ಸೌದಿ ಯುವರಾಜನಿಗೆ ಚಿನ್ನ ಲೇಪಿತ ಗನ್ ಉಡುಗೊರೆ ನೀಡಿದ ಪಾಕ್!

Recommended Video

      ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಗೆ ವಿಲಕ್ಷಣ ಉಡುಗೊರೆ ಕೊಟ್ಟ ಪಾಕ್ | Oneindia kannada

      ಇಸ್ಲಾಮಾಬಾದ್, ಫೆಬ್ರವರಿ 21: ಪಾಕಿಸ್ತಾನದ ಪ್ರವಾಸಕ್ಕೆ ತೆರಳಿದ್ದ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಪಾಕಿಸ್ತಾನ ಚಿನ್ನ ಲೇಪಿತ ಗನ್ ಅನ್ನು ಉಡುಗೊರೆಯಾಗಿ ನೀಡಿದ್ದು ಬೆಳಕಿಗೆ ಬಂದಿದೆ.

      ಸಾಮಾನ್ಯವಾಗಿ ಹೀಗೆ ಯಾವುದೇ ದೇಶಕ್ಕೆ ತೆರಳುವ ಗಣ್ಯರು ಇಂಥ ಉಡುಗೊರೆಯನ್ನು ಸ್ವೀಕರಿಸುವುದು ಅಸಹಜ. ಏಕೆಂದರೆ ಅವಕ್ಕೂ ಕೆಲ ಶಿಷ್ಟಾಚಾರಗಳಿವೆ. ಆದರೆ ಸೌದಿ ಯುವರಾಜ ಯಾವ ಸಂಕೋಚವಿಲ್ಲದೆ ಈ ಉಡುಗೊರೆಯನ್ನು ಸ್ವೀಕರಿಸಿದ್ದಾರೆ.

      ಪತ್ರಕರ್ತ ಕಶೋಗಿ ಹತ್ಯೆಯ ಹಿಂದೆ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಹೆಸರು ಕೇಳಿಬಂದ ನಂತರ ಪಾಕಿಸ್ತಾನ ಇಂಥದೊಂದು ವಿಲಕ್ಷಣ ಉಡುಗೊರೆ ನೀಡಿದ್ದು ವಿಶ್ವದ ಹುಬ್ಬೇರಿಸುವಂತೆ ಮಾಡಿದೆ.

      Pakistan presents gold plated gun to Saudi crown prince as gift

      ಈ ಗನ್ ಅನ್ನು ಜರ್ಮನಿಯಲ್ಲಿ ತಯಾರಿಸಲಾಗಿದ್ದು, ಆಧುನಿಕ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಲಾಗಿದೆ.

      ಹೀಗೆ ಶಸ್ತ್ರಾಸ್ತ್ರಗಳನ್ನು ಉಡುಗೊರೆಯಾಗಿ ಕೊಡುವುದು ಹಿಂಸೆಯನ್ನು ಪ್ರಚೋದಿಸಿದಂತೆಯೇ ಅಲ್ಲವೇ ಎಂಬ ಪ್ರಶ್ನೆಯೂ ಎದ್ದಿದೆ.

      ಫೆ.17 ರಂದು ಪಾಕ್ ಪ್ರವಾಸದಲ್ಲಿದ್ದ ಸಲ್ಮಾನ್, "ಎರಡು ದೇಶಗಳೂ ಸಂಕಷ್ಟದ ಸನ್ನಿವೇಶದಲ್ಲಿ ಒಟ್ಟಿಗೇ ಹೆಜ್ಜೆ ಇಟ್ಟಿವೆ. ಪಾಕಿಸ್ತಾನ ಭವಿಷ್ಯದಲ್ಲಿ ಅತ್ಯಂತ ಮಹತ್ವದ ದೇಶವಾಗಲಿದೆ ಎಂಬ ನಂಬಿಕೆ ನಮಗಿದೆ. ನಾವು ಅದರ ಭಾಗವಾಗಲು ಬಯಸುತ್ತೇವೆ. ಉತ್ತಮ ನಾಯಕತ್ವದ ವಿಷಯದಲ್ಲೂ ಪಾಕಿಸ್ತಾನ ಮುಂಚೂಣಿಯಲ್ಲಿ ನಿಲ್ಲಲಿದೆ" ಎಂದಿದ್ದರು. ಜೊತೆಗೆ ಪಾಕಿಸ್ತಾನವನ್ನು ಹಾಡಿ ಹೊಗಳಿದ್ದರು. ಸಲ್ಮಾನ್ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರೇ ಕಾರನ್ನು ಚಲಾಯಿಸಿದ ದೃಶ್ಯ ಗಮನ ಸೆಳೆದಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+