ಪಾಕಿಸ್ತಾನ: 20 ಬಲೂಚ್ ಹೋರಾಟಗಾರರು, 9 ಪಾಕ್ ಸೈನಿಕರು ಸಾವು
ಇಸ್ಲಾಮಾಬಾದ್, ಫೆಬ್ರವರಿ 7: ಪಾಕಿಸ್ತಾನದಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷದಲ್ಲಿ ಪಾಕಿಸ್ತಾನ ಸೇನೆ ಬಲೂಚ್ ಲಿಬರೇಷನ್ ಆರ್ಮಿಯ 20 ಮಂದಿ ಸ್ವಾತಂತ್ರ್ಯ ಹೋರಾಟಗಾರರನ್ನು ಕೊಂದಿರುವುದಾಗಿ ಹೇಳಿಕೊಂಡಿದೆ.
ಪಾಕ್ ಸೇನೆ ನೀಡಿರುವ ಮಾಹಿತಿಯ ಪ್ರಕಾರ, ನೌಷ್ಕಿ ಪ್ರಾಂತ್ಯದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಬಿಎಲ್ಎ ಹೋರಾಟಗಾರರು ಹತರಾಗಿದ್ದಾರೆ. ಒಬ್ಬ ಅಧಿಕಾರಿ ಸೇರಿದಂತೆ ಪಾಕ್ ಸೇನೆಯ ನಾಲ್ವರು ಯೋಧರು ಸಾವನ್ನಪ್ಪಿದ್ದಾರೆ.
ಆಂತರಿಕ ಕಲಹವನ್ನು ನಿಯಂತ್ರಿಸುವುದಕ್ಕಾಗಿ ಆಪರೇಷನ್ ಕ್ಲೀನ್ ಅಪ್ ಹೆಸರಲ್ಲಿ ಪಾಕ್ ಸೇನೆ ಕಾರ್ಯಾಚರಣೆಗೆ ನಡೆಸುತ್ತಿತ್ತು. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಸೇನಾ ಶಿಬಿರದ ಮೇಲೆ ದಾಳಿ ಮಾಡಿದ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ)ಯ 20 ಮಂದಿ ಸಾವನ್ನಪ್ಪಿದ್ದರೆ, ಪ್ರತಿ ದಾಳಿಯಲ್ಲಿ ಪಾಕ್ ಸೇನೆಯ 9 ಯೋಧರೂ ಸಾವಿಗೀಡಾಗಿದ್ದಾರೆ.

ಪಾಕಿಸ್ತಾನ ಸರ್ಕಾರ ಭಯೋತ್ಪಾದಕರು ಎಂದು ಹೇಳುವ ಈ ಹೋರಾಟಗಾರರ ಪೈಕಿ ಕೆಲವರು ಪಂಜ್‌ಗೂರ್ ನಲ್ಲಿ ಅಡಗಿಕೊಂಡಿದ್ದರು. ಪಾಕ್ ಸೇನಾ ಶಿಬಿರದ ಮೇಲಿನ ದಾಳಿಯಲ್ಲಿ ನಂಟು ಹೊಂದಿರುವ ಇತರ ಮೂವರು ಬಂಡುಕೋರರನ್ನು ಶುಕ್ರವಾರ ಬಲ್ಗಟಾರ್ ಪ್ರದೇಶದಲ್ಲಿ ಕೊಲ್ಲಲಾಗಿತ್ತು.
ಶಿಬಿರದಲ್ಲಿ ನಡೆದ ದಾಳಿಯ ಹೊಣೆಯನ್ನು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಹೊತ್ತುಕೊಂಡಿತ್ತು. ಅಡಗಿ ಕುಳಿತಿರುವ ಬಂಡುಕೋರರಿಗೆ ಶರಣಾಗಲು ಅವಕಾಶ ನೀಡಲಾಗಿದೆ ಎಂದು ಪಾಕ್ ಸೇನೆ ಹೇಳಿದೆ.
ಇದಕ್ಕೂ ಮೊದಲು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗುರುವಾರ ಟ್ವೀಟ್ ಮಾಡುವ ಮೂಲಕ ಪಾಕಿಸ್ತಾನ ಸೇನೆಗೆ ಅಭಿನಂದನೆ ಸಲ್ಲಿಸಿದ್ದರು. ಪಾಕಿಸ್ತಾನ ಸೇನೆ ದಾಳಿಯನ್ನು ವಿಫಲಗೊಳಿಸಿದೆ ಎಂದು ಅವರು ಹೇಳಿದ್ದರು.
ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿರುವ ಎರಡು ಸೇನಾ ನೆಲೆಗಳ ಮೇಲೆ ಬಲೂಚಿಸ್ತಾನ ಲಿಬರೇಷನ್ ಆರ್ಮಿ (ಬಿಎಲ್‌ಎ) ಸಂಘಟನೆಯ ಉಗ್ರರು ದಾಳಿ ನಡೆಸಿದ್ದು, ''ಪಾಕಿಸ್ತಾನದ 100 ಸೈನಿಕರನ್ನು ಹತ್ಯೆಗೈದಿದ್ದೇವೆ,'' ಎಂದು ಹೇಳಿಕೊಂಡಿತ್ತು.
ಮತ್ತೊಂದೆಡೆ, ''ಗುಂಡಿನ ಚಕಮಕಿಯಲ್ಲಿ ನಾಲ್ವರು ಸೈನಿಕರು ಮಾತ್ರ ಮೃತಪಟ್ಟಿದ್ದು, ಯೋಧರ ಗುಂಡಿಗೆ 20 ಉಗ್ರರನ್ನು ಹತ್ಯೆಗೈಯಲಾಗಿದೆ,'' ಎಂದು ಪಾಕ್ ಸರ್ಕಾರ ತಿಳಿಸಿತ್ತು.
ಪಂಜ್ಗುರ್ ಹಾಗೂ ನೋಶ್ಕಿ ಜಿಲ್ಲೆಗಳಲ್ಲಿ ಸೇನೆಯ ಎರಡು ನೆಲೆಗಳ ಮೇಲೆ ಉಗ್ರರು ದಾಳಿ ಮಾಡಿದ್ದಾರೆ. ಇದಕ್ಕೆ ಪಾಕ್ ಸೈನಿಕರು ಸಹ ಪ್ರತಿ ದಾಳಿ ನಡೆಸಿದ್ದಾರೆ. ''ಉಗ್ರರ ವಿರುದ್ಧದ ಹೋರಾಟದಲ್ಲಿ ಪಾಕ್ ಸೇನೆಗೆ ಭಾರಿ ಮುನ್ನಡೆ ದೊರೆತಿದೆ. ನೋಶ್ಕಿಯಲ್ಲಿ ಒಂಬತ್ತು ಉಗ್ರರು ಹಾಗೂ ನಾಲ್ವರು ಸೈನಿಕರು ಮೃತಪಟ್ಟರೆ, ಪಂಜ್ಗುರ್‌ನಲ್ಲಿಆರು ಉಗ್ರರ ಹತ್ಯೆ ಮಾಡಲಾಗಿದೆ,'' ಎಂದು ಗೃಹ ಸಚಿವ ಶೇಖ್ ರಶೀದ್ ಅಹ್ಮದ್ ತಿಳಿಸಿದ್ದರು.
Recommended Video
''ಪಾಕಿಸ್ತಾನದ ಎರಡು ನೆಲೆಗಳನ್ನು ಧ್ವಂಸ ಮಾಡಿದ್ದೇವೆ. ಇನ್ನೂ ಹಲವು ನೆಲೆಗ ಳನ್ನು ನಮ್ಮ ನಿಯಂತ್ರಣದಲ್ಲಿಯೇ ಇವೆ. ನಮಗೆ ಪ್ರತಿರೋಧ ಒಡ್ಡುವಲ್ಲಿ ಸೈನಿಕರು ವಿಫಲವಾಗಿದ್ದು, ಇನ್ನೂ ಕಾರ್ಯಾಚರಣೆ ಮುಂದುವರಿಯುತ್ತಿದೆ,'' ಎಂದು ಬಿಎಲ್‌ಎ ಹೇಳಿಕೊಂಡಿದೆ. ಪ್ರತ್ಯೇಕ ಬಲೂಚಿಸ್ತಾನ ಕ್ಕಾಗಿ ಬಿಎಲ್‌ಎ ಹೋರಾಡುತ್ತಿದ್ದು, ಕಳೆದ ವಾರವಷ್ಟೇ ಪಾಕ್ ನೆಲೆಗಳ ಮೇಲೆ ದಾಳಿ ಮಾಡಿ 10 ಸೈನಿಕರನ್ನು ಹತ್ಯೆಗೈದಿದ್ದರು.












Click it and Unblock the Notifications