ಕೇಂದ್ರ ಸರ್ಕಾರಿ ನೌಕರರಿಗೆ ಆಘಾತ: 1,50,000 ಸರ್ಕಾರಿ ನೌಕರರು ವಜಾ!

ಭಾರತದ ಶತ್ರು ಪಾಕಿಸ್ತಾನದ ಮಾನ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಹರಾಜು ಆಗಿದ್ದು, ಕೈಯಲ್ಲಿ ಕಾಸು ಇಲ್ಲದೆ ನರಳುತ್ತಿರುವ ಪಾಕಿಸ್ತಾನ ಇದೀಗ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಅದರಲ್ಲೂ ಪಾಕಿಸ್ತಾನದ ಜನ ಇದೀಗ, ಒಂದು ಹೊತ್ತಿನ ಊಟಕ್ಕೂ ನರಳುವ ಪರಿಸ್ಥಿತಿಯು ನಿರ್ಮಾಣ ಆಗಿದೆ. ಇಂತಹ ಸಮಯದಲ್ಲೇ, ಪಾಕಿಸ್ತಾನವು ತನ್ನ ಸರ್ಕಾರಿ ನೌಕರರಿಗೆ ಕೂಡ ಭೀಕರ ಆಘಾತ ನೀಡಿದೆ. 1,50,000 ಸರ್ಕಾರಿ ನೌಕರರನ್ನು ವಜಾ ಮಾಡಲು ಈಗ ಆದೇಶ ಹೊರಡಿಸಿದೆ ಪಾಕಿಸ್ತಾನ ಸರ್ಕಾರ.

ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಏನಾಗಿದೆ? ಅನ್ನೋದು ಇಡೀ ಜಗತ್ತಿಗೆ ಗೊತ್ತಿರುವ ವಿಚಾರ. ಪಾಕಿಸ್ತಾನದ ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಒಂದು ಹೊತ್ತಿನ ಊಟಕ್ಕೆ ಕೂಡ ಅಲ್ಲಿ ಜನ ನರಳುತ್ತಿದ್ದಾರೆ. ಅದರಲ್ಲೂ ಪಾಕಿಸ್ತಾನ ಪ್ರಜೆಗಳಿಗೆ ಕೆಲಸ ಇಲ್ಲದೆ ನರಳಾಡುವ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ. ಇಂತಹ ಸಮಯದಲ್ಲೇ 1,50,000 ಸರ್ಕಾರಿ ನೌಕರರನ್ನ ವಜಾ ಮಾಡಲು ಪಾಕಿಸ್ತಾನ ಸರ್ಕಾರ ಆದೇಶ ನೀಡಿದೆ. ಈ ಮೂಲಕ ಮತ್ತೊಂದು ಬಿರುಗಾಳಿಯೇ ಪಾಕಿಸ್ತಾನದ ಆರ್ಥಿಕತೆಯಲ್ಲಿ ಇದೀಗ ಸೃಷ್ಟಿಯಾಗಿದ್ದು, ಇಂತಹ ಕಠಿಣ ನಿರ್ಧಾರ ಏಕೆ? ಮುಂದೆ ಓದಿ.

Pakistan Will Be Remove 1 50 000 Government Employees For This Reason

6 ಸಚಿವಾಲಯ ಕಚೇರಿಗಳಿಗೆ ಬೀಗ!

ಪಾಕಿಸ್ತಾನದ ರಾಜಕಾರಣಿಗಳಿಗೆ ತಮ್ಮ ದೇಶವನ್ನು ಸರಿಯಾಗಿ ಮುನ್ನಡೆಸಲು ಬರೋದೆ ಇಲ್ಲ. ಹೀಗಿದ್ದರೂ ಭಾರತ & ಕಾಶ್ಮೀರದ ವಿಚಾರದಲ್ಲಿ ಪದೇ ಪದೇ ಕಿರಿಕ್ ಮಾಡುತ್ತಾರೆ. ಹೀಗೆಯೇ ಎರಡು ದಿನಗಳ ಹಿಂದಷ್ಟೇ ಪಾಕಿಸ್ತಾನ ಪ್ರಧಾನಿ ಜಮ್ಮು & ಕಾಶ್ಮೀರ ಬಗ್ಗೆ ಮಾತನಾಡಿದ್ದರು. ಹೀಗಿದ್ದಾಗ ಆರ್ಥಿಕ ಮುಗ್ಗಟ್ಟಿನಿಂದ ನಲುಗಿ ಹೋಗಿರುವ ಪಾಕಿಸ್ತಾನದ ಪರಿಸ್ಥಿತಿ ಸರಿ ಮಾಡಲು ಇದೀಗ ಆಡಳಿತಾತ್ಮಕ ವೆಚ್ಚ ಕಡಿತಗೊಳಿಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಹೀಗಾಗಿಯೇ 1.5 ಲಕ್ಷ ಸರ್ಕಾರಿ ಹುದ್ದೆಗಳನ್ನ ಕಡಿತಗೊಳಿಸಲು ನಿರ್ಧರಿಸಲಾಗಿದೆ. ಹಾಗೇ 6 ಸಚಿವಾಲಯ ಕಚೇರಿಗಳಿಗೆ ಬೀಗ ಜಡಿಯಲು ನಿರ್ಧರಿಸಲಾಗಿದೆ. ಹಾಗಾದ್ರೆ ಈ ಐಡಿಯಾ ಕೊಟ್ಟಿದ್ದು ಯಾರು?

700 ಕೋಟಿ ರೂಪಾಯಿ ಸಾಲ!

ಪಾಕಿಸ್ತಾನ ಸರ್ಕಾರ & ಅಲ್ಲಿನ ರಾಜಕಾರಣಿಗಳು ದೇಶವನ್ನು ಬೀದಿಗೆ ತಂದಿದ್ದಾರೆ. ಹೀಗಾಗಿ ಪಾಕಿಸ್ತಾನದ ಪ್ರಜೆಗಳು ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹೀಗೆ, ಜನರು ನರಳುವ ಸಮಯದಲ್ಲೇ ಪಾಕಿಸ್ತಾನ ಸರ್ಕಾರಕ್ಕೆ ಒಟ್ಟು 700 ಕೋಟಿ ರೂಪಾಯಿಯ ಸಾಲ ನೀಡಲು ಅಂತರರಾಷ್ಟ್ರೀಯ ಹಣಕಾಸು ನಿಧಿ ಅಂದ್ರೆ ಐಎಂಎಫ್ ನಿರ್ಧರಿಸಿದೆ. ಆದರೆ ಹೀಗೆ ಸಾಲ ನೀಡುವ ಮೊದಲು ಐಎಂಎಫ್‌ ರೂಲ್ಸ್ ಹಾಕಿದ್ದು, ಅನಗತ್ಯ ವೆಚ್ಚಕ್ಕೆ ಕಡಿವಾಣ & ತೆರಿಗೆ-ಜಿಡಿಪಿಗಳ ಅನುಪಾತ ಹೆಚ್ಚಳಕ್ಕೆ ಆದೇಶ ನೀಡಿತ್ತು. ಅಲ್ಲದೆ ಕೃಷಿ & ರಿಯಲ್‌ ಎಸ್ಟೇಟ್‌ ಮೇಲೆ ತೆರಿಗೆ ವಿಧಿಸಲು ಸೂಚನೆ ನೀಡಿದೆ. ಇದರ ಭಾಗವಾಗಿಯೇ ಇದೀಗ 1.5 ಲಕ್ಷ ಸರ್ಕಾರಿ ಹುದ್ದೆಗಳನ್ನ ಕಡಿತಗೊಳಿಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+