ಕೊರೊನಾ ಲಸಿಕೆ ಅಥವಾ ಜೈಲು ಆಯ್ಕೆ ನಿಮ್ಮದು
ಕೊರೊನಾ ಲಸಿಕೆ ಹಾಕಿಸಿಕೊಳ್ಳದಿದ್ದರೆ ಜೈಲಿಗೆ ಕಳುಹಿಸಲಾಗುವುದು ಎಂದು ಫಿಲಿಪೈನ್ಸ್ ಅಧ್ಯಕ್ಷ ರೊಡ್ರಿಗೊ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ಲಸಿಕೆ ನಿಯಂತ್ರಣವೇ ಪ್ರತಿ ದೇಶದಲ್ಲೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೊರೊನಾ ವಿರುದ್ಧ ಹೋರಾಡಲು ಇದೀಗ ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದೇ ಒಂದು ಅಸ್ತ್ರವಾಗಿದೆ.
ವಿಶ್ವದಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಭಾರತ ಲಸಿಕೆ ವಿಷಯದಲ್ಲಿ ನಿನ್ನೆ ದಾಖಲೆ ಬರೆದಿದೆ. ಆದರೆ ಇನ್ನೂ ಅನೇಕರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಜನರಿಗೆ ರೆಡ್ರಿಗೋ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಫಿಲಿಪೈನ್ಸ್‌ನಲ್ಲಿ ಕೊರೊನಾ ವೈರಸ್‌ಗೆ ಇದುವರೆಗೆ 1.3 ದಶಲಕ್ಷಕ್ಕೂ ಅಧಿಕ ಮಂದಿ ಸೋಂಕಿಗೆ ತುತ್ತಾಗಿದ್ದಾರೆ, 23 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
''ಲಸಿಕೆ ಹಾಕಿಸಿಕೊಳ್ಳದೆ ಕೊರೊನಾವೈರಸ್ ಹರಡುತ್ತಿರುವವರಿಗೆ ಕ್ಷಮೆ ಇಲ್ಲ, ನಾನು ನಿಮ್ಮನ್ನು ಜೈಲಿಗೆ ಹಾಕಬೇಕಾಗುತ್ತದೆ. ಲಸಿಕೆ ನಿರಾಕರಿಸಿದವರ ಪಟ್ಟಿಯನ್ನು ಗ್ರಾಮದ ಮುಖಂಡರು ಇಟ್ಟುಕೊಳ್ಳಬೇಕು'' ಎಂದು ಅವರು ಹೇಳಿದ್ದಾರೆ.
ಸದ್ಯ ದೇಶವು ಗಂಭೀರ ಬಿಕ್ಕಟ್ಟಿನಲ್ಲಿದೆ, ಹಾಗಾಗಿ ತನ್ನನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಮೊದಲ ಅಲೆ ಸಂಪನ್ಮೂಲದ ಮೇಲೆ ದೊಡ್ಡ ಪೆಟ್ಉ ನೀಡಿದೆ. ಇನ್ನೊಂದು ಅಲೆ ದೇಶಕ್ಕೆ ಹಾನಿಕಾರಕವಾಗಿರಲಿದೆ , ಇದಕ್ಕೆ ಲಸಿಕೆ ಮದ್ದು ಎಂದು ರೆಡ್ರಿಗೋ ತಿಳಿಸಿದ್ದಾರೆ.












Click it and Unblock the Notifications