ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾರಡೈಸ್ ಪೇಪರ್ಸ್ ಹಗರಣ: ಸಮಜಾಯಿಷಿ ನೀಡಿದ ಸಚಿವ ಜಯಂತ್ ಸಿನ್ಹಾ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ನವೆಂಬರ್ 6 : ಇಂಟರ್ನ್ಯಾಶ್ನಲ್ ಕಾನ್ಸರ್ಟಿಯಂ ಆಫ್ ಜರ್ನಲಿಸ್ಟ್ಸ್, "ಪ್ಯಾರಡೈಸ್ ಪೇಪರ್ಸ್" ಹೆಸರಿನಲ್ಲಿ ಬಿಡುಗಡೆ ಮಾಡಿದ ಹಲವು ದಾಖಲೆಗಳು ವಿಶ್ವದ ಹೆಸರಾಂತ ಕಂಪೆನಿಗಳ ಅವ್ಯವಹಾರವನ್ನು ಬಯಲಿಗೆಳೆದಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿಮಾಡಿದೆ.

ಪನಾಮಾ ಪೇಪರ್ಸ್ ಹಗರಣ ಅಂದರೆ ಏನು, ಎತ್ತ?ಪನಾಮಾ ಪೇಪರ್ಸ್ ಹಗರಣ ಅಂದರೆ ಏನು, ಎತ್ತ?

ಪ್ರಭಾವಿ ರಾಜಕಾರಣಿಗಳು, ಪ್ರಸಿದ್ಧ ಕಾರ್ಪೋರೇಟ್ ಕಂಪೆನಿಗಳ ಜೊತೆಗೆ ಆಪಲ್, ನೈಕೆ, ಉಬರ್ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದ ಹೆಸರಾಂತ ಕಂಪೆನಿಗಳು ತೆರಿಗೆ ಹಣ ಉಳಿಸಲು ಮಾಡಿದ ಅವ್ಯವಹಾರಗಳು ಈ ಪ್ಯಾರಡೈಸ್ ಪೇಪರ್ಸ್ ನಲ್ಲಿ ದಾಖಲಾಗಿವೆ.

Paradise Papers

ಕೇಂದ್ರ ವಿಮಾನಯಾನ ಸಚಿವ ಜಯಂತ್ ಸಿನ್ಹಾ ಹೆಸರೂ ಈ ದಾಖಲೆಗಳಲ್ಲಿ ಸೇರಿದೆ ಎಂಬ ಮಾಹಿತಿ ದೊರಕಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಾಣಿಜ್ಯ ಕಾರ್ಯದರ್ಶಿಯ ಹೆಸರೂ ಈ ಹಗರಣದಲ್ಲಿ ಕೇಳಿಬಂದಿದೆ.

ಪ್ಯಾರಡೈಸ್ ಫೇಪರ್ಸ್ ಪ್ರಕರಣದಲ್ಲಿ ತಮ್ಮ ಹೆಸರು ತಳುಕುಹಾಕಿಕೊಂಡಿರುವ ಕುರಿತು ಪ್ರತಿಕ್ರಿಯಿಸಿದ, ಕೇಂದ್ರ ಸಚಿವ ಜಯಂತ್ ಸಿನ್ಹಾ, "ನಾನು ಯಾವುದೇ ವ್ಯವಹಾರವನ್ನು ಕಾನೂನು ಬಾಹಿರವಾಗಿ ಮಾಡಿಲ್ಲ. ಎಲ್ಲಕ್ಕೂ ಸೂಕ್ತ ದಾಖಲೆಗಳಿವೆ. ಈ ಯಾವುದೇ ವ್ಯವಹಾರವನ್ನೂ ನಾನು ವೈಯಕ್ತಿಕ ಲಾಭಕ್ಕಾಗಿ ಮಾಡಿಲ್ಲ" ಎಂದು ಸಮಜಾಯಿಷಿ ನೀಡಿದ್ದಾರೆ.

13.4 ಮಿಲಿಯನ್ ದಾಖಲೆಗಳನ್ನು ಒಳಗೊಂಡಿರುವ ಪ್ಯಾರಡೈಸ್ ಪೇಪರ್ಸ್, ರಷ್ಯಾ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ವಾಣಿಜ್ಯ ಕಾರ್ಯದರ್ಶಿಯೊಬ್ಬರ ಕೋಟ್ಯಂತರ ಅವ್ಯವಹಾರ, ಕೆನಡಾ ಪ್ರಧಾನಿ ಜಸ್ಟಿನ್ ಟ್ರಡು ಅವರ ಪ್ರಮುಖ ದೇಣಿಗೆದಾರರಲ್ಲೊಬ್ಬರ ರಹಸ್ಯ ವ್ಯವಹಾರಗಳು, ಇಂಗ್ಲೆಂಡಿನ ರಾಣಿಗೆ ಸಂಬಂಧಿಸಿದ ರಹಸ್ಯ ಹಣಕಾಸು ವ್ಯವಹಾರಗಳು ಸೇರಿದಂತೆ ವಿಶ್ವದ 120 ಪ್ರಭಾವಿ ರಾಜಕಾರಣಿಗಳ ಹಗರಣಗಳು ಪ್ಯಾರಡೈಸ್ ಪೇಪರ್ ನಲ್ಲಿ ಅಡಗಿವೆ.

English summary
A host of documents called the Paradise Papers were released late Sunday night by the International Consortium of Journalists. The leaked documents, dubbed the Paradise Papers, show how deeply the offshore financial system is entangled with the overlapping worlds of political players, private wealth and corporate giants, including Apple, Nike, Uber and other global companies that avoid taxes through increasingly imaginative bookkeeping maneuvers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X