂಧಗಳಲ್ಲಿ ಯಾವುದೇ "ವಿರೋಧಾಭಾಸಗಳು" ಇಲ್ಲ ಎಂದು ಕೂಡಾ ಈ ಸಂದರ್ಭದಲ್ಲೇ ತಿಳಿಸಿದ್ದಾರೆ.

"ಹೌದು, ಭಾರತ ಚೀನಾ ಸಂಬಂಧಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳಿವೆ ಎಂದು ನನಗೆ ತಿಳಿದಿದೆ. ನೆರೆಯ ರಾಷ್ಟ್ರಗಳ ನಡುವೆ ಯಾವಾಗಲೂ ಬಹಳಷ್ಟು ಸಮಸ್ಯೆಗಳಿರುತ್ತದೆ. ಆದರೆ ನನಗೆ ಭಾರತದ ಪ್ರಧಾನಿ ಮತ್ತು ಚೀನಾ ಅಧ್ಯಕ್ಷರ ಮನೋಭಾವ ನನಗೆ ತಿಳಿದಿದೆ ಎಂದಿದ್ದಾರೆ.

ಇವರಿಬ್ಬರೂ ಬಹಳ ಜವಾಬ್ದಾರಿಯುತ ನಾಯಕರು. ಒಬ್ಬರಿಗೊಬ್ಬರು ಅತ್ಯಂತ ಗೌರವದಿಂದ ವರ್ತಿಸುತ್ತಾರೆ. ಇಬ್ಬರೂ ನಾಯಕರು ಕೂಡಾ ಎದುರಿಸಬಹುದಾದ ಯಾವುದೇ ಸಮಸ್ಯೆಗೆ ಯಾವಾಗಲೂ ಪರಿಹಾರವನ್ನು ಕಂಡುಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಯೋಧರ ಮುಖಾಮುಖಿ ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಯೋಧರ ಮುಖಾಮುಖಿ

ಇನ್ನು ಈ ವೇಳೆಯೇ "ಆದರೆ ಬೇರೆ ಯಾವುದೇ ಪ್ರಾದೇಶಿಕ ಶಕ್ತಿಗಳು ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡದಿರುವುದು ಬಹಳ ಮುಖ್ಯ" ಎಂದು ಕೂಡಾ ಹೇಳಿದ್ದಾರೆ.

PM Modi, Xi Jinping responsible leaders, can solve China-India issues says Russian President

2020 ರ ಮೇ 5 ರಂದು ಪೂರ್ವ ಲಡಾಖ್‌ನಲ್ಲಿ ಚೀನಾ ಮತ್ತು ಭಾರತದ ನಡುವೆ ಮಿಲಿಟರಿ ಸಂಘರ್ಷ ಸ್ಫೋಟಗೊಂಡಿದ್ದು ಒಂದು ವರ್ಷಕ್ಕೂ ಹೆಚ್ಚು ಕಾಲವಾಗಿದೆ. 45 ವರ್ಷಗಳಲ್ಲಿ ಮೊದಲ ಬಾರಿಗೆ ಎರಡೂ ಕಡೆಗಳಲ್ಲಿ ಸಾವುನೋವುಗಳು ಸಂಭವಿಸಿವೆ. ಬಳಿಕ ಹಲವಾರು ಬಾರಿ ಉಭಯ ರಾಷ್ಟ್ರದ ನಾಯಕರು ಮಾತುಕತೆ ನಡೆಸಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
PM Modi, Xi Jinping responsible leaders, can solve China-India issues says Russian President Vladimir Putin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X