ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಕೊರೊನಾ ಸೋಂಕು ಹೆಚ್ಚಳ: ಬೀಜಿಂಗ್‌ನಲ್ಲಿ ಮತ್ತೆ ಲಾಕ್‌ಡೌನ್

|
Google Oneindia Kannada News

ಬೀಜಿಂಗ್, ಜೂನ್ 13: ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿದ್ದು ಮತ್ತೆ ಲಾಕ್‌ಡೌನ್ ಮಾಡಲಾಗಿದೆ.

Recommended Video

6 members of a single family from Bengaluru tested corona positive | Oneindia Kannada

ಬೀಜಿಂಗ್‌ನಲ್ಲಿ ಒಟ್ಟು 11 ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. ಒಟ್ಟು ಹನ್ನೊಂದು ರೆಸಿಡೆನ್ಷಿಯಲ್ ಪ್ರದೇಶವನ್ನು ಲಾಕ್‌ಡೌನ್ ಮಾಡಲಾಗಿದೆ. ಹತ್ತಿರದಲ್ಲಿರುವ ಕ್ಸಿನ್‌ಫದಿ ಮಾಂಸದ ಮಾರಕಟ್ಟೆಯಲ್ಲಿ ಏಳು ಮಂದಿಗೆ ಸೋಂಕು ತಗುಲಿದೆ. ಹತ್ತಿರದಲ್ಲಿರುವ 9 ಕ್ಕೂ ಹೆಚ್ಚು ಶಾಲೆಗಳು, ಕಿಂಡರ್‌ಗಾರ್ಡನ್‌ಗಳನ್ನು ಮುಚ್ಚಲಾಗಿದೆ.

Parts Of Beijing Locked Down Due To Fresh Coronavirus Cluster

ಬೇರೆ ದೇಶಗಳಲ್ಲಿರುವವ ಚೀನಾದವರನ್ನು ಕರೆತರಲು ಅಂತಾರಾಷ್ಟ್ರೀಯ ವಿಮಾನಗಳು ತೆರಳುವುದಿಲ್ಲ, ಎಲ್ಲಾ ವಿಮಾನಗಳನ್ನು ಬೇರೆ ನಗರಗಳಿಗೆ ಕಳುಹಿಸಲಾಗಿದೆ. 14 ದಿನಗಳ ಕ್ವಾರಂಟೈನ್ ಬಳಿಕ ಬನ್ನಿ ಎಂದು ಹೇಳಿದೆ.

ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೀಜಿಂಗ್‌ನಲ್ಲಿ ಶಾಲೆಗಳನ್ನು ತೆರೆಯದಿರಲು ನಿರ್ಧರಿಸಲಾಗಿದೆ.

ಚೀನಾದಲ್ಲಿ ಮತ್ತೆ ಕೊರೊನಾ ಹಾವಳಿ: ಶಾಲೆಗಳನ್ನು ತೆರೆಯದಿರಲು ನಿರ್ಧಾರಚೀನಾದಲ್ಲಿ ಮತ್ತೆ ಕೊರೊನಾ ಹಾವಳಿ: ಶಾಲೆಗಳನ್ನು ತೆರೆಯದಿರಲು ನಿರ್ಧಾರ

ದೃಢಪಟ್ಟಿರುವ ಕೊರೊನಾ ಸೋಂಕಿತರು ಬೀಜಿಂಗ್‌ನ ಹೊರವಲಯದಲ್ಲಿ ಕೂಡ ಓಡಾಡಿದ್ದರು ಹೀಗಾಗಿ ಯಾರ್ಯಾರ ಜೊತೆಗೆ ಸಂಪರ್ಕ ಹೊಂದಿದ್ದಾರೆ ಎನ್ನುವ ಕುರಿತು ಮಾಹಿತಿ ಪಡೆಯಲಾಗಿದೆ.

ಶುಕ್ರವಾರ ಚೀನಾದಲ್ಲಿ ಏಳು ಪ್ರಕರಣಗಳು ಪತ್ತೆಯಾಗಿವೆ ಅದರಲ್ಲಿ ಒಬ್ಬರಿಗೆ ಸೋಂಕಿನ ಯಾವುದೇ ಲಕ್ಷಣಗಳಿರಲಿಲ್ಲ ಎಂದು ತಿಳಿದುಬಂದಿದೆ.

ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ತೆರಳಿದ್ದ ರೋಗಿಯಿಂದ ಸೋಂಕು ಹರಡಿದೆ. ಚೀನಾ ಮೀಟ್ ಫುಡ್ ರಿಸರ್ಚ್ ಸೆಂಟರ್‌ನ ಎರಡು ಸಿಬ್ಬಂದಿಗೆ ಸೋಂಕು ತಗುಲಿದೆ. 56 ದಿನಗಳ ಬಳಿಕ ಗುರುವಾರ ಬೀಜಿಂಗ್‌ನಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು.

English summary
Eleven residential estates in south Beijing have been locked down due to a fresh cluster of coronavirus cases linked to a nearby meat market, officials said on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X