India Vs Pakistan: ಪಾಕಿಸ್ತಾನ ಹೊಸ ಕಿರಿಕ್, ರಷ್ಯಾ & ಚೀನಾ ಸೇರಿ ತನಿಖೆ ನಡೆಸಲು ಆಗ್ರಹ!
ಪಾಕಿಸ್ತಾನ ಭಾರತದ ವಿರುದ್ಧ ಮಾಡುತ್ತಿರುವ ಕಿರಿಕ್ ಒಂದೊಂದಲ್ಲ, ಪದೇ ಪದೇ ಭಾರತ ಶಾಂತಿ ಕಳೆದುಕೊಳ್ಳುವ ರೀತಿ ವರ್ತನೆ ತೋರಿಸುತ್ತಿರುವ ಪಾಪಿ ಪಾಕಿಸ್ತಾನ ಕಾಶ್ಮೀರದ ಮೇಲೆ ಉಗ್ರರು ದಾಳಿ ನಡೆಸಿದ ವಿಚಾರವನ್ನೇ ಅಸ್ತ್ರ ಮಾಡಿಕೊಂಡು ಏನೇನೋ ಆಟ ಆಡಲು ಈ ಮೂಲಕ ಮುಂದಾಗುತ್ತಿದೆ. ಇಂತಹ ಸಮಯದಲ್ಲೇ ಮತ್ತೊಂದು ಡಿಮ್ಯಾಂಡ್ ಕೂಡ ಇಟ್ಟು ಭಾರತ ರೊಚ್ಚಿಗೇಳುವಂತೆ ಮಾಡುತ್ತಿದೆ ಪಾಪಿ ಪಾಕಿಸ್ತಾನ. ರಷ್ಯಾ & ಚೀನಾ ಸೇರಿ, ತನಿಖೆ ನಡೆಸಲು ಆಗ್ರಹ ಮಾಡುವ ಮೂಲಕ ಈಗ ಭಾರತದ ವಿರುದ್ಧ ಮತ್ತೊಮ್ಮೆ ವಿಷ ಕಾರಿದೆ ಪಾಪಿ ಪಾಕ್.
ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದರೆ ಆಫ್ರಿಕಾ ಖಂಡದ ದೇಶಗಳೇ ಉತ್ತಮವಾಗಿ ಬದುಕುತ್ತಿವೆ. ಭಾರತವನ್ನ ಎದುರು ಹಾಕಿಕೊಂಡು, ತನ್ನ ಪ್ರಜೆಗಳನ್ನು ಹಸಿವು ಮತ್ತು ಬಡತನದ ಬೇಗೆಯಲ್ಲಿ ಸಾಯುವಂತೆ ಮಾಡಿರುವ ಇದೇ ಪಾಪಿ ಪಾಕಿಸ್ತಾನಕ್ಕೆ ಬುದ್ಧಿ ಬರಲ್ಲ ಬಿಡಿ. ಯಾಕಂದ್ರೆ ಅಲ್ಲಿ ಇರುವ ಭ್ರಷ್ಟ ರಾಜಕಾರಣಿಗಳು ವ್ಯವಸ್ಥೆ ಮತ್ತಷ್ಟು ಹಾಳಾಗುವ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಹಾಗೇ ಭಾರತದ ವಿರುದ್ಧ ವಿಷ ಕಾರುತ್ತಾ, ಉಗ್ರರನ್ನು ಕೂಡ ಎತ್ತಿ ಕಟ್ಟುತ್ತಿದ್ದಾರೆ. ಹೀಗೆ ಇರುವಾಗಲೇ, ಪಹಲ್ಗಾಮ್ ದಾಳಿ ವಿಚಾರದಲ್ಲಿ ರಷ್ಯಾ & ಚೀನಾ ಹೆಸರನ್ನು ಪಾಪಿ ಪಾಕ್ ಇದೀಗ ಎಳೆದು ತಂದಿದೆ.

ಚೀನಾ ಹೆಸರು ಎಳೆದು ತಂದ ಪಾಕ್!
ಪಹಲ್ಗಾಮ್ ಘಟನೆ ಬಗ್ಗೆ ಖುದ್ದು ವಿಶ್ವಸಂಸ್ಥೆ ಕೂಡ ಆಕ್ರೋಶ ವ್ಯಕ್ತಪಡಿಸಿ, ಉಗ್ರರ ವಿರುದ್ಧ ಕ್ರಮಕ್ಕೆ ಬೆಂಬಲ ನೀಡುತ್ತಿದೆ. ಆದರೆ ಈ ವಿಚಾರದಲ್ಲಿ ಊಸರವಳ್ಳಿ ಪಾಕಿಸ್ತಾನ ಮಾತ್ರವೇ ಮತ್ತೆ ಮತ್ತೆ ತನ್ನ ಕಳ್ಳ ಬುದ್ಧಿ ತೋರಿಸುತ್ತಿದೆ. ಅದರಲ್ಲೂ ಕೆಲವು ದಿನಗಳ ಹಿಂದಷ್ಟೇ ಈ ವಿಚಾರದಲ್ಲಿ, ಅಂದ್ರೆ ಕಾಶ್ಮೀರದ ಪಹಲ್ಗಾಮ್ ಪ್ರದೇಶಕ್ಕೆ ನುಗ್ಗಿ ಉಗ್ರರು 26 ಜನರ ಕೊಲೆ ಮಾಡಿರುವ ವಿಚಾರವಾಗಿ ಅಂತಾರಾಷ್ಟ್ರೀಯ ತನಿಖೆಗೆ ಆಗ್ರಹ ಮಾಡಿತ್ತು ಪಾಪಿ ಪಾಕಿಸ್ತಾನ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಪಾಕಿಸ್ತಾನ ರಷ್ಯಾ & ಚೀನಾ ಹೆಸರನ್ನು ಪ್ರಸ್ತಾಪ ಮಾಡಿದೆ.
ಹೌದು, ಪಹಲ್ಗಾಮ್ ಉಗ್ರ ದಾಳಿ ತನಿಖೆಯಲ್ಲಿ ಚೀನಾ ಮತ್ತು ರಷ್ಯಾ ಸೇರಿ ತನಿಖೆ ನಡೆಸಬೇಕು ಎಂಬ ಆಗ್ರಹವನ್ನು ಇದೀಗ ಪಾಕಿಸ್ತಾನ ಮಾಡಿದೆ. ಏಪ್ರಿಲ್ 22ರ ಮಂಗಳವಾರ ಪಾಪಿ ಉಗ್ರ ಪಡೆ ಪಾಕಿಸ್ತಾನದಿಂದ ಬಂದು ಭಾರತದಲ್ಲಿ ರಕ್ತದ ಹೊಳೆ ಹರಿಸಿತ್ತು. ಹೀಗಿದ್ದಾಗ ಭಾರತವು ಕೂಡ ಪಾಕಿಸ್ತಾನದ ವಿರುದ್ಧ ಖಡಕ್ ಕ್ರಮ ಕೈಗೊಳ್ಳುತ್ತಿದೆ. ಇದೇ ಕಾರಣಕ್ಕೆ, ಊಸರವಳ್ಳಿ ಪಾಪಿ ಪಾಕಿಸ್ತಾನ ಇದೀಗ ಜಗತ್ತಿನ ಗಮನ ಬೇರೆ ಕಡೆಗೆ ಸೆಳೆಯಲು ರಷ್ಯಾ & ಚೀನಾ ಹೆಸರು ಎಳೆದು ತಂದಿದೆ. ದಿ ರೆಸಿಸ್ಟೆಂಟ್ ಫ್ರಂಟ್ ಉಗ್ರ ಸಂಘಟನೆ ನಡೆಸಿರುವ ದಾಳಿಯ ಘಟನೆಯನ್ನ ರಷ್ಯಾ & ಚೀನಾ ಸೇರಿ ತನಿಖೆ ನಡೆಸಬೇಕು ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಆಗ್ರಹಿಸಿದ್ದು ಕಿಚ್ಚು ಹೊತ್ತಿಸಿದೆ.
ಕಿರಿಕ್ ತೆಗೆದ ಪಾಕ್ ರಕ್ಷಣಾ ಸಚಿವ!
ರಷ್ಯಾ ಸರ್ಕಾರಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಈ ರೀತಿ ಹೇಳಿಕೆ ನೀಡಿದ್ದು ಮಾತ್ರವಲ್ಲ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಅಂತಾರಾಷ್ಟ್ರೀಯ ತನಿಖಾ ತಂಡ ಈ ಬಗ್ಗೆ ತನಿಖೆ ನಡೆಸಬೇಕು ಎಂದಿದ್ದಾರೆ ಅಂತಾ ಇದೀಗ ಖವಾಜಾ ತಿಳಿಸಿರೋದು ಭಾರತದ ಕೋಪವನ್ನ ಮತ್ತಷ್ಟು ಹೆಚ್ಚು ಮಾಡಿದೆ.
ರಷ್ಯಾ, ಚೀನಾ ಇಲ್ಲವೇ ಪಾಶ್ಚಿಮಾತ್ಯ ದೇಶಗಳು ಸಕಾರಾತ್ಮಕ ಪಾತ್ರ ವಹಿಸಬಹುದು ಎಂದಿರುವ ಖವಾಜಾಗೆ ಸರಿಯಾದ ಉತ್ತರವೇ ಸಿಗುವ ನಿರೀಕ್ಷೆ ಇದೆ. ಹಾಗೇ ತನಿಖಾ ತಂಡವನ್ನ ರಚಿಸಿ ಭಾರತ ಅಥವಾ ಮೋದಿ ಸುಳ್ಳು ಹೇಳುತ್ತಿದ್ದಾರೆಯೇ? ಎಂಬುದನ್ನ ಅಂತಾರಾಷ್ಟ್ರೀಯ ತನಿಖೆ ಮೂಲಕ ಕಂಡುಹಿಡಿಯಲು ಸಾಧ್ಯ ಎಂದು ಪಾಕಿಸ್ತಾನ ರಕ್ಷಣಾ ಹೇಳಿಕೆ ನೀಡಿರುವುದು ಕಿಚ್ಚು ಹೊತ್ತಿಸಿದೆ.












Click it and Unblock the Notifications