ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

|
Google Oneindia Kannada News

ಇಸ್ಲಮಾಬಾದ್, ಮಾರ್ಚ್ 28: ಪಾಕಿಸ್ತಾನದ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ಗಾಳಿ ಬೀಸಿದೆ. ಪ್ರಧಾನಮಂತ್ರಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಪಾಕಿಸ್ತಾನದ ರಾಷ್ಟ್ರೀಯ ಸಂಸತ್ತಿನಲ್ಲಿ ಚರ್ಚೆಗೆ ಮಂಡಿಸಲಾಗಿದೆ.

ದೇಶದಲ್ಲಿನ ಅಸ್ಥಿರ ರಾಜಕೀಯ ಪರಿಸ್ಥಿತಿಯ ನಡುವೆ ಎರಡು ದಿನಗಳ ವಿರಾಮದ ನಂತರ ರಾಷ್ಟ್ರೀಯ ಸಂಸತ್ತಿನಲ್ಲಿ ಸೋಮವಾರ ಮಹತ್ವದ ಬೆಳವಣಿಗೆ ನಡೆಯಿತು. ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಯಿತು.

ಅವಿಶ್ವಾಸ ಮಂಡನೆಯ ಸುಳಿಯಲ್ಲಿ ಪಾಕ್‌ ಪ್ರಧಾನಿ: ರಾಜಕೀಯ ಉಳಿವಿಗಾಗಿ ಒದ್ದಾಟಅವಿಶ್ವಾಸ ಮಂಡನೆಯ ಸುಳಿಯಲ್ಲಿ ಪಾಕ್‌ ಪ್ರಧಾನಿ: ರಾಜಕೀಯ ಉಳಿವಿಗಾಗಿ ಒದ್ದಾಟ

ಪಾಕಿಸ್ತಾನ ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ ವಿರೋಧ ಪಕ್ಷದ ನಾಯಕ ಶಹಬಾಜ್ ಷರೀಫ್, "ನಾನು ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುತ್ತಿದ್ದೇನೆ," ಎಂದು ಹೇಳಿದರು. ವಿಧಾನಸಭೆಯ 161 ಸದಸ್ಯರು ಪಿಎಂ ಖಾನ್ ವಿರುದ್ಧದ ನಿರ್ಣಯದ ಪರವಾಗಿ ಮತ ಚಲಾಯಿಸಿದ್ದು, ಮುಂದಿನ ಅಧಿವೇಶನವು ಮಾರ್ಚ್ 31ರಂದು ಭಾರತೀಯ ಕಾಲಮಾನದ ಪ್ರಕಾರ, ಸಂಜೆ 4:30 ರಿಂದ ಆರಂಭವಾಗಲಿದೆ ಎಂದು ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Pakistan: No-confidence motion against PM Imran Khan tabled in parliament

14 ದಿನಗಳ ಅಧಿವೇಶನ ಕರೆಯಲು ಮನವಿ:

ಕಳೆದ ಮಾರ್ಚ್ 8ರಂದು ಪ್ರತಿಪಕ್ಷಗಳು ರಾಷ್ಟ್ರೀಯ ಸಂಸತ್ತಿಗೆ ಪ್ರಸ್ತಾವನೆ ಸಲ್ಲಿಸಿದ ನಂತರ ಪಾಕಿಸ್ತಾನದಲ್ಲಿ ಅನಿಶ್ಚಿತತೆ ಆವರಿಸಿತು. 14 ದಿನಗಳಲ್ಲಿ ಅಧಿವೇಶನವನ್ನು ಕರೆಯುವಂತೆ ಸ್ಪೀಕರ್‌ಗೆ ವಿನಂತಿ ಮಾಡಿಕೊಳ್ಳಲಾಯಿತು.

ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವಿಶ್ವಾಸ ನಿರ್ಣಯವನ್ನು ಮಾರ್ಚ್ 31 ರೊಳಗೆ ನಿರ್ಧರಿಸಲಾಗುವುದು ಎಂದು ಆಂತರಿಕ ಸಚಿವ ಶೇಖ್ ರಶೀದ್ ಮಾಧ್ಯಮ ಸಂವಾದದ ವೇಳೆ ತಿಳಿಸಿದ್ದರು. ಅಲ್ಲಿಯವರೆಗೂ ಅವರು ಎಲ್ಲಿಯೂ ಹೋಗುವುದಿಲ್ಲ ಎಂದು ಪಿಟಿಐ ವರದಿ ಮಾಡಿತ್ತು. "ಜನರು ಇಮ್ರಾನ್ ಖಾನ್ ರಾಜಕೀಯವು ಅಂಚಿನಲ್ಲಿದೆ ಎಂಬ ಕಲ್ಪನೆಯನ್ನು ದೂರವಿಡಬೇಕು, ವಿಶೇಷವಾಗಿ ಒಂದು ದಿನದ ಹಿಂದೆ ಇಸ್ಲಾಮಾಬಾದ್‌ನಲ್ಲಿ ಅವರ 'ಮಹಾನ್' ಸಮಾವೇಶದ ನಂತರ," ರಶೀದ್ ಅವರು ಖಾನ್ ವಿರುದ್ಧದ ಬೆಳವಣಿಗೆಳು "ಪಾಕಿಸ್ತಾನವನ್ನು ದುರ್ಬಲಗೊಳಿಸುವ ಪಿತೂರಿ" ಎಂದು ದೂಷಿಸಿದರು.

ಪಾಕಿಸ್ತಾನ ಸಂಸತ್ ಲೆಕ್ಕಾಚಾರ ಹೇಗಿದೆ?:

ಪಾಕಿಸ್ತಾನದ ಸಂಸತ್ತಿನಲ್ಲಿ 342 ಸದಸ್ಯ ಬಲದ ಪೈಕಿ ಬಹುಮತಕ್ಕೆ 172 ಸದಸ್ಯರು ಬೆಂಬಲ ಬೇಕಾಗುತ್ತದೆ. ಈ ನಿರ್ಣಯವನ್ನು 172 ಸದಸ್ಯರು ಒಟ್ಟುಗೂಡಿ ಸರ್ಕಾರವನ್ನು ಉರುಳಿಸಲಿದ್ದಾರೆ ಎಂದು ಪ್ರತಿಪಕ್ಷಗಳು ವಿಶ್ವಾಸ ವ್ಯಕ್ತಪಡಿಸಿವೆ.

ಕಳೆದ 2018ರಲ್ಲಿ ಇಮ್ರಾನ್ ಖಾನ್ "ನಯಾ ಪಾಕಿಸ್ತಾನ" ಭರವಸೆಯೊಂದಿಗೆ ಅಧಿಕಾರಕ್ಕೆ ಬಂದರು. ಆದರೆ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಆಡಳಿತ ನಿರ್ವಹಣೆಯಲ್ಲಿ ಅವರು ವಿಫಲವಾದರು. ಪ್ರತಿಪಕ್ಷಗಳು ಅವರ ಸರ್ಕಾರದ ವಿರುದ್ಧ ಸಿಡಿದೆದ್ದವು.

69 ವರ್ಷದ ಇಮ್ರಾನ್ ಖಾನ್ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ್ದಾರೆ. 155 ಸದಸ್ಯರನ್ನು ಹೊಂದಿರುವ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಅಧಿಕಾರದಲ್ಲಿ ಉಳಿಯಲು ಕನಿಷ್ಠ 172 ಶಾಸಕರ ಅಗತ್ಯವಿದೆ. ಈ ಹಂತದಲ್ಲಿ ಯಾವುದೇ ಪಾಲುದಾರರು ಪಕ್ಷವನ್ನು ಬದಲಾಯಿಸಲು ನಿರ್ಧರಿಸಿದರೆ ಅವರನ್ನು ತೆಗೆದುಹಾಕಬಹುದು.

English summary
Pakistan: No-confidence motion against PM Imran Khan tabled in parliament. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X