ಪುಸ್ತಕವೊಂದರಲ್ಲಿ ಪಾಕ್ ಪ್ರಧಾನಿ ಷರೀಫ್ ವಿರುದ್ದ ಸ್ಫೋಟಕ ಆರೋಪ

Posted By:
Subscribe to Oneindia Kannada

ಭಯೋತ್ಪಾದಕರಿಗೆ ಪಾಕಿಸ್ತಾನವೇ ಸುರಕ್ಷಿತ ತಾಣ, ಭಾರತದ ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂ ಸೇರಿದಂತೆ ಹಲವು ಉಗ್ರರಿಗೆ ಪಾಕ್ ಆಶ್ರಯ ನೀಡಿರುವುದು ಊರಿಗೆಲ್ಲಾ ಗೊತ್ತಿರುವ ವಿಚಾರ.

ಈಗ ಪಾಕಿಸ್ತಾನದ ಪ್ರಧಾನಿಗೆ ವಿಶ್ವವನ್ನೇ ನಡುಗಿಸಿದ್ದ ಉಗ್ರನೊಂದಿಗೆ ನಂಟಿತ್ತು ಎನ್ನುವ ಸ್ಫೋಟಕ ವಿಷಯವೊಂದು 'ಖಾಲಿದ್ ಖವಾಜಾ' ಎನ್ನುವ ಪುಸ್ತಕದಲ್ಲಿ ಬಹಿರಂಗಗೊಂಡಿದೆ.

ಪಾಕಿಸ್ತಾನದ ಹಾಲಿ ಪ್ರಧಾನಿ ನವಾಜ್ ಷರೀಫ್, ಅಲ್ ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ ಜೊತೆಗೆ ನಂಟು ಹೊಂದಿದ್ದರು.

ಜೊತೆಗೆ, ಲಾಡೆನ್ ಪಾಕ್ ಪ್ರಧಾನಿ ನವಾಜ್ ಷರೀಫ್ ಗೆ ಆರ್ಥಿಕ ಸಹಾಯ ಮಾಡಿದ್ದರು ಎಂದು ಪುಸ್ತಕದಲ್ಲಿ ಬರೆದಿದ್ದ ಅಂಶವನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ಅಂತರ್ಜಾಲ ವರದಿ ಮಾಡಿದೆ. (ಭಾರತದಲ್ಲಿ ಆಡಲು ಪಾಕಿಸ್ತಾನಕ್ಕೆ ಅಡ್ಡಿ ಇಲ್ಲ)

26 ವರ್ಷದ ಹಿಂದೆ ನಡೆದ ವಿದ್ಯಮಾನವನ್ನು ಖಾಲಿದ್ ಖವಾಜಾ ಪುಸ್ತಕದಲ್ಲಿ ಪ್ರಸ್ತಾವಿಸಲಾಗಿದೆ. 1990ರಲ್ಲಿ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯ ವೇಳೆ ಷರೀಪ್, ಲಾಡೆನ್ ನಿಂದ ಆರ್ಥಿಕ ಸಹಾಯ ಪಡೆದಿದ್ದರು ಎಂದು ಪುಸ್ತಕದಲ್ಲಿ ಹೇಳಲಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ಕಿಸಿ

ಖಾಲಿದ್ ಖವಾಜಾ - ಶಹೀದ್ ಈ ಅಮನ್

ಖಾಲಿದ್ ಖವಾಜಾ - ಶಹೀದ್ ಈ ಅಮನ್

ಷಮನಾ ಖಲೀದ್ ಲೇಖಕರಾಗಿರುವ 'ಖಾಲಿದ್ ಖವಾಜಾ - ಶಹೀದ್ ಈ ಅಮನ್' ಪುಸ್ತಕದಲ್ಲಿ ಲಾಡೆನ್ - ಷರೀಫ್ ನಡುವಿನ ಸಂಬಂಧದ ಸ್ಫೋಟಕ ಸಂಗತಿ ಬಹಿರಂಗವಾಗಿದೆ. ಷಮನಾ, ಐಎಸ್ಐ ಸಂಘಟನೆಯ ಖಾಲಿದ್ ಖವಾಜಾನ ಪತ್ನಿ.

ನವಾಜ್ ಷರೀಫ್ ಭರವಸೆ

ನವಾಜ್ ಷರೀಫ್ ಭರವಸೆ

ಇಸ್ಲಾಂ ಸಂಸ್ಕೃತಿಯನ್ನು ಪಾಕಿಸ್ತಾನದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರುತ್ತೇನೆ ಎನ್ನುವ ನವಾಜ್ ಷರೀಫ್ ಭರವಸೆಯಿಂದ ಖಾಲಿದ್ ಖವಾಜಾ ಮತ್ತು ಒಸಾಮ ಬಿನ್ ಲಾಡೆನ್ ಇಬ್ಬರೂ ಆಕರ್ಷಿತರಾಗಿದ್ದರು.

ಪಾಕಿಸ್ತಾನದ ದೈನಿಕ ಡಾನ್ ಪತ್ರಿಕೆ

ಪಾಕಿಸ್ತಾನದ ದೈನಿಕ ಡಾನ್ ಪತ್ರಿಕೆ

ಬೇನಜಿರ್ ಭುಟ್ಟೋ ನೇತೃತ್ವದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ವಿರುದ್ದ ಚುನಾವಣೆಯಲ್ಲಿ ಸ್ಪರ್ಧಿಸಲು ನವಾಜ್ ಷರೀಪ್ ಭಾರೀ ಪ್ರಮಾಣದಲ್ಲಿ ಲಾಡೆನ್ ನಿಂದ ಹಣ ಪಡೆದಿದ್ದರು. ಆದರೆ, ತಾನು ನೀಡಿದ್ದ ಭರವಸೆಯನ್ನು ಷರೀಫ್ ಈಡೇರಿಸಲಿಲ್ಲ ಎಂದು ಪಾಕಿಸ್ತಾನದ ದೈನಿಕ 'ಡಾನ್' ಕೂಡಾ ವರದಿ ಮಾಡಿದೆ.

ಖವಾಜಾ ಮತ್ತು ಷರೀಫ್ ನಡುವೆ ಭಾರೀ ಒಡನಾಟ

ಖವಾಜಾ ಮತ್ತು ಷರೀಫ್ ನಡುವೆ ಭಾರೀ ಒಡನಾಟ

ಖವಾಜಾ ಮತ್ತು ಷರೀಫ್ ನಡುವೆ ಒಂದು ಹಂತದಲ್ಲಿ ಭಾರೀ ಒಡನಾಟವಿತ್ತು ಎನ್ನುವ ಮಾಜಿ ಐಎಸ್ಐ ಡೈರೆಕ್ಟರ್ ಜನರಲ್ ಲೆ. ಜ. ಹಮೀದ್ ಗುಲ್ ಅವರ ಹೇಳಿಕೆಯನ್ನು ಕೂಡಾ ಪುಸ್ತಕದಲ್ಲಿ ಪ್ರಸ್ತಾವಿಸಲಾಗಿದೆ. ಖಾಲಿದ್ ಖವಾಜಾನನ್ನು ಒಸಾಮ ಬಿನ್ ಲಾಡೆನ್ ಗೆ ಪರಿಚಯಿಸಿದ್ದು, ಪ್ಯಾಲೇಸ್ತೇನ್ ಜಿಹಾದಿ ಮುಖಂಡ ಮತ್ತು ಲಾಡೆನ್ ಮಾರ್ಗದರ್ಶಿ ಸುನ್ನಿ ಅಬ್ದುಲ್ ಅಜಾಂ ಎಂದು ಪುಸ್ತಕದಲ್ಲಿ ಹೇಳಲಾಗಿದೆ.

ಒಸಾಮ ಬಿನ್ ಲಾಡೆನ್ ಹತ್ಯೆ

ಒಸಾಮ ಬಿನ್ ಲಾಡೆನ್ ಹತ್ಯೆ

ಶಾಂತಿ ಸಂಧಾನಕ್ಕೆ ಹೋಗುತ್ತಿದ್ದ ಖವಾಜಾನನ್ನು ಪಾಕಿಸ್ತಾನೀ ತಾಲಿಬಾನಿಗಳು ಸಾಯಿಸಿದ್ದರೆ, ಅಮೆರಿಕಾ ಪಡೆಗಳು 2011ರ ಮಧ್ಯರಾತ್ರಿ ಒಸಾಮ ಬಿನ್ ಲಾಡೆನ್ ನನ್ನು ಅಬೋಟ್ಟಾಬಾದ್ ನಲ್ಲಿ ಹತ್ಯೆಗೈದಿದ್ದವು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Pakistani Prime Minister Nawaz Sharif received money from Al-Qaida chief Osama bin Laden to contest elections against Benazir Bhutto-led PPP in 1990, a new book has claimed.
Please Wait while comments are loading...