ವಾಘಾ ಗಡಿಯಲ್ಲಿ ಅತೀ ಎತ್ತರದ ಧ್ವಜ ಹಾರಿಸಲು ಪಾಕ್ ಸಿದ್ಧತೆ
ಅಮೃತಸರ, ಜುಲೈ 7: ಭಾರತ ಮತ್ತು ಪಾಕಿಸ್ತಾನದ ನಡುವಿನ ವಾಘಾ ಗಡಿಯಲ್ಲಿ 400 ಅಡಿ ಎತ್ತರದ ಪಾಕ್ ರಾಷ್ಟ್ರ ಧ್ವಜವನ್ನು ಹಾರಿಸಲು ಪಾಕಿಸ್ತಾನ ಚಿಂತನೆ ನಡೆಸುತ್ತಿದೆ.
ಭಾರತದ ಅಮೃತಸರ ಮತ್ತು ಪಾಕಿಸ್ತಾನದ ಲಾಹೋರ್ ನಡುವಲ್ಲಿರುವ ವಾಘಾ ಗಡಿಯಲ್ಲಿದ್ದ 350 ಅಡಿ ಎತ್ತರದ ಭಾರತದ ರಾಷ್ಟ್ರ ಧ್ವಜ ಗಾಳಿಗೆ ಸಿಕ್ಕು ಸ್ವಲ್ಪ ಹಾಳಾದ ಸುದ್ದಿ ಕೇಳುತ್ತಿದ್ದಂತೆಯೇ, ಇದೇ ಗಡಿಯಲ್ಲಿ400 ಅಡಿ ಎತ್ತರದ ಪಾಕ್ ಧ್ವಜವನ್ನು ಹಾರಿಸಲು ಪಾಕಿಸ್ತಾನ ಸಿದ್ಧತೆ ನಡೆಸುತ್ತಿದೆ.

ಈಗಾಗಲೇ ಪಾಕಿಸ್ತಾನ ಧ್ವಜ ಸ್ಥಾಪನೆಗೆ ಸಕಲ ಸಿದ್ಧತೆ ನಡೆಸಿದ್ದು, ಇಲ್ಲಿನ ಕೆಲವು ಮರಗಳನ್ನು ಕಡಿದು ಆ ಜಾಗವನ್ನು ಧ್ವಜ ಸ್ಥಾಪನೆಗೆ ಅಣಿಗೊಳಿಸುತ್ತಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಭಾರತದೊಂದಿಗೆ ಒಂದಿಲ್ಲೊಂದು ರೀತಿಯಲ್ಲಿ ವಿವಾದ ಸೃಷ್ಟಿಸಿಕೊಳ್ಳುತ್ತಲೇ ಇರುವ ಪಾಕಿಸ್ತಾನ ಇದರೊಂದಿಗೆ ಮತ್ತೊಂದು ವಿವಾದವನ್ನು ಮೈಮೇಲೆಳೆದುಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕು!












Click it and Unblock the Notifications