ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಯಲ್ಲೇ ತಯಾರಿಸಿದ ಮಾಸ್ಕ್ ಬಳಸಿ ಆದರೆ ಬಹು ಪದರಗಳಿರಲಿ

|
Google Oneindia Kannada News

ಬ್ಲೂಮ್‌ಬರ್ಗ್, ಜುಲೈ 24: ಮೆಡಿಕಲ್ ಶಾಪ್‌ಗಳಲ್ಲಿ ಸಿಗುವ ಮಾಸ್ಕ್‌ಗಳಿಗಿಂತ ಮನೆಯಲ್ಲೇ ತಯಾರಿಸಿದ ಬಹು ಪದರಗಳುಳ್ಳ ಮಾಸ್ಕ್ ಸೇಫ್ ಎಂದು ಅಧ್ಯಯನ ಒಂದು ಹೇಳಿದೆ.

Recommended Video

China launches Mars probe during Pandemic | Oneindia Kannada

ಕೊರೊನಾ ಸೋಂಕು ಆರಂಭದ ಸಂದರ್ಭದಲ್ಲಿ ಮನೆಯಲ್ಲೇ ಮಾಡಿದ ಮಾಸ್ಕ್ ಧರಿಸಿ ಎಂದು ಎಲ್ಲಡೆ ಹೇಳಲಾಗುತ್ತಿತ್ತು. ಆದರೆ ಅದು ಹೇಗಿರಬೇಕು ಎಂದು ಯಾರಿಗೂ ತಿಳಿದಿರಲಿಲ್ಲ.

ಅಂಚೆ ಕಚೇರಿಯಲ್ಲೇ ಸ್ಯಾನಿಟೈಸರ್, ಮಾಸ್ಕ್ ಮಾರಾಟಅಂಚೆ ಕಚೇರಿಯಲ್ಲೇ ಸ್ಯಾನಿಟೈಸರ್, ಮಾಸ್ಕ್ ಮಾರಾಟ

ಇದೀಗ ಅಧ್ಯಯನವೊಂದು ಹೇಳಿದ್ದು, ಮನೆಯಲ್ಲೇ ಮಾಡಿದ ಮಾಸ್ಕ್ ಧರಿಸಿ ಆದರೆ ಅದರಲ್ಲು ಬಹು ಪದರಗಳಿರಲಿ, ಒಂದೊಮ್ಮೆ ಕೆಮ್ಮಿದಾಗ ಅಥವಾ ಸೀನಿದಾಗ ಬಾಯಿಯಿಂದ ಎಂಜಲು ಬಂದು ಮಾಸ್ಕ್ ಒದ್ದೆಯಾಗುವುದಾಗಲಿ ಆಗಬಾರದು ಎಂದು ಹೇಳಲಾಗಿದೆ. ಕೊರೊನಾ ಸೋಂಕು ಕಡಿಮೆ ಮಾಡಲು ಬಹು ಪದರವಿರುವ ತೊಳೆದು ಮತ್ತೆ ಉಪಯೋಗಿಸಿಬಲ್ಲ ಮಾಸ್ಕ್ ಬಳಸಬೇಕು.

ಆಸ್ಟ್ರೇಲಿಯಾದ ತಜ್ಞರು ಹೇಳಿದ್ದೇನು?

ಆಸ್ಟ್ರೇಲಿಯಾದ ತಜ್ಞರು ಹೇಳಿದ್ದೇನು?

ಆಸ್ಟ್ರೇಲಿಯಾದ ತಜ್ಞರು ಒಂದು ಪದರವಿರುವ ಸರ್ಜಿಕಲ್ ಮಾಸ್ಕ್ ಹಾಗೂ ಎರಡು ಅಥವಾ ಬಹು ಪದರವಿರುವ ಬಟ್ಟೆಯ ಹೊದಿಕೆಗಳ ಪರಿಣಾಮಕಾರಿತ್ವವನ್ನು ಹೋಲಿಕೆ ಮಾಡಿದ್ದಾರೆ.ಅದಕ್ಕೆ ಎಲ್‌ಇಡಿ ಲೈಟಿಂಗ್ ಸಿಸ್ಟಂ ಮತ್ತು ಹೈಸ್ಪೀಡ್ ವಿಡಿಯೋ ಕ್ಯಾಮರಾ ಬಳಸಿ ಹನಿಗಳ ಹರಡುವಿಕೆ ಪ್ರಮಾಣವನ್ನು ಅರಿತುಕೊಂಡಿದ್ದಾರೆ. ಅದರಲ್ಲಿ ಎರಡ ಪದರವಿರುವ ಮಾಸ್ಕ್ ಉತ್ತಮ ಎಂದು ತಿಳಿದುಬಂದಿದೆ.

ಎರಡು ಪದರವಿರುವ ಮಾಸ್ಕ್ ಏಕೆ ಉತ್ತಮ?

ಎರಡು ಪದರವಿರುವ ಮಾಸ್ಕ್ ಏಕೆ ಉತ್ತಮ?

ಎರಡು ಪದರವಿರುವ ಮಾಸ್ಕ್‌ನಲ್ಲಿ ಕೆಮ್ಮಿದಾಗ, ಸೀನಿದಾಗ ಬಾಯಿಂದ ಬರುವ ಎಂಜಿಲನ್ನು ಎರಡು ಪದರವಿರುವ ಮನೆಯಲ್ಲೇ ತಯಾರಿಸಿದ ಮಾಸ್ಕ್‌ನಿಂದ ಬೇರೆಡೆ ಹರಡುವುದಿಲ್ಲ ಎಂದೂ ಹಾಗೆಯೇ ಸರ್ಜಿಕಲ್ ಮಾಸ್ಕ್‌ನಲ್ಲಿ ಹನಿಗಳು ಹರಡುತ್ತವೆ ಎಂದೂ ತಿಳಿದುಬಂದಿದೆ. ಹಾಗೆಯೇ ಮೂರು ಪದರಗಳುಳ್ಳ ಸರ್ಜಿಕಲ್ ಮಾಸ್ಕ್ ಉತ್ತಮವಾಗಿದೆ.

ಮಾಸ್ಕ್ ಧರಿಸುವುದರಿಂದ ಆಗುವ ಪ್ರಯೋಜನ

ಮಾಸ್ಕ್ ಧರಿಸುವುದರಿಂದ ಆಗುವ ಪ್ರಯೋಜನ

ಮಾಸ್ಕ್ ಧರಿಸುವುದರಿಂದ ಧೂಳಿನಿಂದ ರಕ್ಷಣೆ ಪಡೆಯಬಹುದು, ಬೇರೆ ಬೇರೆ ರೀತಿಯ ಅಲರ್ಜಿಯಾಗುವುದನ್ನು ತಡೆಗಟ್ಟಬಹುದು, ಕೊರೊನಾ ವೈರಸ್‌ನಂತಹ ಹಲವು ವೈರಸ್‌ಗಳಿಂದ ಅಂತರ ಕಾಪಾಡಿಕೊಳ್ಳಬಹುದು. ಹಾಗೆಯೇ ನಮಗೆ ಯಾವುದಾದರೂ ಆರೋಗ್ಯ ಸಮಸ್ಯೆಗಳಿದ್ದರೆ ಅದು ಬೇರೆಯವರಿಗೆ ಹರಡುವುದನ್ನು ಕೂಡ ತಡೆಗಟ್ಟಬಹುದಾಗಿದೆ.

ವಿಶ್ವದಾದ್ಯಂತ ಮಾಸ್ಕ್ ಕೊರತೆ

ವಿಶ್ವದಾದ್ಯಂತ ಮಾಸ್ಕ್ ಕೊರತೆ

ಕೊರೊನಾ ಸೋಂಕು ಹರಡಲು ಆರಂಭಿಸಿದಾಗಿನಿಂದ ಮಾಸ್ಕ್‌ಗಳ ಕೊರತೆ ಉಂಟಾಗಿದೆ. ಹೀಗಾಗಿ ಕೆಲವು ಕಂಪನಿಗಳು ನಕಲಿ ಮಾಸ್ಕ್‌ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಆ ಮಾಸ್ಕ್‌ಗಳಿಗೆ ಬೆಲೆಯೂ ಹೆಚ್ಚಿರುತ್ತದೆ ಅದರಿಂದ ಯಾವುದೇ ಪ್ರಯೋಜನವೂ ಇಲ್ಲ. ಹೀಗಾಗಿ ಮನೆಯಲ್ಲೇ ತಯಾರಿಸಿದ ಬಹು ಪದರಗಳುಳ್ಳ ಮಾಸ್ಕ್ ಬಳಸಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

English summary
Homemade face masks should ideally be made from multiple layers of fabric to trap the viral-laden droplets from the nose and mouth associated with the spread of Covid-19, a study found.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X