ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಗೆ ಪಿಒಕೆಯದ್ದೇ ಚಿಂತೆ, ಹೆದರಿ ಮಾಡುತ್ತಿರುವ ಸಿದ್ಧತೆಗಳೇನು ಗೊತ್ತೇ?

|
Google Oneindia Kannada News

ಶ್ರೀನಗರ, ಆಗಸ್ಟ್ 28: ಪಾಕಿಗೆ ಇದೀಗ ಪಿಒಕೆ(ಪಾಕ್‌ ಆಕ್ರಮಿತ ಕಾಶ್ಮೀರ)ರದ್ದೇ ಚಿಂತೆ ಕಾಡುತ್ತಿದೆ. ಇದೆಲ್ಲಕ್ಕೂ ಕಾರಣ ಇದೆ.

ಒಂದೆಡೆ ಕೇಂದ್ರ ಸರ್ಕಾರವು ಪರಿಚ್ಛೇದ 370 ರದ್ದುಗೊಳಿಸಿರುವುದರಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆಯಲಾಗಿತ್ತು.

370ನೇ ರದ್ದತಿ ಬಳಿಕ ಉಗ್ರರ ಮೊದಲ ದಾಳಿಗೆ ಇಬ್ಬರು ಬಲಿ370ನೇ ರದ್ದತಿ ಬಳಿಕ ಉಗ್ರರ ಮೊದಲ ದಾಳಿಗೆ ಇಬ್ಬರು ಬಲಿ

ಅದರಿಂದ ಪಾಕಿಸ್ತಾನದಿಂದ ವಿರೋಧ ವ್ಯಕ್ತವಾಗಿತ್ತು, ಈ ಕುರಿತು ಬೇರೆ ಬೇರೆ ರಾಷ್ಟ್ರಗಳ ಬೆಂಬಲವನ್ನೂ ಯಾಚಿಸಿತ್ತು. ಆದರೆ ಚೀನಾ ಬಿಟ್ಟರೆ ಇನ್ಯಾವ ರಾಷ್ಟ್ರಗಳು ಕೂಡ ಬೆಂಬಲ ಸೂಚಿಸಿರಲಿಲ್ಲ, ಇದೀಗ ಪಿಒಕೆಯೂ ನಮ್ಮ ಕೈ ತಪ್ಪಿ ಹೋದರೆ ಎನ್ನುವ ಭಯ ಪಾಕ್‌ಗೆ ಕಾಡುತ್ತಿದೆ.

ಸನ್ನದ್ದ ಸ್ಥಿತಿಯಲ್ಲಿ ಆರ್ಮಿ, ಏರ್ಫೋರ್ಸ್: ಜಮ್ಮು, ಕಾಶ್ಮೀರದಲ್ಲಿ ಏನಾಗುತ್ತಿದೆ?ಸನ್ನದ್ದ ಸ್ಥಿತಿಯಲ್ಲಿ ಆರ್ಮಿ, ಏರ್ಫೋರ್ಸ್: ಜಮ್ಮು, ಕಾಶ್ಮೀರದಲ್ಲಿ ಏನಾಗುತ್ತಿದೆ?

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಗಡಿ ನಿಯಂತ್ರಣಾ ರೇಖೆಯುದ್ದಕ್ಕೂ ಪಾಕಿಸ್ತಾನ 100ಕ್ಕೂ ಹೆಚ್ಚು ವಿಶೇಷ ಕಮಾಂಡೊಗಳನ್ನು ನಿಯೋಜಿಸಿದ್ದು, ಭಾರತೀಯ ಸೇನೆಯ ಮೇಲೆ ಸಂಭಾವ್ಯ ದಾಳಿ ನಡೆಸುವ ಎಚ್ಚರಿಕೆ ನೀಡಲಾಗಿದೆ.

ಭಾರತೀಯ ಸೇನೆಯ ಮೇಲೆ ಪಾಕಿಸ್ತಾನ ದಾಳಿ ನಡೆಸುವ ಸಾಧ್ಯತೆ ಇದೆ. ಪಾಕ್ ಕಮಾಂಡೊಗಳ ಚಲನಚಲನಗಳನ್ನು ಭಾರತೀಯ ಸೇನೆ ಹತ್ತಿರದಿಂದ ಗಮನಿಸುತ್ತಿದೆ.

ಪಿಒಕೆಗಾಗಿ ರಕ್ತ ಕೊಡುತ್ತೇನೆ ಎಂದಿದ್ದ ಅಮಿತ್ ಶಾ

ಪಿಒಕೆಗಾಗಿ ರಕ್ತ ಕೊಡುತ್ತೇನೆ ಎಂದಿದ್ದ ಅಮಿತ್ ಶಾ

ಪಾಕ್ ಆಕ್ರಮಿತ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ . ಅದಕ್ಕಾಗಿ ರಕ್ತ ಕೊಡಲು ಸಿದ್ಧನಿದ್ದೇನೆ. ಭಾರತ ಸರ್ಕಾರದ ಮುಂದಿನ ಗುರಿ ಪಾಕ್ ಆಕ್ರಮಿತ ಕಾಶ್ಮೀರ ಎಂದು ಸಂಸತ್ತಿನಲ್ಲೇ ಗೃಹ ಸಚಿವ ಅಮಿತ್ ಶಾ ಗುಡುಗಿದ್ದರು.

ಇದರ ಬೆನ್ನಲ್ಲೇ ಹೇಳಿಕೆ ನೀಡಿದ್ದ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಜಮ್ಮು ಕಾಶ್ಮೀರದ ಬಗ್ಗೆ ದ್ವಿಪಕ್ಷೀಯ ಮಾತುಕತೆ ಮುಗಿದ ಅಧ್ಯಾಯ. ಇನ್ನೇನಿದ್ದರೂ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಚರ್ಚೆ ಎಂದಿದ್ದರು. ಇದು ರಾಜಕೀಯ ಹೇಳಿಕೆ ಎನಿಸಿದ್ದರೂ ಕೂಡ ಪಾಕಿಸ್ತಾನದ ರಾಜಕಾರಣಗಳಲ್ಲಿ ಕಂಪನ ಮೂಡಿಸಿದ್ದು ಮಾತ್ರ ಸತ್ಯ.

ಪಾಕ್ ವಾಯು ಪ್ರದೇಶ ಸಂಪೂರ್ಣ ಬಂದ್?

ಪಾಕ್ ವಾಯು ಪ್ರದೇಶ ಸಂಪೂರ್ಣ ಬಂದ್?

ಬಾಲಾಕೋಟ್ ಏರ್‌ಸ್ಟ್ರೈಕ್ ಬಳಿಕ ವಾಯು ಪ್ರದೇಶವನ್ನು ಭಾರತದ ವಿಮಾನಗಳಿಗೆ ಸಂಪೂರ್ಣ ನಿರ್ಬಂಧಿಸಿದ್ದ ಪಾಕಿಸ್ತಾನ, ಈಗ ಮತ್ತದೇ ಕ್ರಮಕ್ಕೆ ಮುಂದಾಗಿದೆ. ಈ ಹಿಂದೆ 830 ಕೋಟಿ ರೂ ಗಳಿಗೂ ಅಧಿಕ ನಷ್ಟ ಅನುಭವಿಸಿದ್ದರೂ ಬುದ್ಧಿ ಬಂದಿಲ್ಲ.ಕಾಶ್ಮೀರ ಕ್ರಮಕ್ಕೆ ಪ್ರತಿಯಾಗಿ ವಾಯು ಪ್ರದೇಶ ನಿರ್ಬಂಧಿಸಲು ಪಾಕಿಸ್ತಾನ ಮುಂದಾಗಿದೆ.

ಸುಪ್ರೀಂಕೋರ್ಟ್‌ನಲ್ಲಿ 370 ವಿಚಾರಣೆ

ಸುಪ್ರೀಂಕೋರ್ಟ್‌ನಲ್ಲಿ 370 ವಿಚಾರಣೆ

ಸಂವಿಧಾನದ 370ನೇ ವಿಧಿ ರದ್ದತಿಹಾಗೂ ಜಮ್ಮು ಕಾಶ್ಮೀರದಲ್ಲಿ ಸಂವಹನ ವ್ಯವಸ್ಥೆ ನಿಷೇಧ ಪ್ರಶ್ನಿಸಿ ಸಲ್ಲಿಸಿರುವ ಸರಣಿ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಬುಧವಾರ ನಡೆಯಲಿದೆ. ಕೇಂದ್ರ ಸರ್ಕಾರದಿಂದ ಕಾಶ್ಮೀರ ಕುರಿತು ವಿವರಣೆ ಪಡೆದು ಕೋರ್ಟ್ ವಿಚಾರಣೆಯಲ್ಲಿ ಮುಂದುವರೆಯುವ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ.

ವಿಶ್ವಸಂಸ್ಥೆಗೆ ಪಾಕ್ ವಿರುದ್ಧ ಅಫ್ಘಾನ್ ದೂರು

ವಿಶ್ವಸಂಸ್ಥೆಗೆ ಪಾಕ್ ವಿರುದ್ಧ ಅಫ್ಘಾನ್ ದೂರು

ಪೂರ್ವ ಅಫ್ಘಾನಿಸ್ತಾನದ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಸೇನೆ ಪದೇ ಪದೇ ಗುಂಡಿನ ದಾಳಿ ನಡೆಸಿ, ಗಡಿ ಉಲ್ಲಂಘಿಸುತ್ತಿದೆ. ಪಾಕಿಸ್ತಾನದ ಈ ಅಪ್ರಚೋಧಿತ ಕ್ರಮದ ವಿರುದ್ಧ ವಿಶ್ವಸಂಸ್ಥೆ ಗಮನವಹಿಸಬೇಕಿದೆ. ಅಫ್ಘಾನಿಸ್ತಾನದ ಹಿತರಕ್ಷಣೆಗೆ ಬರಬೇಕು ಎಂದು ವಿಶ್ವಸಂಸ್ಥೆಗೆ ಅಫ್ಘಾನಿಸ್ತಾನ ಸರ್ಕಾರ ದೂರು ನೀಡಿದೆ.

English summary
Pakistan is now worried about the loss of POK (Pakistan occupied Kashmir). There is reason for all this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X