ಕಜಕಿಸ್ತಾನದಲ್ಲಿ 100ಕ್ಕೂ ಹೆಚ್ಚು ಜನ ಇದ್ದ ವಿಮಾನ ಪತನ
ಅಕ್ಟೌ ಡಿಸೆಂಬರ್ 25: 100ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಕಜಕಿಸ್ತಾನದಲ್ಲಿ ಅಕ್ಟೌ ನಗರದ ಬಳಿ ಪತನಗೊಂಡಿದೆ. ಇದರಲ್ಲಿ ಆರು ಪ್ರಯಾಣಿಕರು ಬದುಕುಳಿದಿದ್ದಾರೆನ್ನುವ ಮಾಹಿತಿ ಸಿಕ್ಕಿದೆ. ಆದರೆ ವಿಮಾನದಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎಂದು ಹೇಳಲಾಗುತ್ತಿದೆ.
ಹೌದು.. ಇಂದು ಬೆಳಗ್ಗೆ ಅಜರ್‌ಬೈಜಾನ್ ಏರ್‌ಲೈನ್ಸ್ ವಿಮಾನ ಅಕ್ಟೌ ವಿಮಾನ ನಿಲ್ದಾಣದ ಬಳಿ ಪತನಗೊಂಡಿದೆ ಎಂದು ವರದಿಯಾಗಿದೆ. ಅಜರ್‌ಬೈಜಾನ್ ಏರ್‌ಲೈನ್ಸ್ ಫ್ಲೈಟ್ 8243ನಲ್ಲಿ 105 ಪ್ರಯಾಣಿಕರು ಮತ್ತು ಐದು ಸಿಬ್ಬಂದಿಗಳು ಪ್ರಯಾಣ ಮಾಡುತ್ತಿದ್ದರು.

ಈ ವಿಮಾನ ಬಾಕುದಿಂದ ರಷ್ಯಾದ ಚೆಚೆನ್ಯಾದ ಗ್ರೋಜ್ನಿಗೆ ಹೋಗುತ್ತಿತ್ತು. ಆದರೆ ಗ್ರೋಜ್ನಿಯಲ್ಲಿ ಮಂಜಿನಿಂದಾಗಿ ಅದರ ಮಾರ್ಗವನ್ನು ಬದಲಾಯಿಸಲಾಯಿತು ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ತಿಳಿಸಿವೆ. ಅಧಿಕ ಮಂಜಿನಿಂದಾಗಿ ವಿಮಾನ ಲ್ಯಾಂಡ್ ಆಗಲು ಸಾಧ್ಯವಾಗಿಲ್ಲ. ಆಕಾಶದಲ್ಲಿ ಎರಡು ಮೂರು ಬಾರಿ ಸುತ್ತಿ ಲ್ಯಾಂಡ್ ಆಗುವಾಗ ಪತನಗೊಂಡಿದೆ.
ವಿಮಾನ ಅಪಘಾತದಲ್ಲಿ ಆರು ಪ್ರಯಾಣಿಕರು ಬದುಕುಳಿದಿದ್ದಾರೆ ಎಂದು ಕಝಾಕಿಸ್ತಾನ್ ಅಧಿಕಾರಿಗಳು ತಿಳಿಸಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ವಿಮಾನ ನೆಲಕ್ಕೆ ಬಿದ್ದು ಬೆಂಕಿ ಹೊತ್ತುಕೊಂಡಿರುವ ದೃಶ್ಯಗಳು ಕಂಡು ಬಂದಿವೆ. ವಿಮಾನ ಪತನವಾಗಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. ಅಪಘಾತದ ಬಗ್ಗೆ ಅಜೆರ್‌ಬೈಜಾನ್ ಏರ್‌ಲೈನ್ಸ್‌ನಿಂದ ತಕ್ಷಣದ ಪ್ರತಿಕ್ರಿಯೆ ಇಲ್ಲ.












Click it and Unblock the Notifications