ಭಾರತದ ಶತ್ರು ಪಾಕಿಸ್ತಾನ ಸರ್ವನಾಶ: ಕೊನೆಯ ಮೊಳೆ ಹೊಡೆದವರು ಯಾರು?
ಭಾರತವನ್ನ ಎದುರು ಹಾಕಿಕೊಂಡು, ತನ್ನ ಪ್ರಜೆಗಳನ್ನು ಹಸಿವು & ಬಡತನದ ಬೇಗೆಯಲ್ಲಿ ಸಾಯುವಂತೆ ಮಾಡಿದ ಪಾಪಿ ಪಾಕಿಸ್ತಾನಕ್ಕೆ ಬುದ್ಧಿ ಬರಲ್ಲ ಬಿಡಿ. ಯಾಕಂದ್ರೆ ಅಲ್ಲಿ ಇರುವ ಭ್ರಷ್ಟ ರಾಜಕಾರಣಿಗಳು ವ್ಯವಸ್ಥೆ ಮತ್ತಷ್ಟು ಹಾಳಾಗುವ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಹೀಗೆ ಪಾಕಿಸ್ತಾನದ ಭ್ರಷ್ಟ ರಾಜಕಾರಣಿಗಳು ಕೈಗೊಳ್ಳುತ್ತಿರುವ ಹೀನಾಯ ನಿರ್ಧಾರಗಳಿಗೆ ಯಾರೆಲ್ಲ ಬೆಂಬಲ ನೀಡುತ್ತಿದ್ದಾರೆ ಗೊತ್ತಾ? ಈಗಾಗಲೇ ಬೀದಿಗೆ ಬಿದ್ದಿರುವ ಪಾಕಿಸ್ತಾನದ ಪರಿಸ್ಥಿತಿ ಈ ಸಮಯದಲ್ಲಿ ಸರ್ವನಾಶ ಆಗಲು ಸಿದ್ಧವಾಗಿದ್ದು ಹೇಗೆ? ಬನ್ನಿ ತಿಳಿಯೋಣ.
ಪಾಕಿಸ್ತಾನದ ಪರಿಸ್ಥಿತಿ ಬೇರೆ ಎಲ್ಲಾ ದೇಶಗಳಿಗೆ ಹೋಲಿಕೆ ಮಾಡಿದರೆ ಹೀನಾಯ ಪರಿಸ್ಥಿತಿಗೆ ತಲುಪಿದೆ. ಯಾಕಂದ್ರೆ ಪಾಕಿಸ್ತಾನದ ರಾಜಕೀಯ ವ್ಯಕ್ತಿಗಳು ಆ ದೇಶವನ್ನ ಆಳುವ ಬದಲಾಗಿ ಹಾಳು ಮಾಡುವ ಕೆಲಸಕ್ಕೆ ಕೈಹಾಕಿ ಪಾಕ್ ಜನರನ್ನು ಬೀದಿಗೆ ತಂದಿದ್ದಾರೆ. ಹೀಗಿದ್ದಾಗಲೇ ಸ್ಫೋಟಕ ಘಟನೆಗೆ ಇದೀಗ ಪಾಕಿಸ್ತಾನ ಸಾಕ್ಷಿ ಆಗಿದ್ದು, ಪಾಕಿಸ್ತಾನದ ಸುಪ್ರೀಂ ಕೋರ್ಟ್ ಈ ಸಮಯದಲ್ಲಿ ನೀಡಿರುವ ತೀರ್ಪು ಸಂಚಲನ ಸೃಷ್ಟಿ ಮಾಡಿದೆ. ಹಾಗಾದ್ರೆ ಇದೀಗ ಪಾಕಿಸ್ತಾನ ಸುಪ್ರೀಂ ಕೋರ್ಟ್ ಹೇಳಿದ್ದಾದರೂ ಏನು? ಆ ತೀರ್ಪು ಪಾಕಿಸ್ತಾನದ ಭ್ರಷ್ಟ ರಾಜಕಾರಣಿಗಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ? ಬನ್ನಿ ತಿಳಿಯೋಣ.

ಪಾಕಿಸ್ತಾನದಲ್ಲಿ ಹೊಸ ಸಂಚಲನ!
ಭಾರತದ ನ್ಯಾಯಾಂಗ ವ್ಯವಸ್ಥೆ ಇದೀಗ ಜಗತ್ತಿಗೆ ಮಾದರಿ ಆಗಿದ್ದು, ನಮ್ಮಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ಪ್ರಜಾಪ್ರಭುತ್ವದ ರಕ್ಷಣೆ ಮಾಡುವಲ್ಲಿ ನ್ಯಾಯಾಲಯಗಳು ಮಹತ್ವದ ಪಾತ್ರ ಬೀರುತ್ತವೆ. ಆದರೆ ಭಾರತದ ಶತ್ರು ಪಾಕಿಸ್ತಾನದ ಪರಿಸ್ಥಿತಿ ಮಾತ್ರ ಹೀಗೆ ಇಲ್ಲ, ಪಾಕಿಸ್ತಾನ ದೇಶದ ನ್ಯಾಯಾಂಗ ವ್ಯವಸ್ಥೆ ಕೂಡ ಹಾಳಾಗಿ ಹೋಗಿದೆ ಎಂಬ ಆರೋಪಗಳ ನಡುವೆ ಈಗ ವಿವಾದಾತ್ಮಕ ಕಾನೂನಿಗೆ ಕೂಡ ಅಸ್ತು ಎಂದಿದೆ ಪಾಕಿಸ್ತಾನದ ಸುಪ್ರೀಂ ಕೋರ್ಟ್. ಹೀಗಾಗಿ ಈ ತೀರ್ಪು ಇದೀಗ ಸಂಚಲನ ಸೃಷ್ಟಿ ಮಾಡಿದೆ.
ಅಷ್ಟಕ್ಕೂ, ಪಾಕಿಸ್ತಾನದಲ್ಲಿ ಭ್ರಷ್ಟಾಚಾರ ವಿರೋಧಿ ಕಾನೂನುಗಳಿಗೆ ತಂದಿರುವ ತಿದ್ದುಪಡಿಗಳ ಮರು ಸ್ಥಾಪಿಸಲು ಪಾಕಿಸ್ತಾನ ಸುಪ್ರೀಂ ಕೋರ್ಟ್ ಸರ್ಕಾರದ ಪರ ಸರ್ವಾನುಮತದ ತೀರ್ಪನ್ನ ನೀಡಿದೆ. ಹೀಗಾಗಿ ಇದೀಗ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರಕ್ಕೆ ಸಾಕಷ್ಟು ಬೆಂಬಲವನ್ನ ನೀಡಿದಂತೆ ಆಗಿದೆ. ಆದರೆ ಈ ತೀರ್ಪಿನ ಪರಿಣಾಮ ಈಗಾಗಲೇ ಪಾಕಿಸ್ತಾನದಲ್ಲಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ರಾಜಕಾರಣಿಗಳಿಗೆ ಬೆಂಬಲ ನೀಡಿದಂತೆ ಆಗುತ್ತಿದೆ ಎನ್ನುವ ಗಂಭೀರ ಆರೋಪ ಕೂಡ ಕೇಳಿಬಂದಿದೆ.
ಭ್ರಷ್ಟ ರಾಜಕಾರಣಿಗಳಿಗೆ ಬೆಂಬಲ?
ಅಂದಹಾಗೆ ಭ್ರಷ್ಟಾಚಾರ ವಿರೋಧಿ ಕಾನೂನುಗಳ ತಿದ್ದುಪಡಿ ಮಾಡಲು ಶೆಹಬಾಜ್ ಷರೀಫ್ ಸರ್ಕಾರ ಈ ಹಿಂದೆಯೇ ನಿರ್ಧರಿಸಿತ್ತು. ಇದೇ ಕಾರಣಕ್ಕೆ ಜಾರಿಗೆ ಬಂದ ತಿದ್ದುಪಡಿ ಪ್ರಶ್ನಿಸಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ವಿರೋಧ ಪಕ್ಷದ ನಾಯಕರು ಪಾಕಿಸ್ತಾನದಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಆ ಕುರಿತು ತೀರ್ಪು ನೀಡಿರುವ ಪಾಕಿಸ್ತಾನ ಸುಪ್ರೀಂ ಕೋರ್ಟ್ ಪಾಕಿಸ್ತಾನ ಪ್ರಧಾನಿ ಶೆಹಬಾಜ್ & ಅವರ ಅಣ್ಣ ನವಾಜ್ ಷರೀಫ್ ಹಾಗೂ ಪಾಕಿಸ್ತಾನದ ಹಲವು ರಾಜಕಾರಣಿಗಳಿಗೆ ರಿಲೀಫ್ ನೀಡಿದಂತೆ ಆಗಿದೆ. ಆದರೆ ಈ ಕಾನೂನು ತಿದ್ದುಪಡಿ ಬಗ್ಗೆ ಪಾಕಿಸ್ತಾನದ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ.












Click it and Unblock the Notifications