ಭಾರತದ ಭಯದಲ್ಲಿ ಪಾಕಿಸ್ತಾನಕ್ಕೆ ನಡುಕ: ಕಾಶ್ಮೀರ ಕೈಬಿಟ್ಟು ಹೊಗುವ ಬಗ್ಗೆ...
ಭಾರತದ ಜೊತೆ ಕಿರಿಕ್ ತೆಗೆಯದೆ ಇದ್ದರೆ ಪಾಕಿಸ್ತಾನಕ್ಕೆ ತಿಂದ ರೋಟಿ ಅರಗುವುದಿಲ್ಲ ಅಂತಾ ಕಾಣುತ್ತದೆ. ಇದೇ ಕಾರಣಕ್ಕೆ ಪದೇ ಪದೇ ಭಾರತದ ಜೊತೆಗೆ ಪಾಪಿ ಪಾಕಿಸ್ತಾನ & ಪಾಕಿಸ್ತಾನ ರಾಜಕಾರಣಿಗಳು ಕಿರಿಕ್ ಮಾಡುತ್ತಾ ಇರುತ್ತಾರೆ ಎಂಬ ಆರೋಪ ಇದೆ. ಹೀಗಿದ್ದಾಗ ತನ್ನಲ್ಲೇ ತಿನ್ನಲು ಅನ್ನ ಇಲ್ಲದೆ ಪರದಾಡುತ್ತಿರುವ ಪಾಪಿ ಪಾಕಿಸ್ತಾನಕ್ಕೆ ಇದೀಗ, ಕಾಶ್ಮೀರ ವಿಚಾರವೇ ಬೇಕಂತೆ. ಅದೂ ವಿಶ್ವಸಂಸ್ಥೆ ಅಂಗಳದಲ್ಲಿ ನಿಂತು ಮಾತನಾಡಿದ್ದಾರೆ ಪಾಕಿಸ್ತಾನ ಪ್ರಧಾನಿ. ಹಾಗಾದ್ರೆ ಏನಂತಾ ಹೇಳಿದ್ರು ಪಾಕಿಸ್ತಾನ ಪ್ರಧಾನಿ? ಏನಿದು ಹೊಸ ಕಿರಿಕ್? ಬನ್ನಿ ತಿಳಿಯೋಣ.
ಪಾಕಿಸ್ತಾನ & ಭಾರತದ ನಡುವೆ ಸ್ವಾತಂತ್ರ್ಯ ಬಂದಾಗಿನಿಂದ ಕೂಡ ಜಮ್ಮು & ಕಾಶ್ಮೀರ ಬಗ್ಗೆ ಕಿರಿಕ್ ನಡೆಯುತ್ತಲೇ ಇದೆ. ಹೀಗಿದ್ದರೂ ಸಮಸ್ಯೆ ಸರಿಯಾಗಿಲ್ಲ. ಅದರಲ್ಲೂ ಜಮ್ಮು & ಕಾಶ್ಮೀರ ವಿಚಾರದಲ್ಲಿ ದಿನದಿಂದ ದಿನಕ್ಕೆ ಸಮಸ್ಯೆ ಏರುತ್ತಲೇ ಇದೆ. ಪರಿಸ್ಥಿತಿ ಇಷ್ಟು ಕಠಿಣವಾಗಿದ್ದರೂ ಸಮಸ್ಯೆ ಮತ್ತಷ್ಟು ಹೆಚ್ಚು ಮಾಡಲು ಪಾಕಿಸ್ತಾನ ಪದೇ ಪದೇ ಪ್ರಯತ್ನ ಮಾಡುತ್ತಿದೆ ಎಂಬ ಆರೋಪ ಇದೆ. ಹೀಗಿದ್ದಾಗ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಕಾಶ್ಮೀರ ವಿಚಾರದಲ್ಲಿ ಮತ್ತೊಮ್ಮೆ ಕಿರಿಕ್ ಮಾಡುವ ಮಾತನ್ನು ಆಡಿದ್ದಾರೆ!

370ನೇ ವಿಧಿಯಡಿ ವಿಶೇಷ ಸ್ಥಾನಮಾನ...
ಭಾರತದ ಸೇನೆಯು ಬಲಿಷ್ಠವಾಗಿದ್ದು, ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ನಡೆಯುವ ಭಯ ಕಾಡುತ್ತಿದೆ ಎಂದು ಖುದ್ದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ವಿಶ್ವಸಂಸ್ಥೆಯಲ್ಲಿ ಹೇಳಿಕೆ ನೀಡಿದ್ದಾರೆ. ಜೊತೆಗೆ, ಜಮ್ಮು & ಕಾಶ್ಮೀರಕ್ಕೆ ಭಾರತ ನೀಡಿದ್ದ 370ನೇ ವಿಧಿಯಡಿ ವಿಶೇಷ ಸ್ಥಾನಮಾನವನ್ನ ಮತ್ತೆ ನೀಡಬೇಕು ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿಕೆ ನೀಡಿರುವುದು ಭಾರತವನ್ನು ಕೆರಳಿಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 79ನೇ ಅಧಿವೇಶನದಲ್ಲಿ ಇಂತಹ ಹೇಳಿಕೆ ನೀಡಿರುವ ಪ್ರಧಾನಿ ಶೆಹಬಾಜ್ ಷರೀಫ್ ನಡೆಗೆ ಮತ್ತೊಮ್ಮೆ ಭಾರಿ ವಿರೋಧ ವ್ಯಕ್ತವಾಗಿದೆ.
ಪ್ಯಾಲೆಸ್ತೀನ್ ವಿಚಾರ ಪ್ರಸ್ತಾಪ!
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಇದೇ ವೇಳೆ ಮತ್ತೊಂದು ಬೆಂಕಿ ಹಚ್ಚುವ ಕೆಲಸ ಮಾಡಿದ್ದು, ಜಮ್ಮು & ಕಾಶ್ಮೀರವನ್ನು ಇದೀಗ ಪ್ಯಾಲೆಸ್ತೀನ್ ಪರಿಸ್ಥಿತಿಗೆ ಹೋಲಿಕೆ ಮಾಡಿದ್ದು ಆಕ್ರೋಶ ಹೆಚ್ಚಾಗುವಂತೆ ಮಾಡಿದೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿಕೆ ನೀಡಿದಂತೆ, ಪ್ಯಾಲೆಸ್ತೀನ್ ಪ್ರಜೆಗಳ ರೀತಿಯಲ್ಲೇ ಜಮ್ಮು ಮತ್ತು ಕಾಶ್ಮೀರದ ಜನರು ಹಲವಾರು ವರ್ಷಗಳಿಂದ ಸ್ವಾತಂತ್ರ್ಯ & ಹಕ್ಕುಗಳಿಗೆ ಹೋರಾಟ ನಡೆಸುವಂತಾಗಿದೆ ಎಂದು ಆರೋಪ ಮಾಡಿದ್ದಾರೆ ಪಾಕ್ ಪ್ರಧಾನಿ.
ಇಷ್ಟಕ್ಕೇ ಸುಮ್ಮನಾಗದ ಪಾಕಿಸ್ತಾನ ಪ್ರಧಾನಿ, ಜಮ್ಮು & ಕಾಶ್ಮೀರಕ್ಕೆ ಭಾರತ ನೀಡಿದ್ದ 370ನೇ ವಿಧಿಯಡಿ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದು ಕಾನೂನು ಬಾಹಿರ ನಿರ್ಧಾರ ಎಂದಿರುವ ಶೆಹಬಾಜ್ ಷರೀಫ್ ಮಾತಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಅದೆಷ್ಟು ಬಾರಿ ಈ ವಿಚಾರದಲ್ಲಿ ಭಾರತ ತಿರುಗೇಟು ನೀಡಿದರೂ ಮತ್ತೆ ಮತ್ತೆ ಪಾಕಿಸ್ತಾನ ಜಮ್ಮು & ಕಾಶ್ಮೀರ ವಿಚಾರಕ್ಕೆ ಕಿರಿಕ್ ಮಾಡುತ್ತಲೇ ಇದೆ. ಹೀಗಾಗಿ ಮತ್ತೊಮ್ಮೆ ಆರ್ಥಿಕವಾಗಿ ದಿವಾಳಿಯಾಗಿ ಬೀದಿಗೆ ಬಿದ್ದಿರುವ ಈ ಪಾಕಿಸ್ತಾನ ವಿವಾದ ಮೈಮೇಲೆ ಎಳೆದುಕೊಂಡಂತೆ ಆಗಿದೆ.












Click it and Unblock the Notifications