• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕ ಅಧ್ಯಕ್ಷರಿಗೆ ನಮಗಿಂತ ಸ್ನೇಹಿತರು ಸಿಗ್ತಾರಾ ಎಂದ ಇಮ್ರಾನ್ ಖಾನ್

|
   ಅಮೆರಿಕ ಅಧ್ಯಕ್ಷರಿಗೆ ನಮಗಿಂತ ಸ್ನೇಹಿತರು ಸಿಗ್ತಾರಾ ಎಂದ ಇಮ್ರಾನ್ ಖಾನ್..! | Oneindia Kannada

   ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೆಂಡ ಕಾರಿದ್ದಾರೆ. "ಅಮೆರಿಕದಿಂದ ಬಿಲಿಯನ್ ಗಟ್ಟಲೆ ಡಾಲರ್ ಗಳನ್ನು ದಕ್ಷಿಣ ಏಷ್ಯಾದ ರಾಷ್ಟ್ರಗಳಿಗೆ ನೆರವು ನೀಡಲಾಗಿದೆ. ಪ್ರತಿಯಾಗಿ ಪಾಕಿಸ್ತಾನ ಏನನ್ನೂ ಮಾಡಿಲ್ಲ" ಎಂದು ಟ್ರಂಪ್ ನೀಡಿದ್ದ ಹೇಳಿಕೆಗೆ ಇಮ್ರಾನ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ಈ ತಿಕ್ಕಾಟದಿಂದಾಗಿ ವಾಷಿಂಗ್ಟನ್ ಮತ್ತು ಇಸ್ಲಾಮ್ ಬಾದ್ ನ ಮಧ್ಯದ ಸಂಬಂಧ ಮತ್ತಷ್ಟು ಹಾಳಾದಂತೆ ಆಗಿದೆ. ಅಫ್ಘಾನಿಸ್ತಾನದಲ್ಲಿ ಯುದ್ಧ ಹಾಗೂ ಇಸ್ಲಾಮಿಕ್ ಭಯೋತ್ಪಾದಕರಿಗೆ ಪಾಕಿಸ್ತಾನ ನೀಡುತ್ತಿರುವ ಬೆಂಬಲದ ವಿಚಾರವಾಗಿ ಪದೇಪದೇ ಚಕಮಕಿ ಆಗುತ್ತಿದೆ.

   ಕಳೆದ ಆಗಸ್ಟ್ ನಲ್ಲಿ ಪಾಕ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಇಮ್ರಾನ್ ಖಾನ್, ಅಮೆರಿಕ ವಿರೋಧಿ ಧೋರಣೆ ಮುಂದುವರಿಸಿದ್ದಾರೆ. ಟ್ರಂಪ್ ಪಾಕಿಸ್ತಾನ ವಿರುದ್ಧ ಮಾಡುತ್ತಿರುವ ಆರೋಪಕ್ಕೆ ದಾಖಲೆ ನೀಡಬೇಕು ಎಂದು ಹೇಳಿದ್ದಾರೆ.

   ನಾಲ್ಕು ಪ್ರಾಂತ್ಯವನ್ನೇ ನಿಭಾಯಿಸಲಾಗುತ್ತಿಲ್ಲ, ಕಾಶ್ಮೀರ ಬೇಕೇ?: ಅಫ್ರಿದಿ ಪ್ರಶ್ನೆ

   ಇಸ್ಲಾಮಾಬಾದ್ ಗೆ ನೀಡುತ್ತಿದ್ದ ನೆರವು ಕಡಿತಗೊಳಿಸಿದ ವಿಚಾರವನ್ನು ಭಾನುವಾರ ಟಿ.ವಿ. ಸಂದರ್ಶನವೊಂದರಲ್ಲಿ ಸಮರ್ಥಿಸಿಕೊಂಡ ಟ್ರಂಪ್, 2011ರಲ್ಲಿ ಪಾಕಿಸ್ತಾನದೊಳಗೇ ಒಸಾಮ ಬಿನ್ ಲಾಡೆನ್ ನನ್ನು ಅಮೆರಿಕ ಸೇನೆ ಕೊಲ್ಲುವ ಮುನ್ನವೇ ಆ ದೇಶಕ್ಕೆ ಆತ ಅಲ್ಲಿರುವುದು ಗೊತ್ತಿತ್ತು ಎಂದಿದ್ದಾರೆ.

   $ 1 ಟ್ರಿಲಿಯನ್ ಖರ್ಚಿನ ನಂತರವೂ ತಾಲಿಬಾನ್ ಬಲಿಷ್ಠವಾಗಿದೆ

   $ 1 ಟ್ರಿಲಿಯನ್ ಖರ್ಚಿನ ನಂತರವೂ ತಾಲಿಬಾನ್ ಬಲಿಷ್ಠವಾಗಿದೆ

   ಅಮೆರಿಕ ಬೆಂಬಲಿತ ಸೇನೆ ವಿರುದ್ಧ ಕಾದಾಡಲು ಅಫ್ಘನ್ ಬೆಂಬಲಿತ ತಾಲಿಬಾನ್ ಒಳನುಸುಳುಕೋರರಿಗೆ ಬೆಂಬಲ ನೀಡಲಾಗುತ್ತಿದೆ ಎಂಬ ಆರೋಪವನ್ನು ಪಾಕಿಸ್ತಾನ ನಿರಾಕರಿಸಿದೆ. ಜತೆಗೆ ಪಾಕ್ ಅಧಿಕಾರಿಗಳು ಒಸಾಮ ಬಿನ್ ಲಾಡೆನ್ ಗೆ ನೆರವು ನೀಡುತ್ತಿದ್ದರು ಎಂಬುದನ್ನು ಕೂಡ ನಿರಾಕರಿಸುತ್ತಲೇ ಬಂದಿದೆ. ಪಾಕಿಸ್ತಾನವನ್ನು ಬಲಿಪಶುವಾಗಿ ಮಾಡಲಾಗುತ್ತಿದೆ. 1,40,000 ನ್ಯಾಟೋ ಪಡೆ, ಜತೆಗೆ 2,50,000 ಅಫ್ಘನ್ ಪಡೆ ಮತ್ತು ವರದಿ ಹೇಳುವಂತೆ $ 1 ಟ್ರಿಲಿಯನ್ ಖರ್ಚು ಅಫ್ಘನ್ ಯುದ್ಧಕಾಗಿಯೇ ಮಾಡಿದ ನಂತರವೂ ಇಂದು ತಾಲಿಬಾನ್ ಹಿಂದಿಗಿಂತ ಹೆಚ್ಚು ಬಲಿಷ್ಠವಾಗಿದೆ. ಆದ್ದರಿಂದ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಅಮೆರಿಕ ಹೀಗೆ ಮಾಡುತ್ತಿದೆ. ತನ್ನ ಕೆಲಸದ ಬಗ್ಗೆ ಗಂಭೀರ ಮೌಲ್ಯಮಾಪನ ಮಾಡಿಲ್ಲ ಎಂದಿದ್ದಾರೆ.

   ಪ್ರತಿ ವರ್ಷ $ 1.3 ಬಿಲಿಯನ್ ನೀಡಿದ್ದೇವೆ

   ಪ್ರತಿ ವರ್ಷ $ 1.3 ಬಿಲಿಯನ್ ನೀಡಿದ್ದೇವೆ

   ಪಾಕಿಸ್ತಾನದಲ್ಲಿ ತುಂಬ ಸೊಗಸಾದ ಬಂಗಲೆಯೊಂದರಲ್ಲಿ ಬಿನ್ ಲಾಡೆನ್ ಇದ್ದ. ಅದೂ ಮಿಲಿಟರಿ ಸೇನಾ ಅಕಾಡೆಮಿ ಹತ್ತಿರವೇ ಆ ಬಂಗಲೆ ಇತ್ತು ಮತ್ತು "ಆತ ಅಲ್ಲಿದ್ದ ಎಂಬುದು ಪಾಕಿಸ್ತಾನದ ಎಲ್ಲರಿಗೂ ಗೊತ್ತಿತ್ತು" ಎಂದು ಟ್ರಂಪ್ ಹೇಳಿದ್ದಾರೆ. ಪಾಕಿಸ್ತಾನಕ್ಕೆ ಪ್ರತಿ ವರ್ಷ $ 1.3 ಬಿಲಿಯನ್ ನೀಡಿದ್ದೇವೆ. ಬಿನ್ ಲಾಡೆನ್ ಪಾಕಿಸ್ತಾನದಲ್ಲೇ ಇದ್ದ. ನಾವು ಆ ದೇಶವನ್ನು ಬೆಂಬಲಿಸುತ್ತೇವೆ. ಪ್ರತಿ ವರ್ಷ $ 1.3 ಬಿಲಿಯನ್ ನೀಡಿದ್ದೇವೆ. ಇನ್ನು ಮುಂದೆ ಅದನ್ನು ನೀಡಿಲ್ಲ. ನಮಗೆ ಏನೂ ಮಾಡದ ಕಾರಣಕ್ಕೆ ಅದನ್ನು ನಿಲ್ಲಿಸಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.

   9/11 ಘಟನೆಯಲ್ಲಿ ಯಾವುದೇ ಪಾಕಿಸ್ತಾನಿ ಭಾಗವಹಿಸಿಲ್ಲ

   9/11 ಘಟನೆಯಲ್ಲಿ ಯಾವುದೇ ಪಾಕಿಸ್ತಾನಿ ಭಾಗವಹಿಸಿಲ್ಲ

   ಭಯೋತ್ಪಾದನೆ ವಿರುದ್ಧದ ಯುದ್ಧ ಮಾಡುತ್ತಾ ಅಮೆರಿಕ ಕೈಗೊಂಡ ಕ್ರಮಗಳಿಂದ ಅಫ್ಘನಿಸ್ತಾನ-ಪಾಕಿಸ್ತಾನ ಬುಡಕಟ್ಟು ಪ್ರದೇಶಗಳಲ್ಲಿ ಭಾರೀ ಅನಾಹುತ ಆಗಿದೆ ಎಂದು ಖಾನ್ ಹೇಳಿದ್ದು, 9/11 ಘಟನೆಯಲ್ಲಿ ಯಾವುದೇ ಪಾಕಿಸ್ತಾನಿ ಭಾಗವಹಿಸಿಲ್ಲ. ಆದರೂ ಭಯೋತ್ಪಾದನೆ ವಿರುದ್ಧ ಯುದ್ಧದಲ್ಲಿ ಅಮೆರಿಕದ ಜತೆ ನಾವು ಕೈ ಜೋಡಿಸಿದೆವು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

   ಪಾಕಿಸ್ತಾನದ 75 ಸಾವಿರ ಮಂದಿ ಗಾಯಾಳುಗಳು

   ಪಾಕಿಸ್ತಾನದ 75 ಸಾವಿರ ಮಂದಿ ಗಾಯಾಳುಗಳು

   ಭಯೋತ್ಪಾದನೆ ವಿರುದ್ಧ ಯುದ್ಧದಲ್ಲಿ ಪಾಕಿಸ್ತಾನದ 75 ಸಾವಿರ ಮಂದಿ ಗಾಯಾಳುಗಳಾಗಿದ್ದಾರೆ. $ 123 ಬಿಲಿಯನ್ ಗೂ ಹೆಚ್ಚು ಮೊತ್ತ ನಮ್ಮ ಆರ್ಥಿಕತೆಗೆ ನಷ್ಟವಾಗಿದೆ. ಆದರೂ ಅಫ್ಘನಿಸ್ತಾನದಲ್ಲಿ ಇರುವ ಅಮೆರಿಕದ 10 ಸಾವಿರ ಬಲದ ಸೇನೆಗಾಗಿ ವಾಯು ಮಾರ್ಗ ಮತ್ತು ರಸ್ತೆ ಮಾರ್ಗವನ್ನು ಪಾಕಿಸ್ತಾನ ತೆರೆದಿಟ್ಟಿದೆ ಎಂದು ‌ಇಮ್ರಾನ್ ಖಾನ್ ಹೇಳಿದ್ದಾರೆ. "ಇಂಥ ತ್ಯಾಗ ಮಾಡುವ ಮತ್ತೊಂದು ದೇಶ ಟ್ರಂಪ್ ಅವರಿಗೆ ಸಿಗಲು ಸಾಧ್ಯವೆ?" ಎಂದಿದ್ದಾರೆ.

   English summary
   Pakistani Prime Minister Imran Khan on Monday lashed out at US President Donald Trump following his remarks that Pakistan doesn’t “do a damn thing” for the United States despite billions of dollars in US aid for the South Asian nation.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X