ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ನೆರವು ನೀಡುವುದಾಗಿ ಘೋಷಿಸಿದ ಪಾಕಿಸ್ತಾನದ ಎಧಿ ಫೌಂಡೇಶನ್

|
Google Oneindia Kannada News

ಇಸ್ಲಾಮಾಬಾದ್, ಏಪ್ರಿಲ್ 24: ಕೊರೊನಾ ಸೋಂಕನ್ನು ಮಟ್ಟಹಾಕಲು ಪಾಕಿಸ್ತಾನದ ಎಧಿ ಫೌಂಡೇಶನ್ ಭಾರತಕ್ಕೆ ಸಹಾಯ ಮಾಡುವುದಾಗಿ ತಿಳಿಸಿದೆ.

ಈಗಾಗಲೇ ಚೀನಾ ಅಗತ್ಯ ನೆರವು ನೀಡುವುದಾಗಿ ಹೇಳುತ್ತಿದ್ದು ಇದರ ಬೆನ್ನಲ್ಲೇ ಇದೀಗ ಪಾಕಿಸ್ತಾನ ಸಹಾಯಹಸ್ತ ಚಾಚುವುದಾಗಿ ಹೇಳಿದೆ. ಭಾರತದಲ್ಲಿ ಕೊರೊನಾ ಭಾರೀ ಹೊಡೆತವನ್ನು ನೀಡುತ್ತಿದ್ದು ಈ ಬಗ್ಗೆ ತಿಳಿದು ತುಂಬಾ ಖೇಧವಿಸಿತು.

ಹೆಚ್ಚಿನ ಸಂಖ್ಯೆಯಲ್ಲಿ ಕೊರೊದಿಂದ ಬಳಲುತ್ತಿದ್ದಾರೆ. ಹೀಗಾಗಿ ತಮ್ಮ ಕೈಲಾದ ಸಹಾಯ ಮಾಡುವುದಾಗಿ ಹೇಳಿದ್ದು 50 ಆಂಬ್ಯುಲೆನ್ಸ್ ಕಳುಹಿಸಲು ಮುಂದಾಗಿರುವುದು ತಿಳಿಸಿದ್ದಾರೆ.

Ambulance

ಪಾಕಿಸ್ತಾನದ ಎಧಿ ಫೌಂಡೇಶನ್ ಭಾರತಕ್ಕೆ ನೆರವಾಗಲು 50 ಆ್ಯಂಬುಲೆನ್ಸ್ ಗಳನ್ನು ಕಳುಹಿಸಲು ಮುಂದಾಗಿದೆ. ಪ್ರಧಾನಿ ಮೋದಿಗೆ ಸಂಸ್ಧೆಯ ಸಂಸ್ಥಾಪಕ ದಿವಂಗತ ಅಬ್ದುಲ್ ಸತ್ತಾರ್ ಎಡಿಯವರ ಪುತ್ರ ಫೈಸಲ್ ಪತ್ರ ಬರೆದು ಈ ನೆರವನ್ನು ಪ್ರಸ್ತಾಪಿಸಿದ್ದಾರೆ.

ಶವ ಸಾಗಿಸಲು 60 ಸಾವಿರ ಕೇಳಿದ್ದ ಆಂಬ್ಯುಲೆನ್ಸ್ ಚಾಲಕನ ಬಂಧನಶವ ಸಾಗಿಸಲು 60 ಸಾವಿರ ಕೇಳಿದ್ದ ಆಂಬ್ಯುಲೆನ್ಸ್ ಚಾಲಕನ ಬಂಧನ

ಎಧಿ ಫೌಂಡೇಶನ್ ನ ಆ್ಯಂಬುಲೆನ್ಸ್ ಸೇವೆ ಪಾಕ್ ನ ಸರ್ಕಾರಿ ಸೇವೆಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಇವುಗಳನ್ನು ಸರ್ಕಾರಿ ಆ್ಯಂಬುಲೆನ್ಸ್ ಗಿಂತ ಮೊದಲು ಅಪಘಾತ ಅಥವಾ ಭಯೋತ್ಪಾದಕ ದಾಳಿ ಸ್ಥಳವನ್ನು ತಲುಪುತ್ತವೆ.

ಗಡಿ ವಿಚಾರದಲ್ಲಿ ಚೀನಾ ದಿನನಿತ್ಯ ಒಂದಲ್ಲಾ ಒಂದು ಕ್ಯಾತೆಯನ್ನು ತೆಗೆಯುತ್ತಲೇ ಇದೆ. ಇದರ ನಡುವೆ ಕೊರೊನಾ ಸೋಂಕು ನಿವಾರಣೆಗೆ ಭಾರತಕ್ಕೆ ನೆರವಿನ ಹಸ್ತ ಚಾಚಲು ಮುಂದಾಗಿದೆ.

ಸಾಂಕ್ರಾಮಿಕ ವಿರುದ್ಧದ ವೈದ್ಯಕೀಯ ಸರಬರಾಜುಗಳ ತಾತ್ಕಾಲಿಕ ಕೊರತೆಯೊಂದಿಗೆ ಭಾರತದಲ್ಲಿನ ಇತ್ತೀಚಿನ ಗಂಭೀರ ಪರಿಸ್ಥಿತಿಯನ್ನು ಚೀನಾ ಗಮನಿಸುತ್ತದೆ. ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಭಾರತಕ್ಕೆ ಅಗತ್ಯವಾದ ಬೆಂಬಲ ಮತ್ತು ಸಹಾಯವನ್ನು ಒದಗಿಸಲು ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದರು.

2019ರಲ್ಲಿ ಚೀನಾದಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್ ಕಾಣಿಸಿಕೊಂಡಾಗ ವುಹಾನ್ ಪ್ರಾಂತ್ಯಕ್ಕೆ ವೈದ್ಯಕೀಯ ಸಲಕರಣೆಗಳನ್ನು ಕಳುಹಿಸಿ ಭಾರತ ನೆರವು ನೀಡಿತ್ತು. ಇದೀಗ ಭಾರತಕ್ಕೆ ನೆರವು ನೀಡಲು ಸಿದ್ಧ ಎಂದು ಚೀನಾ ಹೇಳಿದೆ.

English summary
A Pakistan-based humanitarian organisation has offered to help the people of India manage the Covid-19 pandemic. Faisal Edhi, Edhi Foundation's chairman, on Friday wrote a letter to Prime Minister Narendra Modi requesting permission to enter India with a team of volunteers and 50 ambulances to help assist in the pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X