ಕಾಮಿಡಿ.. ಕಾಮಿಡಿ.. ಕಾಮಿಡಿ ಮಾಡಿದ ಪಾಪಿ ಪಾಕಿಸ್ತಾನ, ಡೊನಾಲ್ಡ್ ಟ್ರಂಪ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ... Donald Trump
ಡೊನಾಲ್ಡ್ ಟ್ರಂಪ್ ಕಾಲ ಕೆಳಗೆ ಬಿದ್ದು ಒದ್ದಾಡುತ್ತಿರುವ ಪಾಪಿ ಪಾಕಿಸ್ತಾನ ದಿನಕ್ಕೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಾ, ಅಮೆರಿಕ ನೀಡುವ ಎಂಜಲು ಕಾಸಿಗಾಗಿ ಸಾಯುತ್ತಿದೆ. ಅದರಲ್ಲೂ ಭಾರತದ ವಿರುದ್ಧ ಪಾಪಿ ಉಗ್ರರನ್ನು ಛೂ ಬಿಟ್ಟು ಆಟ ನೋಡಿದ್ದಕ್ಕೆ ಪಾಕಿಸ್ತಾನಕ್ಕೆ ಈಗಾಗಲೇ ಭಾರತೀಯ ಸೇನೆ ಸರಿಯಾಗಿ ಪಾಠ ಕಲಿಸಿದೆ. ಯುದ್ಧ ಎಂಬ ಬೆಂಕಿಗೆ ಸಿಲುಕಿ ವಿಲವಿಲ ಒದ್ದಾಡಿದ್ದ ಪಾಪಿ ಪಾಕಿಸ್ತಾನ ಕೊನೆಗೆ ಅಮೆರಿಕದ ಕಾಲು ಹಿಡಿದು ಬೃಹತ್ ಸಂಕಷ್ಟದಿಂದ ಪಾರಾಗಿತ್ತು. ಇಂತಹ ಸಮಯದಲ್ಲೇ ಕಾಮಿಡಿ ಮಾಡಿರುವ ಪಾಪಿ ಪಾಕಿಸ್ತಾನ, ಡೊನಾಲ್ಡ್ ಟ್ರಂಪ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ ಕೊಡಿಸುತ್ತಂತೆ!
ಡೊನಾಲ್ಡ್ ಟ್ರಂಪ್ ತಮ್ಮ ಅಧಿಕಾರದ ಜೊತೆಗೆ ವಿವಾದ ಇಟ್ಟುಕೊಂಡು ಬಂದಿದ್ದಾರೆ ಅಂತಾ ಕಾಣುತ್ತದೆ. ಯಾಕಂದ್ರೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಡೊನಾಲ್ಡ್ ಟ್ರಂಪ್ ನೂರಾರು ವಿವಾದ ಸೃಷ್ಟಿಸಿದ್ದು, ಸಾಲು ಸಾಲು ಸಮಸ್ಯೆ ಅಮೆರಿಕಗೆ ಎದುರಾಗುವಂತೆ ಮಾಡಿದ್ದಾರೆ ಅನ್ನೋ ಆರೋಪ ಕೂಡ ಕೇಳಿ ಬರುತ್ತಿದೆ. ಅದರಲ್ಲೂ ಜಗತ್ತಿನ ದೊಡ್ಡಣ್ಣ ಅಂತಾ ಕರೆಸಿಕೊಳ್ಳುವ ಅಮೆರಿಕದ ಮರ್ಯಾದಿ ಹಿಂಗೆಲ್ಲಾ ಹೋಗಲು, ಅಮೆರಿಕ ಜಗತ್ತಿನ ಎದುರು ತಲೆ ತಗ್ಗಿಸುವ ಹಲವು ಪರಿಸ್ಥಿತಿ ಸೃಷ್ಟಿಯಾಗಲು ಡೊನಾಲ್ಡ್ ಟ್ರಂಪ್ ಕಾರಣ ಅನ್ನೋ ಆರೋಪ ಕೂಡ ಇದೆ.

ಡೊನಾಲ್ಡ್ ಟ್ರಂಪ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ?
ನೂರಾರು ವಿವಾದಗಳ ಸರದಾರ ಡೊನಾಲ್ಡ್ ಟ್ರಂಪ್, ಇದೇ ರೀತಿ ಭಾರತ & ಪಾಕಿಸ್ತಾನ ಯುದ್ಧ ನಾನೇ ನಿಲ್ಲಿಸಿದ್ದು ಅಂತಾ ಊರು ತುಂಬಾ ಹೇಳಿಕೊಂಡು ಓಡಾಡುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ಪಾಪಿ ಪಾಕ್ ಕೂಡ ಟ್ರಂಪ್ ಕಾಲು ಹಿಡಿಯಲು ಹೊರಟಿದೆ. ಈ ಮೂಲಕ ಡೊನಾಲ್ಡ್ ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿ ಪಡೆಯಲು ಅರ್ಹರು ಅಂತಾ ಹೇಳುತ್ತಿದೆ ಭಾರತದ ಶತ್ರು ಪಾಪಿ ಪಾಕಿಸ್ತಾನ...
ಕಾಲು ಹಿಡಿಯುತ್ತಿದೆಯಂತೆ ಪಾಪಿ ಪಾಕಿಸ್ತಾನ!
ಹೌದು, ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ಶುರುವಾಗಿದ್ದ ಸಮಯದಲ್ಲಿ ರಾಜತಾಂತ್ರಿಕ ಮಧ್ಯಸ್ಥಿಕೆ ವಹಿಸಿದ್ದಕ್ಕಾಗಿ ಪಾಕಿಸ್ತಾನ ಡೊನಾಲ್ಡ್ ಟ್ರಂಪ್‌ಗೆ ನೊಬೆಲ್ ಪ್ರಶಸ್ತಿ ಕೊಡಿಸಲು ಮುಂದಾಗಿದೆ. ಪಾಕಿಸ್ತಾನ ಸಂಸತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರನ್ನು ಇದೀಗ 2026ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮಿನೇಟ್ ಅಂದ್ರೆ ನಾಮನಿರ್ದೇಶನ ಮಾಡಿದೆ. ಈ ಮೂಲಕ ಬಕೆಟ್ ಹಿಡಿಯುವ ಪಾಪಿ ಪಾಕಿಸ್ತಾನದ ಬುದ್ಧಿ ಮತ್ತೊಮ್ಮೆ ಇಡೀ ಜಗತ್ತಿಗೇ ಗೊತ್ತಾಗಿದೆ. ಭಾರತ & ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದಕ್ಕೆ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗುವುದಿಲ್ಲ ಅಂತಾ ಡೊನಾಲ್ಡ್ ಟ್ರಂಪ್ ಹೇಳಿದ ಬೆನ್ನಲ್ಲೇ, ಪಾಪಿ ಪಾಕಿಸ್ತಾನ ಈ ರೀತಿಯಾಗಿ ಕಾಲು ಹಿಡಿಯುವ ಕೆಲಸ ಮಾಡಿದೆ ಎಂದು ಸೋಷಿಯಲ್ ಮೀಡಿಯಾ ಮಂದಿ ಹೇಳುತ್ತಿದ್ದಾರೆ.












Click it and Unblock the Notifications