ರಿವೇಂಜ್ ತೆಗೆದುಕೊಳ್ಳಲು ಮುಂದಾದ ಪಾಕಿಸ್ತಾನ!

ತನ್ನ ವಿರುದ್ಧ ಇರಾನ್ ದಾಳಿ ನಡೆಸಿದ ಬಳಿಕ ಪಾಕಿಸ್ತಾನ ಕುದ್ದು ಹೋಗಿದೆ. ಅದರಲ್ಲೂ, ಈ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲು ಸತತ ಪ್ರಯತ್ನ ಮಾಡುತ್ತಿದೆ ಪಾಕಿಸ್ತಾನ. ಹೀಗೆಯೇ ಇದೀಗ ಇರಾನ್‌ನಲ್ಲಿ ಇರುವ, ಉಗ್ರರ ನೆಲೆ ಮೇಲೆ ಪಾಕ್ ಕ್ಷಿಪಣಿ & ಡ್ರೋನ್ ದಾಳಿ ನಡೆಸಿದೆ. ಈ ಮೂಲಕ ತನ್ನ ವಿರುದ್ಧದ ದಾಳಿಗೆ ಪಾಕಿಸ್ತಾನ ಸೇನೆ, ಇರಾನ್ ವಿರುದ್ಧ ಸೇಡನ್ನು ಕೂಡ ತೀರಿಸಿಕೊಂಡಿದೆ.

ಅಂದಹಾಗೆ ಪಾಕಿಸ್ತಾನ ಒಂದಲ್ಲ ಒಂದು ಎಡವಟ್ಟು ಮಾಡಿಕೊಳ್ಳುತ್ತಾ, ಉಗ್ರರ ಪರವಾಗಿ ನಿಲ್ಲುತ್ತಾ ಸಮಸ್ಯೆ ಎದುರಿಸಿದೆ. ಅದೇ ರೀತಿ ಬಲೂಚಿಸ್ತಾನ ‍ಪ್ರತ್ಯೇಕವಾದಿ ಸಂಘಟನೆಗಳಾದ ಬಲೂಚಿಸ್ತಾನ್‌ ಲಿಬರೇಷನ್ ಫ್ರಂಟ್‌ & ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ಸಂಘಟನೆ ನೆಲೆಗಳ ಮೇಲೆ ಪಾಕಿಸ್ತಾನ ದಾಳಿ ನಡೆಸಿದೆ ಎನ್ನಲಾಗಿದೆ. ಪಾಕಿಸ್ತಾನ ವಿರೋಧಿ ಉಗ್ರ ಸಂಘಟನೆ ಮೇಲೆ ದಾಳಿ ನಡೆಸಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಈ ಮೂಲಕ, ಇರಾನ್ & ಪಾಕ್ ನಡುವೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

Pakistan Military Takes Revenge For Iran Attack

ಪಾಕಿಸ್ತಾನ ದಾಳಿ ನಡೆಸಿದ್ದು ಎಲ್ಲಿ?

ಅಷ್ಟಕ್ಕೂ ಪಾಕಿಸ್ತಾನವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ವಿಚಾರಗಳಿಗೆ ಮರ್ಯಾದಿ ಕಳೆದುಕೊಂಡಿದೆ. ಅದೇ ರೀತಿ ಉಗ್ರ ಪೋಷಕ ಎಂಬ ಪಟ್ಟ ಕೂಡ ಗಳಿಸಿದೆ. ಹೀಗಿದ್ದಾಗಲೆ ಇರಾನ್ ಕೂಡ ದಾಳಿ ನಡೆಸಿದ್ದು ಪಾಕಿಸ್ತಾನಕ್ಕೆ ಕೋಪ ತರಿಸಿದೆ. ಇದೇ ಕಾರಣಕ್ಕೆ ಇದೀಗ, ಸಿಸ್ತಾನ್‌ & ಬಲೂಚಿಸ್ತಾನ ಪ್ರಾಂತ್ಯದ ಹಳ್ಳಿಗಳ ಮೇಲೆ ಮಿಸೈಲ್ ದಾಳಿ ನಡೆದಿದೆಯಂತೆ. ಈಗ ಇರಾನ್‌ ಮಾಧ್ಯಮಗಳು ಈ ಕುರಿತು ವರದಿ ಮಾಡಿವೆ. ದಾಳಿಯಲ್ಲಿ ಮೂವರು ಮಹಿಳೆಯರು ಹಾಗೂ ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ. ಆದರೆ ಯಾರೂ ಇರಾನ್ ಪ್ರಜೆಗಳಲ್ಲ ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನದ ಮೇಲೆ ಇರಾನ್ ದಾಳಿ ಮಾಡಿದ್ದೇಕೆ?

ಅಕ್ಟೋಬರ್ 7ಕ್ಕೆ ಇಸ್ರೇಲ್ & ಹಮಾಸ್ ನಡುವಿನ ಗಾಜಾ ಯುದ್ಧದ ನಂತರ ಈ ಎಲ್ಲ ದಾಳಿಗಳು ನಡೆದವು. ಈ ಪ್ರದೇಶದಲ್ಲಿ ಇರಾನ್ ಬೆಂಬಲಿತ ಪಡೆಗಳು ಅಮೆರಿಕ ಹಾಗೂ ಇಸ್ರೇಲಿ ಪಡೆ ಸೇರಿ ವಾಣಿಜ್ಯ ಹಡಗು ಮೇಲೆ ದಾಳಿ ಮಾಡಲು ಆರಂಭಿಸಿದವು. ಪ್ರಾದೇಶಿಕ ಬಿಕ್ಕಟ್ಟು ಹೆಚ್ಚಾದಂತೆ ಭದ್ರತಾ ಸವಾಲು ಇರಾನ್‌ಗೆ ತಲೆನೋವಾಗಿದೆ. ಹೀಗಾಗಿ ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆ ನಡುವೆ ಇರಾನ್ ಜನವರಿ 15 & 16 ರಂದು ಪ್ರತೀಕಾರ ತೀರಿಸಿಕೊಂಡಿದೆ. ಇರಾಕ್, ಸಿರಿಯಾ ಹಾಗೂ ಪಾಕಿಸ್ತಾನದಲ್ಲಿ ದಾಳಿ ಮಾಡಿದೆ ಇರಾನ್ ಸೇನೆ.

Pakistan Military Takes Revenge For Iran Attack

ಶಿಯಾ VS ಸುನ್ನಿ ವಾರ್?

ನೆರೆಯ ಪಾಕಿಸ್ತಾನದ ಬಲೂಚಿಸ್ತಾನದ ಗಡಿ ಪಟ್ಟಣವಾದ ಪಂಜ್‌ಗುರ್‌ನಲ್ಲಿ ಇರಾನ್‌ನ ಹಠಾತ್ ಅಟ್ಯಾಕ್, ಡಿಸೆಂಬರ್ 15ರ ರಾಸ್ಕ್‌ನಲ್ಲಿ ನಡೆದ ದಾಳಿಯ ಜವಾಬ್ದಾರಿ ಹೊತ್ತಿದ್ದ ಜೈಶ್ ಅಲ್-ಅದ್ಲ್‌ನ ತರಬೇತಿ ಶಿಬಿರ ಗುರಿ ಮಾಡಿಕೊಂಡಿತ್ತು. ಜೈಶ್ ಅಲ್-ಅದ್ಲ್, ಸುನ್ನಿ ಇಸ್ಲಾಮಿಸ್ಟ್ ಗುಂಪು. ಇರಾನ್‌ ಪೂರ್ವ ಪ್ರಾಂತ್ಯದ ಸಿಸ್ತಾನ್-ಬಲೂಚಿಸ್ತಾನ್ ಪ್ರತ್ಯೇಕಿಸಲು ಪ್ರಯತ್ನಿಸುತ್ತದೆ ಎಂಬ ಆರೋಪ ಕೂಡ ಇದೆ. ಇದೇ ಕಾರಣಕ್ಕೆ ಪಾಕಿಸ್ತಾನದ ಜಾಗದ ಮೇಲೆ ಇರಾನ್ ಈಗ ದಾಳಿ ಮಾಡಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+