ಪಾಕಿಸ್ತಾನದ ಅಣು ಬಾಂಬ್ ಪಿತಾಮಹ ಡಾ. ಖಾನ್ ಇನ್ನಿಲ್ಲ
ಇಸ್ಲಾಮಾಬಾದ್, ಅಕ್ಟೋಬರ್ 10: ಪಾಕಿಸ್ತಾನದ ಅಣು ಬಾಂಬ್ ಪಿತಾಮಹ ಎಂದೇ ಖ್ಯಾತರಾಗಿದ್ದ ವಿಜ್ಞಾನಿ ಅಬ್ದುಲ್ ಖಾದರ್ ಖಾನ್ ನಿಧನರಾಗಿದ್ದಾರೆ ಎಂದು ಜಿಯೋ ಟಿವಿ ವರದಿ ಮಾಡಿದೆ.
ಮುಸ್ಲಿಂ ರಾಷ್ಟ್ರಗಳು ಮೊದಲ ಬಾರಿಗೆ ಅಣು ಬಾಂಬ್ ಹೊಂದುವ ಸಾಧ್ಯತೆಯನ್ನು ನಿಜವಾಗಿಸಿದ್ದು ಡಾ. ಎಕ್ಯೂ ಖಾನ್ ಎನ್ನಬಹುದು. ಶನಿವಾರ ರಾತ್ರಿ ಖಾನ್ ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದರಿಂದ ಅವರನ್ನು ಕೆಆರ್ ಎಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು,ಶ್ವಾಸಕೋಶದಲ್ಲಿ ಸಮಸ್ಯೆ ಉಂಟಾಗಿ, ರಕ್ತಸ್ರಾವವಾಗುತ್ತಿತ್ತು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ವೈದ್ಯರು ತಿಳಿಸಿದ್ದಾರೆ. ಇಸ್ಲಾಮಾಬಾದ್ ಫೈಸಲ್ ಮಸೀದಿಯಲ್ಲಿ ಸರ್ಕಾರಿ ಗೌರವದೊಂದಿಗೆ ಅಂತಿಮ ವಿಧಿವಿಧಾನಗಳು ನೆರವೇರಲಿದೆ.
ಲಾಡೆನ್ ಗೆ ಅಣ್ವಸ್ತ್ರ ಮಾರಲು ಮುಂದಾಗಿದ್ದ ಖಾನ್?
ಒಸಾಮಾ ಬಿನ್ ಲಾಡೆನ್ ಅಣ್ವಸ್ತ್ರ ಖರೀದಿಸಲು ಆಸಕ್ತಿ ಹೊಂದಿದ್ದ. ಆದರೆ ನಂತರ ಆತ ಇದ್ದಕ್ಕಿದ್ದಂತೆಯೇ ಸಂಗಡಿರೊಂದಿಗೆ ಅಫ್ಘಾನಿಸ್ತಾನದ ವಾಯುವ್ಯ ಪ್ರಾಂತ್ಯದ ತಪ್ಪಲಿಗೆ ತೆರಳಿದ್ದರಿಂದ ವ್ಯವಹಾರ ಕುದುರಲಿಲ್ಲ, ನಂತರ ಖಾನ್ ಅವರು ಆತನನ್ನು ಭೇಟಿ ಮಾಡಲಿಲ್ಲ ಎಂದು ಖಾನ್ ಅವರ ಕುರಿತ ಆತ್ಮಚರಿತ್ರೆ 'ದಿ ಮ್ಯಾನ್ ಫ್ರಮ್ ಪಾಕಿಸ್ತಾನ'ದಲ್ಲಿ ಬರೆಯಲಾಗಿದೆ. ಈ ಪುಸ್ತಕ ಬರೆದಿರುವ ಡಗ್ಲಾಸ್ ಫ್ರಾಂಜ್ ಹಾಗೂ ಕ್ಯಾಥರೀನ್ ಕೂಲಿನ್ಸ್ ಪ್ರಕಾರ, ಎ ಕ್ಯೂ ಖಾನ್ ಅವರ ಸಹ ಉದ್ಯೋಗಿಗಳಾದ ಚೌಧರಿ ಅಬ್ಧುಲ್ ಮಜೀದ್ ಹಾಗೂ ಸುಲ್ತಾನ್ ಬಶೀರುದ್ದೀನ್ ಇಬ್ಬರು 2001 ರ ಅಗಸ್ಟ್ ಮಧ್ಯಭಾಗದಲ್ಲಿ ಕಂದಹಾರ್ನಲ್ಲಿ ಬಿನ್ ಲಾಡೆನ್ ಜತೆ ಮೂರು ದಿನ ಕಳೆದಿದ್ದರು.

ಭಾರತದ ಭೋಪಾಲ್ ನಲ್ಲಿ 1936ರ ಏಪ್ರಿಲ್ 1ರಂದು ಜನಿಸಿದ ಡಾ. ಅಬ್ದುಲ್ ಖಾದರ್ ಖಾನ್ ಅವರು ಪಾಕಿಸ್ತಾನ ಅಣು ವಿಜ್ಞಾನಿಯಾಗಿ ಬೆಳೆದರು. 1947ರಲ್ಲಿ ದೇಶ ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋದ ಕುಟುಂಬದ ಪೈಕಿ ಖಾನ್ ಅವರ ಕುಟುಂಬವೂ ಸೇರಿತ್ತು. 1967ರಲ್ಲಿ ನೆದರ್ಲೆಂಡ್ ದೇಶದಲ್ಲಿ ಪದವಿ ಪಡೆದ ಖಾನ್ ನಂತರ ಮೆಟಲರ್ಜಿಯಲ್ಲಿ ಪದವಿಯನ್ನು ಬೆಲ್ಜಿಯಂನಲ್ಲಿ ಪಡೆದುಕೊಂಡರು.
انا للّٰہ وانا الیہ راجعون
— Dr. Arif Alvi (@ArifAlvi) October 10, 2021
Deeply saddened to learn about the passing of Dr. Abdul Qadeer Khan. Had known him personally since 1982.
He helped us develop nation-saving nuclear deterrence, and a grateful nation will never forget his services in this regard. May Allah bless him.
ಪಾಕಿಸ್ತಾನದ ಉನ್ನತ ನಾಗರಿಕ ಪ್ರಶಸ್ತಿ ಗಳಿಸಿದ ಮೊದಲ ವಿಜ್ಞಾನಿ ಎನಿಸಿಕೊಂಡರು. ರಾಷ್ಟ್ರಪತಿಗಳಿಂದ ನಿಶಾನ್ ಎ ಇಮ್ತಿಯಾಜ್ ಪುರಸ್ಕಾರ ಎರಡು ಬಾರಿ ಪಡೆದುಕೊಂಡರು. ಹಿಲಾಲ್ ಎ ಇಮ್ತಿಯಾಜ್ ಒಮ್ಮೆ ಗಳಿಸಿದರು. ಭಾರತದ ಅಣು ವಿಜ್ಞಾನಿ ಡಾ. ಅಬ್ದುಲ್ ಕಲಾಂ ಓರ್ವ ಸಾಧಾರಣ ವಿಜ್ಞಾನಿ ಎಂದು ಹೇಳಿಕೆ ನೀಡಿ ವಿವಾದಕ್ಕೆ ನಾಂದಿ ಹಾಡಿದ್ದರು.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications